CONNECT WITH US  

ಹನಿಗಾರಿಕೆ

ಮತ್ತೆ ಬಂದಿದೆ ಐಪಿಎಲ್‌
ಬ್ಯಾಟು ಬಾಲ್‌ ಕದನ
ಟಿ-20 ಕ್ರಿಕೆಟ್‌ ಆಟ
ಇದಕ್ಕಿಂತಲೂ ರೋಚಕ
ರಾಜಕೀಯ ಪಕ್ಷಗಳ
ಚುನಾವಣಾ ಟಿಕೆಟ್‌ ಆಟ!
 ಎಚ್‌. ಡುಂಡಿರಾಜ್‌
 

ಖುಷಿ ಪಡುತ್ತಿದ್ದಾರೆ
ಒಬ್ಬರಮೇಲೊಬ್ಬರು
ಬೈಗುಳಗಳ ಕೆಸರು ಚೆಲ್ಲಿ
ಹುಣ್ಣಿಮೆ ಮುಗಿದರೂ
ಮುಗಿದಿಲ್ಲ ನೋಡಿ
ರಾಜಕಾರಣಿಗಳ ಹೋಳಿ !
 ಎಚ್‌. ಡುಂಡಿರಾಜ್‌

ಹೌದು ಪ್ರಿಯೆ ನಿನ್ನ 
ಮೂಗು ಸಂಪಿಗೆ 
ತುಟಿ ತೊಂಡೆಯ ಥರ 
ಕಣ್ಣು ಮಾತ್ರ ನನ್ನ 
ಎಲ್ಲ ಚಲನವಲನ 
ಕದ್ದು ಸೆರೆಹಿಡಿವ ಕೆಮರ !
 ಎಚ್‌. ಡುಂಡಿರಾಜ್‌

ಕುಟುಂಬ ರಾಜಕಾರಣ
ಮಾಡುತ್ತಾರೆ ಎನ್ನುವ
ಆರೋಪ ನಿಜವಲ್ಲ , ಸುಳ್ಳು
ವೇದಿಕೆಯಲ್ಲಿ ಸೇರಿದರೆ
ಅಪ್ಪ, ಮಗ, ಮೊಮ್ಮಕ್ಕಳು
ಅಲ್ಲಿ ಬರೀ ನಟನೆ, ಅಳು !
ಎಚ್‌. ಡುಂಡಿರಾಜ್‌

ಬೇಸಿಗೆಯ ಬಿಸಿ ಏರುತ್ತಿರುವಾಗ
ಬಂದಿದೆ ನೋಡಿ ಚುನಾವಣೆ
ಬಿಸಿಲ ಝಳಕ್ಕೆ ಕಾರ್ಯಕರ್ತರಿಗೆ
ಸನ್‌ ಸ್ಟ್ರೋಕ್‌ ಆದರೆ ,
ಮುದ್ದಿನ ಮಗ ಸೋತು ಅಪ್ಪನಿಗೆ
Sonಸ್ಟ್ರೋಕ್‌ ಆದರೆ
...

ಸುರಕ್ಷಿತವಾಗಿದ್ದ ತಮ್ಮ ಸಿಂ
ಹಾಸನವನ್ನು ವಂಶದ
ಕುಡಿಗಾಗಿ ಮಾಡಿದರು ತ್ಯಾಗ
ಪರಿಣಾಮವಾಗಿ ಈಗ
ಸಿಗುತ್ತಿಲ್ಲ ಗೌಡರಿಗೆ
ನಿಲ್ಲಲು ಸರಿಯಾದ ಜಾಗ!
 ಎಚ್‌. ಡುಂಡಿರಾಜ್‌

ನಗುನಗುತ್ತಲೇ ಸಿದ್ದು
ಪರಂಗೆ ತಿಳಿಸಿದರು-
ಜೆಡಿಎಸ್‌ ಪಾಲಾಯಿತು
ನಿಮ್ಮ ತುಮಕೂರು
ತುಮ್‌ ಕಾ ಊರು.
ಉಳಿಸಿಕೊಂಡೆ ಮೈಸೂರು
ನನ್ನ  Myಸೂರು!

ಎಚ್‌.ಡುಂಡಿರಾಜ್‌...

ಮತದಾರರ ಮನ ಗೆಲ್ಲಲು
ಪ್ರಯೋಗಿಸುತ್ತಾರೆ ಇವರು
ಅಳು ಎಂಬ ವರುಣಾಸ್ತ್ರ
ಕೊಡಬೇಕು ಇವರ ಪಕ್ಷಕ್ಕೆ
ಚುನಾವಣಾ ಆಯೋಗ
ಹೊಸ ಚಿನ್ಹೆ -ಕರವಸ್ತ್ರ!

 ಎಚ್‌. ಡುಂಡಿರಾಜ್‌

ಬೇಸಿಗೆ ಬಂತೆಂದರೆ ಸಾಕು
ಶುಭ ಕಾರ್ಯಗಳು ಶುರು
ಮದುವೆ, ಮುಂಜಿ ಇತ್ಯಾದಿ,
ಈ ಬಾರಿ ಅವುಗಳ ಜತೆ
ಏಳು ಹಂತಗಳಲ್ಲಿ ಮಹಾ
ಚುನಾವಣೆ ಎಂಬ
ಸಪ್ತಪದಿ!
 ಎಚ್‌. ಡುಂಡಿರಾಜ್...

ನಲ್ಲೆ ಹೇಳಿದಳು ""ಓ ನಲ್ಲ
ತೀರಿಸಲು ಆಗುವುದಿಲ್ಲ
ನೀ ಕೊಟ್ಟ ಮುತ್ತುಗಳ ಸಾಲವನ್ನು''
ನಲ್ಲ ಅಂದ ""ಪರವಾಗಿಲ್ಲ.
ಸಾಲಮನ್ನಾ ಮಾಡಿ
ಕೊಡುತ್ತೇನೆ ಹೊಸ ಲೋನು!
 ಎಚ್‌....

ರಾಜಭವನದಲ್ಲಿ
ಬೆಕ್ಕುಗಳ ಹಾವಳಿ
ವಿಧಾನ ಸೌಧದಲ್ಲಿ ಇಲಿ.
ಬೆಕ್ಕುಗಳನ್ನು ಹಿಡಿದು
ಬಿಟ್ಟರಾಯಿತು
ವಿಧಾನಸೌಧದ ಬಳಿ!
 ಎಚ್‌. ಡುಂಡಿರಾಜ್‌

ಇಬ್ಬರೂ ಎದ್ದಿದ್ದೆವು ಒಟ್ಟಿಗೆ
ವಾಕಿಂಗಿಗೆ ಹೊರೆಟೆವು ಜೊತೆಗೆ
ಒಂದು ಗಂಟೆ ಆಗುವಷ್ಟರಲ್ಲಿ
ನನಗೆ ಏದುಸಿರು, ಬೆವರು
ಮಿತ್ರ ನಿಜಕ್ಕೂ ಶಕ್ತಿಶಾಲಿ
ನಡೆಯುತ್ತಲೇ ಇದ್ದಾನೆ ಇನ್ನೂ...

ವಿದೇಶದಲ್ಲಿ ನಾರಿಯರ ಬಗ್ಗೆ
ನಡೆದ ಸೆಮಿನಾರಿಗೆ
ನಾರಿಯರ ಜತೆ ಗಂಡನಿಗೂ
ಉಚಿತ ವಸತಿ ಸಾರಿಗೆ
ದೇವರ ಮುಡಿಯಲ್ಲಿ ಜಾಗ
ಹೂವಿನ ಜತೆ ನಾರಿಗೆ!
 ಎಚ್‌. ಡುಂಡಿರಾಜ್‌

ಹೆಂಡತಿ ಹೇಳುತ್ತಿದ್ದಳು
ಅವಳ ಗೆಳತಿಯ ಬಳಿ-
ನಾರಿ ಶಕ್ತಿಗೆ
ಒಂದು ನಿದರ್ಶನ,
ಓಡೋಡಿ ಬರುತ್ತಾರೆ
ನನ್ನ ಗಂಡ 
ನಾ-ರೀ ಅಂದಾಕ್ಷಣ!
 ಎಚ್‌. ಡುಂಡಿರಾಜ್‌

ಮೈತ್ರಿ ಪಕ್ಷಗಳ ನಡುವೆ
ಸೀಟು ಹಂಚಿಕೆ ಸಮಸ್ಯೆ
ಆಗಬೇಕಾದರೆ ಇತ್ಯರ್ಥ,
ಮುಂದಿನ ಸಭೆಗೆ
ರೇವಣ್ಣನನ್ನು ಕೇಳಿ
ಇಟ್ಟುಕೊಳ್ಳಿ ಮುಹೂರ್ತ
ಎಚ್‌. ಡುಂಡಿರಾಜ್‌

ಶುರುವಾಗಿದೆ ಭಾರಿ
ಎಕ್ಸ್‌ ಚೇಂಜ್‌ ಆಫ‌ರ್‌
ಹಳೆಯದನ್ನು ಕೊಟ್ಟು
ಹೊಸದನ್ನು ಪಡೆಯಿರಿ
ಈ ವಿಶೇಷ ಕೊಡುಗೆ
ಕೆಲವೇ ದಿನಗಳವರೆಗೆ
ಕೇವಲ ಮರ ಗಿಡಗಳಿಗೆ !
 ಎಚ್‌....

ಬಿಎಸ್‌ವೈ ಮತ್ತು ಸಿದ್ದು

ಹಳೆಯ ಜಗಳ ಮರೆತು

ಹಂಚಿಕೊಂಡರು ಒಂದೇ ವೇದಿಕೆ

ಕಾರಣ ಬಹಳ ಸರಳ

ಇಬ್ಬರೂ ಮಾಜಿ ಸಿಎಂ

ಸಮಾನ ದುಃಖಿಗಳು ಅದಕ್ಕೆ!

*ಎಚ್‌....

ಇಬ್ಬರು ಹೆಂಡಿರಿದ್ದರೂ
ತಲೆ ಬಿಸಿ ಇಲ್ಲದೆ ಶಿವ
ತಣ್ಣಗಿದ್ದಾನೆ ಅದು ಹೆಂಗೆ?
ಕಾರಣ ಇಷ್ಟೆ
ತಲೆಯ ಮೇಲಿರುವ
ಎರಡನೆ ಮಡದಿ ಗಂಗೆ!

ಅಬ್ಬಾ ಅದೇನು ಮಾತು
ಚರ್ಚೆ, ಹಾಸ್ಯ, ನಗೆ
ಬಾಸ್‌ ಹೊರಗಿರುವಾಗ ,
ಆತ ಬರುತ್ತಿದ್ದ ಹಾಗೆ
ಕಚೇರಿ ಆಗುತ್ತದೆ
ಗಡಿ ಪ್ರದೇಶ ವಾಘಾ !
 ಎಚ್‌. ಡುಂಡಿರಾಜ್‌

"ಚುನಾವಣೆ ಮುಗಿವವರೆಗೆ
ಮನೆಗೆ ಹೋಗಬೇಡಿ'
ಕಾರ್ಯಕರ್ತರಿಗೆ ಬಿಎಸ್‌ವೈ ಕರೆ .
ಹಾಗೆ ಮಾಡಿದರೂ ಕೆಲವರು
ಚುನಾವಣೆಯಲ್ಲಿ ಸೋತು
ಮನೆಗೆ ಹೋಗುತ್ತಾರೆ !
 *ಎಚ್‌....

Back to Top