CONNECT WITH US  

ಭವಿಷ್ಯ

ಮೇಷ
ವರ್ಷಪೂರ್ತಿ ತಮ್ಮ ಆರೋಗ್ಯದ ಕಾಳಜಿಯನ್ನು ಸೂಕ್ಷ್ಮ ಮೀನ ರಾಶಿ ವ್ಯಕ್ತಿಗಳು ತೆಗೆದುಕೊಳ್ಳಬೇಕಾಗುತ್ತದೆ. ಅದರಲ್ಲೂ ಅಕ್ಟೋಬರ್‌ವರೆಗೆ ಹೆಚ್ಚು ಕಾಳಜಿ ವಹಿಸಬೇಕು. ಅದರ ನಂತರ ಅವರು ಜೀವನವನ್ನು ಉತ್ತಮವಾಗಿ ಅನುಭವಿಸುತ್ತಾರೆ. ಅತಿಯಾದ ಒತ್ತಡ ಮತ್ತು ಅತಿಯಾದ ಕೆಲಸ ನಿಮ್ಮನ್ನು ಸಂಕಷ್ಟಕ್ಕೆ ದೂಡುತ್ತದೆ. ಕೆಲಸದ ಸ್ಥಳದಲ್ಲಿ, ನಿರೀಕ್ಷಿತ ಫಲಿತಾಂಶಗಳನ್ನು ಪಡೆಯಲು ಹೆಚ್ಚುವರಿ ಪ್ರಯತ್ನ ಹಾಕುವುದರಲ್ಲಿ ನೀವು ನಂಬಿಕೆ ಇರಿಸಬೇಕು. ಹಿರಿಯರು ಬೇಡಿಕೆ ಇಡುತ್ತಾರೆ. ಹೀಗಾಗಿ ಒಂದೇ ಬಾರಿಗೆ ನೀವು ಈ ಎಲ್ಲವನ್ನೂ ನಿರ್ವಹಿಸಬೇಕಾಗುತ್ತದೆ. ಹಣಕಾಸಿನ ವಿಚಾರದಲ್ಲಿ ಜನವರಿಯು ಸ್ವಲ್ಪ ಸವಾಲಿನ ವಿಷಯವಾಗಿರುತ್ತದೆ. ಹೀಗಾಗಿ ಯಾವುದೇ ದೊಡ್ಡ ವಹಿವಾಟನ್ನು ಫೆಬ್ರವರಿಗೆ ಮುಂದೂಡಿ. ಅದರ ನಂತರ ನಿಮ್ಮ ಆದಾಯವು ಉತ್ತಮ ಹರಿವು ಕಾಣುತ್ತದೆ. ಯಾವುದೇ ಈಡೇರದ ಪ್ರಯಾಣ ಈ ಅವಧಿಯಲ್ಲಿ ನಡೆಯಬಹುದಾಗಿದೆ. ವೈವಾಹಿಕ ಜೀವನ ಉತ್ತಮವಾಗಿರುತ್ತದೆ ಮತ್ತು ನಿಮ್ಮ ಬಾಳಸಂಗಾತಿಯು ನಿಮಗೆ ಎಲ್ಲ ದೃಷ್ಟಿಯಿಂದಲೂ ನೆರವಾಗುತ್ತಾರೆ. ವೃತ್ತಿಪರ ಅಂಶಗಳಿಂದ ನಿಮ್ಮ ಪ್ರಸ್ತುತ ನಿವಾಸವನ್ನು ನೀವು ಬದಲಿಸಬಹುದು. ಮಕ್ಕಳು ತುಂಟತನ ಮಾಡುತ್ತಾರೆ ಮತ್ತು ಅವರನ್ನು ನೀವು ಉತ್ತಮ ದಿಕ್ಕಿಗೆ ಮಾರ್ಗದರ್ಶಿಸಬೇಕು. ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಅಡ್ಡದಾರಿಗಳನ್ನು ಕಂಡುಕೊಳ್ಳುತ್ತಾರೆ ಮತ್ತು ಅವರು ಮಾನಸಿಕವಾಗಿ ಅಸ್ಥಿರವಾಗುತ್ತಾರೆ. ಉತ್ತಮ ಫಲಿತಾಂಶಗಳನ್ನು ನೀಡುವ ಅಡ್ಡ ದಾರಿಗಳನ್ನು ನೀವೂ ಜೀವನದಲ್ಲಿ ಹಿಡಿಯಬಹುದು. ಆದರೆ ನಂತರ ಅವುಗಳನ್ನು ನಿಲ್ಲಿಸಬೇಕಿರುತ್ತದೆ. ಅಕ್ಟೋಬರ್ ನಂತರ, ನೀವು ಜೀವನದಲ್ಲಿ ಹೆಚ್ಚು ಧನಾತ್ಮಕ ಬದಲಾವಣೆಗಳನ್ನು ಕಂಡುಕೊಳ್ಳುತ್ತೀರಿ. ಒಟ್ಟಾರೆಯಾಗಿ, ಈ ವರ್ಷದಲ್ಲಿ ನಿಮ್ಮ ಆರೋಗ್ಯದ ಮೇಲೆ ನೀವು ಮೊದಲ ಆದ್ಯತೆ ನೀಡಬೇಕು ಮತ್ತು ಜೀವನದ ವಿವಿಧ ಹಂತದಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಬೇಕಿದೆ.
ವೃಷಭ
ನಿಮ್ಮ ಹಣಕಾಸು ಸ್ಥಿತಿ ಸುಧಾರಿಸುತ್ತದೆ ಮತ್ತು ನಿಮ್ಮ ವೈವಾಹಿಕ ಜೀವನ ಬೆಳಗುತ್ತದೆ. 2018 ವೃಷಭ ರಾಶಿ ಭವಿಷ್ಯದ ಪ್ರಕಾರ ಕೆಲವು ಸಣ್ಣ ಪ್ರವಾಸಗಳು ಉತ್ತಮ ಫಲಿತಾಂಶ ನೀಡುತ್ತವೆ. ನೀವು ತೀರ್ಥಯಾತ್ರಗೂ ತೆರಳಬಹುದು. ಮಕ್ಕಳು ಉತ್ತಮವಾಗಿ ಬೆಳೆಯುತ್ತಾರೆ. ನೀವು ವಿವಾದಗಳು ಮತ್ತು ಸಂಘರ್ಷಗಳಿಂದ ದೂರವಿರಬೇಕು. ಇದರಿಂದ ನಿಮಗೆ ಆರ್ಥಿಕ ನಷ್ಟವಾಗುತ್ತದೆ. ಮೊದಲ ಎರಡು ತಿಂಗಳಲ್ಲಿ, ಯಾವುದೇ ವಿವಾದಗಳಿಂದ ದೂರವಿರಿ. ಇದು ನಿಮ್ಮ ವ್ಯಕ್ತಿತ್ವಕ್ಕೆ ಹಾನಿ ಮಾಡುತ್ತದೆ. ಆದಾಗ್ಯೂ, ನೀವು ಜೀವನದ ಸವಾಲುಗಳನ್ನು ವೇಗವಾಗಿ ಎದುರಿಸಬೇಕಿದೆ. ಆರೋಗ್ಯ ಸಮಸ್ಯೆಯ ಸಾಧ್ಯತೆಯಿದೆ. ನೀವು ತೂಕ ಹೆಚ್ಚಿಸಿಕೊಳ್ಳುವ ಸಾಧ್ಯತೆಯಿರುವುದರಿಂದ ಆಹಾರದ ಮೇಲೆ ನಿಗಾ ಇರಲಿ.
ಮಿಥುನ
ವೈಯಕ್ತಿಕ ಹಾಗೂ ವೃತ್ತಿಪರ ಜೀವನದಲ್ಲಿ ಸಮತೋಲನ ಅಗತ್ಯವಿದೆ. ಮಿಥುನ ರಾಶಿಗೆ 2018ರ ರಾಶಿ ಭವಿಷ್ಯದ ಪ್ರಕಾರ ಮಕ್ಕಳು ತುಂಟರಾಗಿರುತ್ತಾರೆ. ಆದರೆ ಅವರು ಹೊಸ ಸಂಗತಿಗಳನ್ನು ತಿಳಿಯಲು ಆಸಕ್ತರಾಗಿರುತ್ತಾರೆ ಮತ್ತು ಅವರ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುತ್ತಾರೆ. ಅವಿವಾಹಿತರಾಗಿದ್ದರೆ ಡಿಸೆಂಬರ್‌ ಮಧ್ಯದವರೆಗೆ ನಿಮ್ಮ ಇಷ್ಟದ ಸಂಗಾತಿಯೊಂದಿಗೆ ವಿವಾಹವಾಗುತ್ತೀರಿ. ವರ್ಷದ ಕೊನೆಯ ತ್ರೈಮಾಸಿಕದ ಅವಧಿಯಲ್ಲಿ ವೆಚ್ಚ ಹೆಚ್ಚಾಗಬಹುದು. ನಿಮ್ಮ ಆರೋಗ್ಯದಲ್ಲಿ ಏರುಪೇರಾಗಬಹುದು ಮತ್ತು ಗಾಳಿ ಸಂಬಂಧಿ ರೋಗಗಳು, ಗಂಟು ನೋವು ಇತ್ಯಾದಿ ಸಂಬಂಧಿಸಿದಂತೆ ಸಮಸ್ಯೆಗಳನ್ನು ಎದುರಿಸಬಹುದು. ಅತಿಯಾದ ನಾರಿನಂಶವಿರುವ ಆಹಾರ ಸೇವಿಸಬೇಡಿ. ಈ ವರ್ಷದಲ್ಲಿ ವ್ಯಾಪಾರ ಹೆಚ್ಚು ಲಾಭ ತಂದುಕೊಡುತ್ತದೆ.
ಕಟಕ
ನೀವು ಗೌರವವನ್ನು ಗಳಿಸಬಹುದು ಮತ್ತು ವೃತ್ತಿ ಜೀವನವೂ ವೃದ್ಧಿಸಬಹುದು. ನಿಮ್ಮ ಸಾಮಾಜಿಕ ಸ್ಥಿತಿಗತಿಗಳು ಸುಧಾರಿಸಬಹುದು. ಯಾವುದೇ ದೀರ್ಘಕಾಲೀನ ರೋಗಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ನಿಮ್ಮ ಆರೋಗ್ಯ ಮೇಲೆ ಹೆಚ್ಚಿನ ಗಮನ ಇರಲಿ. ನಿಮ್ಮ ವೈವಾಹಿಕ ಜೀವನದಲ್ಲಿ ಖುಷಿ ಕಡಿಮೆಯಾದ ಭಾಸ ನಿಮಗೆ ಉಂಟಾಗಬಹುದು. ನಿಮ್ಮ ವೈವಾಹಿಕ ಜೀವನವನ್ನು ಸುಸ್ಥಿತಿಯಲ್ಲಿಡಲು ವಾಗ್ವಾದಗಳನ್ನು ದೂರವಿಡಬೇಕು. ವೆಚ್ಚ ಹೆಚ್ಚಾಗಬಹುದು. ಗಳಿಕೆಯೂ ಇರುತ್ತದೆ. ಆದರೆ ನಿಮ್ಮ ಹಣಕಾಸಿನಲ್ಲಿ ಅತಿಯಾದ ವೆಚ್ಚವು ಅಸಮತೋಲನ ಸೃಷ್ಟಿಸವುದರಿಂದ, ನೀವು ಅದನ್ನು ನಿರ್ವಹಿಸಬೇಕು. ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುತ್ತಾರೆ ಮತ್ತು ಮಕ್ಕಳು ಬದ್ಧತೆ ಮೆರೆಯುತ್ತಾರೆ.
ಸಿಂಹ
ಪ್ರೇಮ ಜೀವನವು ಸಮ್ಮಿಶ್ರ ಹಂತಗಳನ್ನು ಎದುರಿಸಬಹುದು. ಒಂದೆಡೆ, ಕೆಲವು ತಪ್ಪು ಗ್ರಹಿಕೆಗಳನ್ನು ನೀವು ಗಳಿಸಬಹುದು. ಇನ್ನೊಂದೆಡೆ ನಿಮ್ಮ ಪ್ರೀತಿಪಾತ್ರರೊಂದಿಗೆ ಮೆಚ್ಚುಗೆ ಗಳಿಸಬಹುದು. ನಿಮ್ಮ ಕ್ರಮಗಳು ನಿಮ್ಮನ್ನು ಯಶಸ್ಸಿನ ಕಡೆಗೆ ಕೊಂಡೊಯ್ಯುತ್ತದೆ. ಆದರೂ, ನೀವು ಆಲಸ್ಯವನ್ನು ದೂರವಿಡಬೇಕು. ವೈವಾಹಿಕ ಖುಷಿ ಹೆಚ್ಚಾಗಬಹುದು. ನಿಮ್ಮ ಜೀವನ ಮುಂದೆ ಸಾಗಿ, ಸನ್ನಿವೇಶಗಳು ನಿಮ್ಮ ಪರವಾಗಿರುತ್ತದೆ ಮತ್ತು ಹಣಕಾಸಿನ ವಿಚಾರದಲ್ಲಿ ನೀವು ಉತ್ತಮವಾಗಿರುವುದನ್ನು ನೀವು ಮನಗಾಣುತ್ತೀರಿ. ಮಕ್ಕಳು ಹೆಚ್ಚು ಶ್ರಮವಹಿಸಬೇಕು ಮತ್ತು ನೀವು ಅವರ ಕಾಳಜಿ ವಹಿಸಬೇಕು. ಹಾಗೆಯೇ ಅವರನ್ನು ನೀವು ಪ್ರೋತ್ಸಾಹಿಸಬೇಕು. ವಿದೇಶ ಪ್ರವಾಸದ ಅವಕಾಶಗಳು ಹೆಚ್ಚಿವೆ.
ಕನ್ಯಾ
ವರ್ಷಪೂರ್ತಿ ಆದಾಯದ ಒಳಹರಿವು ಉತ್ತಮವಾಗಿರುತ್ತದೆ. ಜನವರಿಯಲ್ಲಿ, ಕೆಲವು ಅನಿರೀಕ್ಷಿತ ಗಳಿಕೆ ಆಗಮಿಸುವ ಸಾಧ್ಯತೆಯಿದೆ. ಅಕ್ಟೋಬರ್ ನಂತರ, ಇದು ಇನ್ನೂ ಹೆಚ್ಚಾಗುತ್ತದೆ. ನಿಮ್ ಬಾಳಸಂಗಾತಿಯಿಂದ ನೀವು ಗಳಿಕೆ ಮಾಡಬಹುದು. ಆದರೆ ಅವರು ಅಕ್ಟೋಬರ್‌ವರೆಗೆ ಕಡಿಮೆ ಉತ್ಸಾಹ ಹೊಂದಿರುತ್ತಾರೆ ಅಥವಾ ಯಾವುದೇ ಆರೋಗ್ಯ ಸಮಸ್ಯೆಗಳು ಕಂಡುಬರಬಹುದು. ಆದರೂ, ಅವರಿಂದ ನೀವು ಸಂಪೂರ್ಣ ಬೆಂಬಲ ಪಡೆಯುತ್ತೀರಿ. ಕೆಲವು ಕಚೇರಿ ಕಾರಣಗಳಿಂದ ಅಥವಾ ಕೆಲಸದ ಕಾರಣಗಳಿಂದ ನೀವು ಕುಟುಂಬದಿಂದ ದೂರಹೋಗಬೇಕಾದೀತು. ಕುಟುಂಬದಲ್ಲಿ ಯಾವುದೇ ಪವಿತ್ರ ಆಚರಣೆಗಳು ನಡೆಯಬಹುದು. ಯಾವುದೇ ಹೊಸ ಸೇರ್ಪಡೆಯ ಸಾಧ್ಯತೆಯೂ ಇರಬಹುದು
ತುಲಾ
ಅಲಸ್ಯವನ್ನು ನಿವಾರಿಸಿಕೊಳ್ಳಬೇಕು. ಸಹೋದ್ಯೋಗಿಗಳು ನಿರ್ಲಿಪ್ತವಾಗಿರುತ್ತಾರೆ. ಹೀಗಾಗಿ, ನಿಮ್ಮ ಸಾಮರ್ಥ್ಯದ ಮೇಲೆಯೇ ನೀವು ಅವಲಂಬಿತರಾಗಿರಬೇಕು. ಜನವರಿಯಿಂದ ಮಾರ್ಚ್‌ವರೆಗೆ ನಿಮ್ಮ ಗಳಿಕೆಯಲ್ಲಿ ಏರಿಕೆ ಸಾಧ್ಯತೆಯೂ ಇದೆ. ಅದರ ನಂತರ, ನಿಮ್ಮ ಪ್ರಯತ್ನಗಳು ಹೊಸ ಸಾಧ್ಯತೆಗಳನ್ನು ತೆರೆಯಬಹುದು. ಕೌಟುಂಬಿಕ ಜೀವನದಿಂದ ನೀವು ಹೊರಗಿಡಲ್ಪಟ್ಟಂತೆ ಭಾಸವಾಗುವುದರಿಂದ ಬದ್ಧತೆ ಮತ್ತು ಖುಷಿ ಕಡಿಮೆ ಇರಬಹುದು ಮತ್ತು ನಿಮ್ಮ ಕೌಟುಂಬಿಕ ಜೀವನಕ್ಕೆ ಸಾಕಷ್ಟು ಸಮಯವನ್ನು ಮೀಸಲಿಡಲು ಸಾಧ್ಯವಾಗದೇ ಇರಬಹುದು. ಈ ಬಗ್ಗೆ ನೀವು ಗಮನಹರಿಸಬೇಕು. ಕಡಿಮೆ ದೂರದ ಪ್ರಯಾಣಗಲು ಮತ್ತು ಕೆಲವು ದೀರ್ಘ ಅಥವಾ ವಿದೇಶ ಪ್ರಯಾಣವನ್ನು ನೀವು ನಡೆಸಬಹುದಾಗಿದೆ.
ವೃಶ್ಚಿಕ
ನಿಮ್ಮ ವಿರೋಧಿಗಳ ಮೇಲೆ ನೀವು ಯಶಸ್ಸು ಸಾಧಿಸುತ್ತೀರಿ. ಹಣಕಾಸಿನ ವಿಚಾರದಲ್ಲಿ, ವರ್ಷದಲ್ಲಿ ಮತ್ತು ಅದರಲ್ಲೂ ವಿಶೇಷವಾಗಿ ಅಕ್ಟೋಬರ್‌ನಲ್ಲಿ ನೀವು ನಿಮ್ಮ ಹಣಕಾಸಿನ ಮೇಲೆ ಪರಿಣಾಮ ಬೀರುವ ಹೆಚ್ಚುವರಿ ವೆಚ್ಚವನ್ನು ಹೊಂದಿರುತ್ತೀರಿ. ಅಕ್ಟೋಬರ್‌ ನಂತರ, ಉತ್ತಮ ಫಲಿತಾಂಶಗಳು ಹೆಚ್ಚಾಗಿ ಕಂಡುಬರುತ್ತವೆ. ಹೂಡಿಕೆ ಮಾಡುವ ಮೊದಲು ನೀವು ಪರಿಶೀಲನೆ ಮಾಡಬೇಕಿರುತ್ತದೆ. ಉತ್ತಮ ಆದಾಯವನ್ನು ಗಳಿಸಲು ನೀವು ಹೆಚ್ಚು ಪರಿಶ್ರಮ ಪಡಬೇಕಿರುವ ವರ್ಷ ಇದಾಗಿದೆ. ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗಲು ಬಯಸಿದವರಿಗೆ ಈ ವರ್ಷ ಸೂಕ್ತವಾದದ್ದಾಗಿದೆ. ಮಕ್ಕಳು ಜೀವನವನ್ನು ಅನುಭವಿಸುತ್ತಾರೆ ಮತ್ತು ತುಂಟತನ ಮಾಡುತ್ತಾರೆ. ಗಮನ ಕೇಂದ್ರೀಕರಣ ಸಮಸ್ಯೆಯೂ ಇರಬಹುದು.
ಧನು
ನೀವು ಉತ್ತಮ ದಿಕ್ಕಿನಲ್ಲಿ ಸಾಗುತ್ತೀರಿ. ಹೀಗಾಗಿ, ಹಣಕಾಸು ನಿಮ್ಮ ಚಿಂತೆಗೆ ಕಾರಣವಾಗುವುದಿಲ್ಲ. ನಿಮ್ಮ ಗಳಿಕೆಯ ದಾರಿಗಳನ್ನು ಹೆಚ್ಚಿಸುವುದರತ್ತ ಗಮನ ಹರಿಸಬೇಕು ಮತ್ತು ಒಂದಕ್ಕಿಂತ ಹೆಚ್ಚು ಮೂಲದಿಂದ ನೀವು ಗಳಿಸಬಹುದಾಗಿದೆ. ಶನಿಯು ಕಠಿಣ ಪರಿಶ್ರಮಕ್ಕೆ ನಿಮ್ಮನ್ನು ತಯಾರು ಮಾಡುತ್ತಾನೆ. ಆದರೆ, ಅತಿಯಾಗಿ ಕೆಲಸ ಮಾಡಬೇಡಿ. ಇದರಿಂದ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಮಾರ್ಚ್‌ನಿಂದ ಮೇವರೆಗೆ ಸ್ವಲ್ಪ ಮಂಕಾದಂತೆ ಇರುತ್ತದೆ ಮತ್ತು ಅಕ್ಟೋಬರ್ ನಂತರ ಕೆಲವು ಆರೋಗ್ಯ ಸಮಸ್ಯೆ ಕಂಡುಬರಬಹುದು. ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಿ. ಮಕ್ಕಳು ಶ್ರಮಜೀವಿಗಳಾಗಿರುತ್ತಾರೆ ಮತ್ತು ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುತ್ತಾರೆ.
ಮಕರ
ನಿಮ್ಮ ಪ್ರೊಫೈಲ್ ಮತ್ತು ಗೌರವವು ಕೆಲಸದ ಸ್ಥಳದಲ್ಲಿ ಹೆಚ್ಚುತ್ತದೆ ಮತ್ತು ನೀವು ಹೊಸ ಅಸೈನ್‌ಮೆಂಟ್ ಪಡೆಯಬಹುದು ಅಥವಾ ಹೊಸ ಪ್ರಾಜೆಕ್ಟ್‌ ಪಡೆಯಬಹುದು. ವಿದ್ಯಾರ್ಥಿಗಳು ಶಿಕ್ಷಣದತ್ತ ಹಾಗೂ ಹೊಸ ಸಂಗತಿಗಳನ್ನು ಕಲಿಯುವುದರ ಕಡೆಗೆ ಹೆಚ್ಚು ಗಮನ ಹರಿಸುತ್ತಾರೆ. ಮಾರ್ಚ್‌ ಮತ್ತು ಮೇಯಲ್ಲಿ ಅವರು ತಮ್ಮ ಪರ ಅಲೆ ಇರುವುದರಿಂದ ಹಿರಿಯರೊಂದಿಗೆ ಉತ್ತಮ ಸಂಬಂಧವನ್ನು ನಿರ್ವಹಿಸುತ್ತಾರೆ. ಕೌಟುಂಬಿಕ ಜೀವನ ಉತ್ತಮವಾಗಿರುತ್ತದೆ ಮತ್ತು ಒಟ್ಟಾಗಿರುವಿಕೆಯು ಹೆಚ್ಚು ಸಾಮರ್ಥ್ಯವನ್ನು ನೀಡುತ್ತದೆ. ವೈವಾಹಿಕ ಜೀವನದಲ್ಲಿ ಕೆಲವು ತಪ್ಪುಗ್ರಹಿಕೆಗಳು ಕಂಡುಬರಬಹುದು. ಇದನ್ನು ನೀವು ನಿವಾರಿಸಬೇಕು. ಅಕ್ಟೋಬರ್‌ ನಂತರ, ನಿಮ್ಮ ವೈವಾಹಿಕ ಜೀವನ ಸುಧಾರಿಸುತ್ತದೆ ಮತ್ತು ನೀವು ವೈಯಕ್ತಿಕ ಜೀವನವನ್ನು ಖುಷಿಪಡುತ್ತೀರಿ. ಒಟ್ಟಾರೆಯಾಗಿ, ಜೀವನದಲ್ಲಿ ಮುಂದೆ ಸಾಗಲು ಮತ್ತು ನಿಮ್ಮ ದೌರ್ಬಲ್ಯವನ್ನು ಸುಧಾರಿಸಿಕೊಳ್ಳಲು ಉತ್ತಮ ವರ್ಷವಾಗಿದೆ.
ಕುಂಭ
ಹಿರಿಯರು ನಿಮ್ಮನ್ನು ಮೆಚ್ಚುತ್ತಾರೆ. ನೀವು ಪುಣ್ಯದ ಕೆಲಸಗಳಲ್ಲಿ ತೊಡಗುತ್ತೀರಿ. ವೈವಾಹಿಕ ಜೀವನದಲ್ಲಿ ಪ್ರೀತಿ ಮತ್ತು ಬಾಂಧವ್ಯದ ಭಾವ ಮೂಡುತ್ತದೆ. ಆದರೂ, ಮೊದಲ ಎರಡು ತಿಂಗಳು ಸ್ವಲ್ಪ ಸವಾಲಿನದಾಗಿರುತ್ತದೆ. ನಿಮ್ಮ ಬಾಳಸಂಗಾತಿಯಲ್ಲಿ ಕೆಲವು ಅನಾರೋಗ್ಯ ಅಥವಾ ವಾಗ್ವಾದಗಳು ಉಂಟಾಗಬಹುದು. ಪ್ರೇಮ ಸಂಬಂಧದಲ್ಲಿರುವವರು ಹೆಚ್ಚು ಗಮನ ಕೇಂದ್ರೀಕರಿಸಬೇಕಾಗುತ್ತದೆ ಮತ್ತು ಪರಸ್ಪರರು ಉತ್ತಮವಾಗಿ ಅರ್ಥ ಮಾಡಿಕೊಳ್ಳಬೇಕಿರುತ್ತದೆ. ವಿದ್ಯಾರ್ಥಿಗಳು ಕಠಿಣ ಪರಿಶ್ರಮ ವಹಿಸಬೇಕು ಮತ್ತು ಮಕ್ಕಳು ಸ್ವಲ್ಪ ಕಿರಿಕಿರಿ ಅನುಭವಿಸುತ್ತಾರೆ. ಆದರೆ ನಿಮ್ಮ ಪ್ರೀತಿ ಮತ್ತು ಕಾಳಜಿ ಅವರನ್ನು ಉತ್ತಮಗೊಳಿಸುತ್ತದೆ. ಒಟ್ಟಾರೆಯಾಗಿ ನಿಮಗೆ ಧನಾತ್ಮಕ ಹಾಗೂ ಪ್ರಗತಿಯ ವರ್ಷ ಇದಾಗಿರುತ್ತದೆ.
ಮೀನ
ವೈವಾಹಿಕ ಜೀವನ ಉತ್ತಮವಾಗಿರುತ್ತದೆ ಮತ್ತು ನಿಮ್ಮ ಬಾಳಸಂಗಾತಿಯು ನಿಮಗೆ ಎಲ್ಲ ದೃಷ್ಟಿಯಿಂದಲೂ ನೆರವಾಗುತ್ತಾರೆ. ವೃತ್ತಿಪರ ಅಂಶಗಳಿಂದ ನಿಮ್ಮ ಪ್ರಸ್ತುತ ನಿವಾಸವನ್ನು ನೀವು ಬದಲಿಸಬಹುದು. ಮಕ್ಕಳು ತುಂಟತನ ಮಾಡುತ್ತಾರೆ ಮತ್ತು ಅವರನ್ನು ನೀವು ಉತ್ತಮ ದಿಕ್ಕಿಗೆ ಮಾರ್ಗದರ್ಶಿಸಬೇಕು. ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಅಡ್ಡದಾರಿಗಳನ್ನು ಕಂಡುಕೊಳ್ಳುತ್ತಾರೆ ಮತ್ತು ಅವರು ಮಾನಸಿಕವಾಗಿ ಅಸ್ಥಿರವಾಗುತ್ತಾರೆ. ಉತ್ತಮ ಫಲಿತಾಂಶಗಳನ್ನು ನೀಡುವ ಅಡ್ಡ ದಾರಿಗಳನ್ನು ನೀವೂ ಜೀವನದಲ್ಲಿ ಹಿಡಿಯಬಹುದು. ಆದರೆ ನಂತರ ಅವುಗಳನ್ನು ನಿಲ್ಲಿಸಬೇಕಿರುತ್ತದೆ. ಅಕ್ಟೋಬರ್ ನಂತರ, ನೀವು ಜೀವನದಲ್ಲಿ ಹೆಚ್ಚು ಧನಾತ್ಮಕ ಬದಲಾವಣೆಗಳನ್ನು ಕಂಡುಕೊಳ್ಳುತ್ತೀರಿ. ಒಟ್ಟಾರೆಯಾಗಿ, ಈ ವರ್ಷದಲ್ಲಿ ನಿಮ್ಮ ಆರೋಗ್ಯದ ಮೇಲೆ ನೀವು ಮೊದಲ ಆದ್ಯತೆ ನೀಡಬೇಕು ಮತ್ತು ಜೀವನದ ವಿವಿಧ ಹಂತದಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಬೇಕಿದೆ.
Back to Top