CONNECT WITH US  

ಭವಿಷ್ಯ

ಮೇಷ
ಹಿರಿಯ ಅಧಿಕಾರಿಗಳಿಗೆ ಹಿರಿತನಕ್ಕೆ ಕುತ್ತು ಕಾಣಿಸಲಿದೆ. ವಿದ್ಯಾ ವ್ಯವಹಾರಗಳಲ್ಲಿ ಪ್ರತಿಕೂಲತೆ ಫ‌ಲಗಳು ಕಂಡು ಬಂದಾವು. ಯೋಗ್ಯ ವಯಸ್ಕರಿಗೆ ನೆಂಟಸ್ತಿಕೆಯ ಮಾತುಕತೆ ಫ‌ಲ ನೀಡಲಿದೆ. ದಿನಾಂತ್ಯ ಶುಭ.
ವೃಷಭ
ಸಹಕಾರಿ ಕೆಲಸದವರಿಗೆ ಆಗಾಗ ಅಡಚಣೆ ಗಳಿರುತ್ತವೆ. ಸಾಂಸಾರಿಕವಾಗಿ ಶುಭ ಶೋಭಾನಾದಿ ಕೆಲಸಗಳು ಕೈಗೂಡಲಿವೆ. ನಿರುದ್ಯೋಗಿಗಳಿಗೆ, ಯೋಗ್ಯ ವಯಸ್ಕರಿಗೆ ಶುಭವಾರ್ತೆ. ಅಚ್ಚರಿ ತಂದೀತು. ಕಿರು ಸಂಚಾರವಿದೆ.
ಮಿಥುನ
ರಾಜಕೀಯ ವರ್ಗದವರಿಗೆ ಮುನ್ನಡೆ ತೋರಿ ಬಂದರೂ ಕಾದು ನೋಡುವ ಪ್ರವೃತ್ತಿ ಒಳ್ಳೆಯದು. ವ್ಯಾಪಾರಿ ವರ್ಗದವರಿಗೆ ಆಗಾಗ ಸರಕಾರಿ ಅಧಿಕಾರಿಗಳ ಕಿರುಕುಳ ವಿರುತ್ತದೆ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಹಿನ್ನಡೆ ಇದೆ.
ಕಟಕ
ದಾಯಾದಿಗಳ ಸಮಸ್ಯೆಗಳು ರಾಜೀ ಮನೋಭಾವ ದಿಂದ ಪೂರ್ಣಗೊಳ್ಳಲಿವೆ. ನಿರುದ್ಯೋಗಿ ಗಳಿಗೆ ತಾತ್ಕಾಲಿಕ ಉದ್ಯೋಗ ಲಾಭವಿದೆ. ಯೋಗ್ಯ ವಯಸ್ಕರಿಗೆ ಕಂಕಣಬಲದ ಪ್ರಸ್ತಾವ ತಂದೀತು. ವೃತ್ತಿರಂಗದಲ್ಲಿ ಶಿಸ್ತು ಸಂಯಮವಿರಲಿ.
ಸಿಂಹ
ಗುರುಬಲದ ಪ್ರತಿಕೂಲತೆಯಿಂದ ಅನಾವಶ್ಯಕ ಸಮಸ್ಯೆಗಳು ಕಂಡು ಬಂದಾವು. ಗೃಹ ಬಳಕೆಯ ವಸ್ತುಗಳ ಖರೀದಿ ಧನವ್ಯಯಕ್ಕೆ ಕಾರಣವಾದೀತು. ಮಹಿಳೆಯರಿಗೆ ಪಿತ್ತ ಪ್ರಕೋಪದಿಂದ ಅನಾರೋಗ್ಯ ಕಂಡು ಬಂದೀತು.
ಕನ್ಯಾ
ಬುದ್ಧಿ ಜೀವಿಗಳಿಗೆ, ಕಲಾವಿದರಿಗೆ, ಕೀರ್ತಿಗಳಿಸುವ ಕಾಲವಿದು. ಕಾರ್ಯಕ್ಷೇತ್ರದಲ್ಲಿ ವಾದ, ವಿವಾದಗಳಿಗೆ ಅವಮಾನ ಪ್ರಸಂಗಗಳಿಗೆ ಕಾರಣರಾಗದಂತೆ ಜಾಗ್ರತೆ ವಹಿಸಿರಿ. ಯೋಗ್ಯ ವಯಸ್ಕರಿಗೆ ವಿವಾಹ ಪ್ರಸ್ತಾವ ಬಂದೀತು.
ತುಲಾ
ಮುಖ್ಯವಾಗಿ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಿರಿ. ಇತರರ ಸಹಕಾರದಿಂದ ನಿಮ್ಮ ಕಾರ್ಯ ಸಾಧನೆಯಾಗಲಿದೆ. ಯಾವುದೇ ಸಮಸ್ಯೆಗಳನ್ನು ವೈಯಕ್ತಿಕವಾಗಿ ಪರಿಹರಿಸಿಕೊಳ್ಳುವುದು ಉತ್ತಮ. ದಿನಾಂತ್ಯ ಶುಭ.
ವೃಶ್ಚಿಕ
ವಿದ್ಯಾರ್ಥಿಗಳಿಗೆ ಹೆಚ್ಚಿನ ವ್ಯಾಸಂಗಕ್ಕಾಗಿ ಆರ್ಥಿಕ ಸ್ಥಿತಿಯು ತಡೆ ಉಂಟು ಮಾಡೀತು. ಉದ್ಯೋಗರಂಗದಲ್ಲಿ ಸಹೋದ್ಯೋಗಿಗಳ ಅಸಹಕಾರ, ಕೆಲಸಗಾರರ ಒತ್ತಡ ಮನಸ್ಸಿಗೆ ಸಮಾಧಾನ ತರಲಾರದು. ಕಿರು ಸಂಚಾರವಿದೆ.
ಧನು
ಕೆಲವೊಂದು ಸಮಸ್ಯೆಗಳು ದುಡುಕಿನ ಕಾರಣದಿಂದ ಕಿರಿಕಿರಿ ಎನಿಸಿಲಿವೆ. ಯೋಗ್ಯ ವಯಸ್ಕರಿಗೆ ಕಂಕಣಬಲಕ್ಕೆ ಹಿನ್ನಡೆ ತಂದೀತು. ಹಿರಿಯ ವಯೋವೃದ್ಧರಿಗೆ ಶ್ರೀದೇವತಾದರ್ಶನ ಭಾಗ್ಯ ಒದಗಿ ಬರಲಿದೆ.
ಮಕರ
ನಿರುದ್ಯೋಗಿಗಳಿಗೆ, ಯೋಗ್ಯ ವಯಸ್ಕರಿಗೆ, ವಿದ್ಯಾರ್ಥಿಗಳಿಗೆ ಅನಿರೀಕ್ಷಿತ ರೂಪದಲ್ಲಿ ಶುಭವಾರ್ತೆ ಇರುತ್ತದೆ. ಆಗಾಗ ವಿಳಂಬಿತ ಆದಾಯ ಸಾಂಸಾರಿಕ ಸಮಸ್ಯೆಯನ್ನು ಸೃಷ್ಟಿಸಲಿದೆ. ಆರೋಗ್ಯದಲ್ಲಿ ಸುಧಾರಣೆ ಇದೆ.
ಕುಂಭ
ಭೂ ಸಂಬಂಧಿತ ಸಮಸ್ಯೆಗಳು ಅನಾವಶ್ಯಕ ಧನವ್ಯಯಕ್ಕೆ ಕಾರಣವಾದಾವು. ಎಲ್ಲಾ ರೀತಿಯ ಸಮಸ್ಯೆಗಳನ್ನು ನಿಭಾಯಿಸುವ ಆತ್ಮ ವಿಶ್ವಾಸ ನಿಮಗಿರಲಿ. ಮುಖ್ಯವಾಗಿ ಸ್ವಕಾರ್ಯ, ದೇವಕಾರ್ಯವು ನಿರಾತಂಕವಾಗಿ ನಡೆಯಲಿದೆ.
ಮೀನ
ಸಕಲಕಾರ್ಯಗಳ ಮುನ್ನಡೆಗೆ ಇದು ಸಕಾಲ. ಹಿರಿಯರಿಗೆ ದೂರ ಪ್ರವಾಸದ ಯೋಗವಿದೆ. ಆಗಾಗ ವ್ಯಾಪಾರ, ವ್ಯವಹಾರಗಳಲ್ಲಿ ಆರ್ಥಿಕವಾಗಿ ಸಮಸ್ಯೆಗಳು ಕಂಡು ಬಂದಾವು. ವಿದ್ಯಾರ್ಥಿಗಳಿಗೆ ಶುಭ ಫ‌ಲವಿದೆ.
Back to Top