CONNECT WITH US  

ಭವಿಷ್ಯ

ಮೇಷ
ಸಾಂಸಾರಿಕವಾಗಿ ಸಮಸ್ಯೆಗಳ ಚಿಂತೆ ಹೆಚ್ಚಲಿದೆ. ಮುಖ್ಯವಾಗಿ ಖರ್ಚಿನಲೆಕ್ಕಾ ಚಾರದಲ್ಲಿ ಗಮನವಿಟ್ಟು ಜಾಗ್ರತೆ ವಹಿಸಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಅಭ್ಯಾಸಬಲದ ಅಗತ್ಯವಿದೆ. ಅವಿವಾಹಿತರು ಬಂದ ಅವಕಾಶಗಳನ್ನು ಸದುಪಯೋಗಿಸಬೇಕು. ಆಗಾಗ ಆರೋಗ್ಯ ಭಾಗ್ಯದಲ್ಲಿ ಏರುಪೇರು ತೋರಿಬರುತ್ತದೆ. ಕಾಳಜಿ ಇರಲಿ. ಚಿಂತಿತ ಕೆಲಸಕಾರ್ಯಗಳಿಗೆ ಹೆಚ್ಚಿನ ಕಠಿಣ ಪರಿಶ್ರಮ ಬೇಕಾಗುತ್ತದೆ. ಗೃಹದಲ್ಲಿ ಶುಭಕಾರ್ಯಗಳಿಗೆ ಖರ್ಚು ತಂದೀತು. ಹಾಗೇ ಕಿರು ಸಂಚಾರ ದಿಂದ ಕಾರ್ಯಸಿದ್ಧಿಯಾಗಲಿದೆ. ಶುಭವಾರ: ಸೋಮ, ಬುಧ, ಶನಿವಾರ.
ವೃಷಭ
ದೈವಾನುಗ್ರಹ ಉತ್ತಮವಿದ್ದು ಸರ್ವಕಾರ್ಯಕ್ಕೆ ಅನುಕೂಲವಾಗಲಿದೆ. ವ್ಯಾಪಾರ, ವ್ಯವಹಾರಸ್ಥರಿಗೆ ನಾನಾ ರೀತಿಯಲ್ಲಿ ಲಾಭಾಂಶ ಹೆಚ್ಚಲಿದೆ. ಸಾಂಸಾರಿಕವಾಗಿ ನಾನಾ ರೀತಿಯ ಸುಖ, ಸಂತೋಷದ ಅನುಭವವಾಗುತ್ತದೆ. ಉದ್ಯೋಗದಲ್ಲಿ ಮುಂಭಡ್ತಿ ಮುಂದಿನ ಭವಿಷ್ಯಕ್ಕೆ ಪೂರಕವಾದೀತು. ಹಾಗೇ ನಾನಾ ರೀತಿ ಯಲ್ಲಿ ಧನಾಗಮನದಿಂದ ಹಿಂದಿನ ಋಣಭಾದೆ ನಿವಾರಣೆಯಾಗುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಫ‌ಲಿತಾಂಶ ಪ್ರಾಪ್ತಿಯಾಗಿ ಮುಂದಿನ ವಿದ್ಯಾಭ್ಯಾಸಕ್ಕೆ ಉತ್ತಮ ಅವಕಾಶಗಳು ಒದಗಿಬಂದೀತು. ವಾರಾಂತ್ಯದಲ್ಲಿ ದೂರ ಪ್ರವಾಸ ಯೋಗವಿದೆ. ಶುಭವಾರ: ಬುಧ, ಶನಿ, ಭಾನುವಾರ.
ಮಿಥುನ
ಕಾರ್ಯಕ್ಷೇತ್ರದಲ್ಲಿ ಶತ್ರುಗಳು ನಿಮ್ಮನ್ನು ಗಮನಿಸಲಿದ್ದಾರೆ. ಆರ್ಥಿಕ ವಾಗಿ ನಾನಾ ರೀತಿಯಲ್ಲಿ ಹಣಕಾಸಿನ ಪರಿಸ್ಥಿತಿ ಉನ್ನತಿಗೇರಲಿದೆ. ನಾನಾ ರೀತಿಯ ಸುಖಸಾಧನಗಳ ಖರೀದಿ ತಂದೀತು. ಅನಾವಶ್ಯಕವಾಗಿ ಅಪವಾದ ಭೀತಿ ತಂದೀತು. ಜಾಗ್ರತೆ ವಹಿಸಿರಿ. ಅವಿವಾಹಿತರ ಪ್ರಸ್ತಾವಗಳು ಕಂಕಣಬಲಕ್ಕೆ ಪೂರಕವಾದೀತು.ನೂತನ ಹೂಡಿಕೆ, ವ್ಯಾಪಾರ ವ್ಯವಹಾರಗಳಲ್ಲಿ ಲಾಭಾಂಶ ಹೆಚ್ಚಿಸಲಿದೆ. ಸಾಂಸಾರಿಕವಾಗಿ ದಾಂಪತ್ಯದಲ್ಲಿ ತಾಳ್ಮೆ , ಸಮಾಧಾನವಿರಬೇಕು. ಅನಿರೀಕ್ಷಿತವಾಗಿ ಆರೋಗ್ಯಕ್ಕೆ ಧಕ್ಕೆ ತಂದೀತು.ಹೆಚ್ಚಿನ ಕಾಳಜಿ ತೋರಿಸಬೇಕು. ಶುಭವಾರ: ಬುಧ, ಗುರು, ಶುಕ್ರವಾರ.
ಕಟಕ
ಸಾಂಸಾರಿಕವಾಗಿ ಮಕ್ಕಳಿಂದ - ಪತ್ನಿಯಿಂದ ಸುಖ, ಸಮಾಧಾನಗಳಿ ರುತ್ತದೆ. ಹೆಚ್ಚಿನ ಓಡಾಟಗಳಿಂದ ಆರೋಗ್ಯದಲ್ಲಿ ಪರಿಣಾಮ ಬೀರಲಿದೆ. ಅನಾವಶ್ಯಕವಾಗಿ ಧನವ್ಯಯವಾಗುತ್ತದೆ. ಕಾರ್ಯರಂಗದಲ್ಲಿ ಧೈರ್ಯ, ಸಾಹಸ ಕಾರ್ಯಗಳಿಂದ ಯಶಸ್ಸು ತಂದುಕೊಡಲಿದೆ. ಅವಿವಾಹಿತರಿಗೆ ಕಂಕಣಬಲದ ಯೋಗ ವಿದೆ. ದಾಯಾದಿಗಳಿಂದ ಶತ್ರುತ್ವಗಳು ಏರ್ಪಡುವ ಸಂಭವವಿರುತ್ತದೆ. ಜಾಗ್ರತೆ ವಹಿಸಿರಿ.ಶುಭ ಮಂಗಲ-ದೇವತಾ ಕಾರ್ಯಗಳು ನಡೆಯಲಿವೆ. ವಿದ್ಯಾರ್ಥಿಗಳ ಅಭ್ಯಾಸಬಲಕ್ಕೆ ಯಶಸ್ಸು ತಂದುಕೊಡಲಿದೆ. ಶುಭವಾರ: ಬುಧ, ಶನಿ, ಭಾನುವಾರ.
ಸಿಂಹ
ಆಗಾಗ ದೇಹಾರೋಗ್ಯದಲ್ಲಿ ವ್ಯತ್ಯಾಸಗಳು ತೋರಿಬಂದು ವೈದ್ಯಕೀಯ ಶುಶ್ರೂಷೆಗಳಿರುತ್ತದೆ. ವೃತ್ತಿರಂಗದಲ್ಲಿ ಯಾವುದೇ ರೀತಿಯ ನಿರ್ಣಯಗಳಿಗೆ ಉತ್ತಮ ಸಮಯವಾಗಲಾರದು. ಹಾಗೇ ಸಹೋದ್ಯೋಗಿಗಳ, ಮೇಲಾ ಧಿಕಾರಿಗಳ ಕಿರುಕುಳ ತಂದೀತು. ಸಾಂಸಾರಿಕವಾಗಿ ಪತ್ನಿಯ ಸೂಕ್ತ ಸಲಹೆಗಳು ಸಮಾಧಾನಕ ರವಾದಾವು. ಹಾಗೇ ಮಕ್ಕಳಿಂದ ಅನಾವಶ್ಯಕ ಖರ್ಚು-ವೆಚ್ಚಗಳಾಗಲಿದೆ. ಯೋಗ್ಯ ವಯಸ್ಕರಿಗೆ ಸಂಗಾತಿಯ ಬಗ್ಗೆ ಹೆಚ್ಚಿನ ಪ್ರಯತ್ನಬಲ ಹಾಗೂ ಹುಡುಕಾಟ ತೋರಿಬರುತ್ತದೆ. ಶುಭವಾರ: ಬುಧ, ಗುರು, ಶುಕ್ರವಾರ.
ಕನ್ಯಾ
ಮಾನಸಿಕವಾಗಿ ಅಸ್ಥಿರತೆ, ಭಯಭೀತಿಗಳಿಂದ ಆತಂಕವಾಗಲಿದೆ. ಬೆನ್ನು, ಸಂಧಿನೋವುಗಳಿಂದ ಅನಾರೋಗ್ಯ ತಂದೀತು. ಆಕಸ್ಮಿಕ ರೀತಿಯ ನಾನಾ ವಿಧದಲ್ಲಿ ಖರ್ಚುವೆಚ್ಚದ ಸಂದರ್ಭಗಳು ಒದಗಿಬಂದಾವು. ವ್ಯಾಪಾರ, ವ್ಯವಹಾರಿಕ ವಿಚಾರಗಳಲ್ಲಿ ಉತ್ತಮ ಸಾಧನೆಯಾಗುತ್ತದೆ. ದಾಂಪತ್ಯದಲ್ಲಿ ಹೊಂದಾಣಿಕೆ ಅಗತ್ಯವಿರುತ್ತದೆ. ಆಕಸ್ಮಿಕ ರೀತಿಯಲ್ಲಿ ಧನ ಸಂಚಯವಾಗುತ್ತದೆ. ಸಾಮಾಜಿಕ ಕಾರ್ಯದಲ್ಲಿಅವಮಾನ, ಅಪಕೀರ್ತಿ ಅನುಭವಿಸುವಂತಾಗುತ್ತದೆ. ವಾಹನ ಚಾಲನೆಗಳ ಬಗ್ಗೆ ಬಹುಜಾಗರೂಕರಾಗಿರಿ. ಶುಭವಾರ: ಸೋಮ, ಗುರು, ಶನಿವಾರ.
ತುಲಾ
ಎಲ್ಲ ರೀತಿಯ ಸುಖಭೋಗಗಳಿದ್ದರೂ ಮಾನಸಿಕವಾಗಿ ಸಮಾಧಾನ ವಿರದು. ಉದ್ವೇಗ ಸ್ಥಿತಿಯು ಆಗಾಗ ತೋರಿಬಂದು ಅಶಾಂತಿ ತರುತ್ತದೆ. ಉದ್ಯೋಗ ಕ್ಷೇತ್ರ ದಲ್ಲಿ ಉತ್ತಮ ಸಾಧನೆ ಇರುತ್ತದೆ. ಹಾಗೂ ಕಾರ್ಯಸಿದ್ಧಿ ಇರುತ್ತದೆ. ಆದರೂ ವೃತ್ತಿದ್ವೇಷ ಆಗಾಗ ಕಾಡಲಿದೆ. ಮಾತಿನಿಂದ ಕಲಹಕ್ಕೆ ಕಾರಣರಾಗದಿರಿ. ಆರ್ಥಿಕ ಪರಿಸ್ಥಿತಿಯು ಉತ್ತಮ. ಗೃಹದಲ್ಲಿ ಯಾ ಬಂಧುಬಾಂಧವರ ವಿವಾಹಾದಿ ಮಂಗಲ ಕಾರ್ಯಗಳ ಸಂಭ್ರಮ ತಂದೀತು. ಹಾಗೇ ನಾನಾ ರೀತಿಯ ಖರ್ಚಿನ ಸಂದರ್ಭಗಳು ಒದಗಿ ಬರುವುವು. ನಿರುದ್ಯೋಗಿಗಳಿಗೆ ಉದ್ಯೋಗದ ಅಲೆದಾಟ ಮುಗಿಯಲಿದೆ.ಶುಭವಾರ: ಮಂಗಳ, ಬುಧ, ಶುಕ್ರವಾರ.
ವೃಶ್ಚಿಕ
ಆಗಾಗ ದೇಹಾಯಾಸಗಳ ಅನುಭವವಾಗಲಿದೆ. ಜಾಗ್ರತೆ ವಹಿಸಿರಿ.ಬಂಧುಗಳ, ದಾಯಾದಿಗಳ ಅಸಹಕಾರ ಪ್ರವೃತ್ತಿ ಅನುಭವಕ್ಕೆ ಬರುತ್ತದೆ.ಧನಾ ಗಮನವಿದ್ದರೂ ಕೈಯಲ್ಲಿ ಕಾಸು ನಿಲ್ಲದು. ವೃತ್ತಿರಂಗದಲ್ಲಿ ಅಭಿವೃದ್ಧಿಯ ವಾತಾವರಣ ನಿರ್ಮಾಣವಾಗುತ್ತದೆ. ನೂತನ ಉದ್ಯೋಗ ಯಾ ಉದ್ಯೋಗದ ಬದಲಾವ ಣೆಗೆ ಇದು ಸಕಾಲ. ಸಾಂಸಾರಿಕವಾಗಿ ಹೆಂಡತಿಯ ಸಹಕಾರ-ಪ್ರೀತಿವಿಶ್ವಾಸಗಳು ನೆಮ್ಮದಿ ತಂದಾವು. ಕೋರ್ಟುಕಚೇರಿ ಕಾರ್ಯಗಳಲ್ಲಿ ಹಿನ್ನಡೆ ತೋರಿಬಂದು. ವಿದ್ಯಾರ್ಥಿಗಳಿಗೆ ಉತ್ತಮ ಸಾಧನೆ ಮುಂದಿನ ಅಭ್ಯಾಸಕ್ಕೆ ಪೂರಕವಾದೀತು.ಶುಭವಾರ: ಬುಧ, ಗುರು, ಶುಕ್ರವಾರ.
ಧನು
ವೃತ್ತಿರಂಗದಲ್ಲಿ ಸಮಸ್ಯೆಗಳು ಒಂದೊಂದಾಗಿ ಉಪಶಮನವಾದಾವು. ಆರ್ಥಿಕವಾಗಿ ಸ್ಥಿರತೆ ಇಲ್ಲವಾದರೂ ಸುಧಾರಿಸಿಕೊಂಡು ಹೋಗಬಹುದಾಗಿದೆ. ಸಾಂಸಾರಿಕವಾಗಿ ಪತ್ನಿಯೊಂದಿಗೆ ತಾಳ್ಮೆ, ಸಮಾಧಾನವಿರಲಿ. ಕಲಹಕ್ಕೆ ಕಾರಣ ರಾಗದಿರಿ. ಧಾರ್ಮಿಕ ಕ್ರಿಯೆಯಲ್ಲಿ ನಿರಾಸಕ್ತಿ ತೋರಿಬರಲಿದೆ. ಮಕ್ಕಳಿಂದ ಸುಖ, ಸಮಾಧಾನವಿರುತ್ತದೆ. ಆರೋಗ್ಯದ ಬಗ್ಗೆ ಜಾಗ್ರತೆ ಇರಲಿ. ಖರ್ಚುವೆಚ್ಚಗಳಲ್ಲಿ ಮಿತಿ ಇರಲಿ. ವಾರಾಂತ್ಯದಲ್ಲಿ ವ್ಯಾಪಾರ, ವ್ಯವಹಾರಗಳಲ್ಲಿ ಲಾಭಾಂಶದ ಆದಾಯವಿರುತ್ತದೆ. ನಿರೀಕ್ಷಿತ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಅಭಿವೃದ್ಧಿ ತೋರಿಬಂದರೂ ಉದಾಸೀನರಾಗದಿರಿ. ಶುಭವಾರ: ಗುರು, ಶುಕ್ರ, ಶನಿವಾರ.
ಮಕರ
ಗೃಹದಲ್ಲಿ ಹಾಗೂ ಸಾಂಸಾರಿಕವಾಗಿ ಆಗಾಗ ಅಸಮಾಧಾನಕರ ವಾತಾ ವರಣವಿರುತ್ತದೆ. ಆರ್ಥಿಕವಾಗಿ ನಾನಾ ರೀತಿಯಲ್ಲಿ ಖರ್ಚುವೆಚ್ಚಗಳಿರುತ್ತವೆ. ವ್ಯಾಪಾರ ವ್ಯವಹಾರಗಳಲ್ಲಿ ಸಮಾಧಾನ ತಂದರೂ ಜಾಗ್ರತೆ ಇರಲಿ. ಯೋಗ್ಯ ವಯಸ್ಕರಿಗೆ ಮನದ ಇಚ್ಛೆ ನೆರವೇರುತ್ತದೆ. ಸರಕಾರಿ ಕೆಲಸಕಾರ್ಯಗಳು ಲಾಭಕರವಾಗಲಿವೆ.ಕಂಟ್ರಾಕ್ಟ್ದಾರರಿಗೆ‌-ಕಮಿಶನ್‌ ವ್ಯವಹಾರಸ್ಥರಿಗೆ ನಿರೀಕ್ಷಿತ ರೀತಿಗಿಂತ ಅಧಿಕ ಲಾಭವಿದೆ. ವಾಹನಸಂಚಾರ ಹಾಗೂ ಚಾಲನೆಯಲ್ಲಿ ಜಾಗ್ರತೆಯಿರಲಿ. ದುಶ್ಚಟಗಳಿಗೆ ಬಲಿಯಾಗದಿರಿ. ಶುಭವಾರ: ಬುಧ, ಗುರು, ಶನಿವಾರ.
ಕುಂಭ
ಮುಖ್ಯವಾಗಿ ಮಾನಸಿಕವಾಗಿ ದೃಢ ನಿರ್ಧಾರವಿರಲಿ. ಹಾಗೇ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಸಂಚಾರವನ್ನು ಕಡಿಮೆ ಮಾಡಿರಿ. ಹೆಚ್ಚಿನ ಕೆಲಸ ಕಾರ್ಯಗಳಲ್ಲಿ ವಿರೋಧವನ್ನು ಅನುಭವಿಸಬೇಕಾಗುತ್ತದೆ. ಹೊಸ ಚಿಂತನೆ ಗಳಿಗೆ ಕಾಯುವಂತಾದೀತು. ವಿದ್ಯಾರ್ಥಿಗಳಿಗೆ ಉದಾಸೀನತೆ ಕಾಡಲಿದೆ. ಆರ್ಥಿಕವಾಗಿ ಯಾರನ್ನೂ ನಂಬದಿರಿ. ವಾರಾಂತ್ಯ ಹಂತ ಹಂತವಾಗಿ ನೆಮ್ಮದಿ ತೋರಿಬರುತ್ತದೆ. ಶ್ರೀದೇವರ ಅನುಗ್ರಹಕ್ಕಾಗಿ ಜಪಾನುಷ್ಠಾನವಿರಲಿ. ವೃತ್ತಿರಂಗದಲ್ಲಿ ವಾದ-ವಿವಾದಗಳ ಬಗ್ಗೆ ಜಾಗ್ರತೆ ತೋರಿಸಬೇಕು. ಶುಭವಾರ: ಸೋಮ, ಶುಕ್ರ, ರವಿವಾರ.
ಮೀನ
ನಾನಾ ರೀತಿಯಲ್ಲಿ ಧನಾಗಮನವಿದ್ದರೂ ಖರ್ಚುವೆಚ್ಚಗಳಲ್ಲಿ ಮಿತಿ ಇರಲಿ. ಸಾಂಸಾರಿಕವಾಗಿ ತುಸು ನೆಮ್ಮದಿ- ಸಮಾಧಾನ ಸಿಗಲಿದೆ. ಅನಿರೀಕ್ಷಿತ ಉದ್ಯೋಗ ಲಾಭದಿಂದ ಸಂತಸ ತಂದೀತು. ಸಾಮಾಜಿಕವಾಗಿ ಸ್ಥಾನಮಾನ- ಗೌರವಗಳಿಗೆ ಪಾತ್ರರಾಗುವಿರಿ. ದೇಹಾರೋಗ್ಯದ ಬಗ್ಗೆ ಹೆಚ್ಚಿನ ಗಮನವಿರಲಿ. ವಿದ್ಯಾರ್ಥಿಗಳ ಪ್ರಯತ್ನಬಲ ಉತ್ತಮ ಫ‌ಲಿತಾಂಶ ನೀಡಿದರೂ ಉದಾಸೀನತೆ ಆಗಾಗ ಕಾಡಲಿದೆ. ಅಧಿಕಾರಿ ವರ್ಗದವರಿಗೆ ಮುಂಬಡ್ತಿ ಹಾಗೂ ಯುವಜನಾಂಗ ದವರಿಗೆ ಯೋಗ್ಯ ಕಂಕಣಬಲ ಪ್ರಾಪ್ತಿಯಾಗಲಿದೆ. ಶುಭವಾರ: ಮಂಗಳ, ಗುರು, ಭಾನುವಾರ.
Back to Top