CONNECT WITH US  

ನಸುಕಿನ ನಸುನಗು

ಪಚ್ಚ: ಪಾಕೆಟ್‌ ಮನಿ ಅಂತ ನಿಂಗೆ 2 ಸಾವಿರ ನೋಟು ಕೊಟ್ರೆ ಏನ್ಮಾಡ್ತೀಯಾ?

ಮರಿಪಚ್ಚ: ನಿನ್ನ ನಂಬಕ್ಕಾಗಲ್ಲ. ಮೊದ್ಲು ಅಸಲಿ ನೋಟಾ ಅಂತ ಪರೀಕ್ಷೆ ಮಾಡ್ತೀನಿ!

ತತ್ವಜ್ಞಾನಿ ಪಚ್ಚನ ಹೊಸ ನೀತಿ ಬೋಧೆ

ಅಗರಬತ್ತಿಯಲ್ಲಿ ಎರಡು ವಿಧ ಒಂದು ದೇವರಿಗಾಗಿ ಒಂದು ಸೊಳ್ಳೆಗಾಗಿ ವಿಪರ್ಯಾಸ ಅಂದರೆ ದೇವರು ಬರೋದಿಲ್ಲ ಸೊಳ್ಳೆ ಹೋಗೋದಿಲ್ಲ

ಮದುವೆ ಮನೆಗೆ ಹೋಗಿ ಬಂದ ಪಚ್ಚನ ಕವನ

-ಒಂದು ಜೋಡಿ ಸೇರುವುದನ್ನು ನೋಡಲು ಬಂದು ಇನ್ನೊಂದು ಜೋಡಿಯನ್ನು ಕಳೆದುಕೊಂಡೆ.

ಮೇಷ್ಟ್ರು: ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ?
ಮರಿಪಚ್ಚ: ಯಾಕಾಗಲ್ಲ ಮೇಷ್ಟ್ರೆ? ಮೊದಲು ನೆಟ್ಟಗಿದ್ದ ನಮ್ಮಜ್ಜ ಈಗ ಬಾಗಿದ್ದಾರೆ!

ಮೇಷ್ಟ್ರು: ನಿಮ್ಮ ಮಗ ಗಣಿತದಲ್ಲಿ 25, ವಿಜ್ಞಾನದಲ್ಲಿ 24,ಸಮಾಜದಲ್ಲಿ 26... ಟೋಟಲ್‌ 75 ಅಂಕ ಗಳಿಸಿದ್ದಾನೆ...
ಪಚ್ಚ: ಟೋಟಲ್‌ನಲ್ಲಿ 75 ತೆಗೆದಿದ್ದಾ ನಲ್ಲ, ಖುಷಿಯಾಯ್ತು ಮೇಷ್ಟ್ರೆ!

 ಜೈಲರ್‌: ಏನಪ್ಪಾ ನಿನ್ನನ್ನು ನೋಡಲು ಯಾರೂ ಬರ್ತಾ ಇಲ್ವಲ್ಲಾ ಯಾಕೆ?
ಪಚ್ಚ: ಹೇಗೆ ಬರ್ತಾರೆ ಸಾರ್‌, ನನ್ನ ಇಡೀ ಕುಟುಂಬ ಇಲ್ಲೇ ಇದೆ.

ಗುಂಡ: ನಾವು ಗಂಡ ಹೆಂಡ್ತಿ ಬೆಳಗ್ಗೆ ಒಟ್ಟಿಗೇ ವಾಕಿಂಗ್‌ ಹೋಗ್ತೀವಿ..
ಪಚ್ಚ: ನಾವು ಹೋಗಲ್ಲ, ಬೆಳಗ್ಗೆ ಬೆಳಗ್ಗೆ ಮನೆ ಜಗಳ ಬೀದಿಗೆ ಬರುತ್ತೆ!

ಪಚ್ಚ: ಒಂದು ಇಂಜೆಕ್ಷನ್‌ ಕೊಟ್ಟು ಎರಡು ಡಜನ್‌ ಮಾತ್ರೆ ಕೊಟ್ಟಿದ್ದೀರಲ್ಲ.. ಯಾಕ್ರೀ ಹೀಗೆ..?
ಡಾಕ್ಟ್ರು  : ಇಂಜೆಕ್ಷನ್‌ ನೀವು ಬದ್‌ಕೋಕೆ, ಮಾತ್ರೆ ಕೊಟ್ಟಿದ್ದು ನಾನು ಬದ್ಕೋಕೆ!

ಪಚ್ಚ ಹಲ್ಲು ಕೀಳಿಸೋಕೆ ಹೋಗಿದ್ದ..

ಪಚ್ಚ: ನಿನ್ನೆ ಹೆಂಡ್ತಿ ಜೊತೆ ಜಗಳ ಆಡಿದ್ದೆ. ಅದ್ಕೆà ಹಲ್ಲು ಸುಲಭವಾಗಿ ಬಂತು ನೋಡಿ..!

ಡಾಕ್ಟ್ರು:...

ಡಾಕ್ಟ್ರು: ನಿಮ್ಮ ಮಂಡಿ ಸರ್ಜರಿ ಆದ ಮೇಲೆ ಕೆಲ ದಿನ ವಾಕರ್‌ ಉಪಯೋಗಿಸ್ಬೇಕಾಗುತ್ತೆ..!

ಪಚ್ಚ: ಪರ್ವಾಗಿಲ್ಲ.. ಡಾಕ್ಟ್ರೇ "ಜಾನಿ ವಾಕರ್‌' ಆಗ್ಬೋದಾ..?

ಪಚ್ಚನ ಹೆಂಡತಿ ರಸ್ತೆಗೆ ಓಡೋಡಿ ಬಂದು ಬಸ್‌ ನಿಲ್ಲಿಸಿದ್ಲು 
ಡ್ರೈವರ್‌: ಯಾಕೆ ಏನಾಯ್ತು..? ಬಸ್ಸಲ್ಲಿ ಬರ್ತೀರಾ..?
ಪಚ್ಚನ ಹೆಂಡತಿ: ಇಲ್ಲಾರೀ.. ಮಗು ಅಳ್ತಾ ಇದೆ ಒಂದ್ಸಲ ಪೋಂ.. ಪೋಂ.. ಹಾರನ್‌...

ಪಚ್ಚನ ಹೆಂಡತಿ: ನೀವು ಕಳ್ಳತನಕ್ಕೆ ಹೋಗೋವಾಗ ನಾನೂ ಬರ್ತೀನಿ..
ಪಚ್ಚ: ಯಾಕೇ?
ಪಚ್ಚನ ಹೆಂಡತಿ: ಕಳವು ಮಾಡಿ ತಂದ ಒಡವೆ, ಸೀರೆ ಡಿಸೈನು ಒಂಚೂರೂ ಚೆನ್ನಾಗಿಲ್ಲ!

ಪಚ್ಚ: ಯಾಕೋ ಅಳ್ತಾ ಇದ್ದೀಯಾ..? ಇಷ್ಟೊಂದು..
ಮರಿಪಚ್ಚ: 100 ರೂ. ಕೊಟ್ರೆ ಹೇಳ್ತೀನಿ...
ಪಚ್ಚ: ತಗೋ ನೂರು ರೂ..ಏನಾಯ್ತು ಹೇಳು..
ಮರಿಪಚ್ಚ: ಇದೇ ನೂರು ರೂ.ಗೇ ಅಳ್ತಾ ಇದ್ದಿದ್ದು! 

ಪಚ್ಚ ಕರೆಂಟಾಫೀಸಿಗೆ ಫೋನ್‌ ಮಾಡಿ: ಹಲೋ, ಸಾರ್‌..ಕರೆಂಟು ಎಷ್ಟೊತ್ತಿಗೆ ಬರುತ್ತೆ..?
ಕರೆಂಟಾಫೀಸು ಮಂದಿ: ಇಲ್ಲೂ ತುಂಬಾ ಕತ್ತಲೆ.. ಗಡಿಯಾರ ಕಾಣ್ತಿಲ್ಲ ಸಾರ್‌!

 ಗುಂಡ: ನಮ್ಮ ದೇಶ ವಿವಿಧ ಕಾರಣಕ್ಕೆ ಹಿಂದುಳಿದಿದೆ. ಮುಂದೆ ಹೋಗ್ತಾ ಇಲ್ಲ, ಯಾಕೆ?
ಪಚ್ಚ: ಹಿಮಾಲಯ ಪರ್ವತ ಅಡ್ಡ ಇದೆ ಅದಕ್ಕೆ!

ಅಡುಗೆಯವಳು: ಅಮ್ಮಾ ಪಲ್ಯ ಸೀದೋಯ್ತು..!

ಪಚ್ಚನ ಹೆಂಡತಿ: ನಮ್ಮನೆಯವ್ರು ಊಟ ಮಾಡಿದ್ರಾ..?

ಅಡುಗೆಯವಳು: ಹೌದು... ಅದನ್ನೇ ತಿಂದ್ರು...

ಪಚ್ಚ: ಯಾಕೋ... ಪರೀಕ್ಷೇಲಿ ಬರೀ 15 ಮಾರ್ಕು ಬಂದಿದೆ?

ಮರಿಪಚ್ಚ: ಪಾಸಾಗೋಕೆ ಬೇಕಿರೋ ಉಳಿದ 20 ಮಾರ್ಕು ಮುಂದಿನ ಬಾರಿ ತೆಗೀತೀನಿ!

ಗುಂಡ: ಮದ್ವೆ ಮೆರವಣಿಗೆ ವೇಳೆ ಮದುಮಗನನ್ನೇಕೆ ಕುದುರೆ ಮೇಲೆ ಕೂರಿಸ್ತಾರೆ?
ಪಚ್ಚ: ಓಡಿ ಹೋಗಲು ಆತನಿಗೆ ಅದೇ ಲಾಸ್ಟ್‌ ಚಾನ್ಸ್‌!

ಗುಂಡ: ಹೆಂಡತಿಗೂ, ಮೊಬೈಲ್‌ಗ‌ೂ ಏನು ವ್ಯತ್ಯಾಸ?
ಪಚ್ಚ: ಮೊಬೈಲನ್ನು ಸೈಲೆಂಟ್‌ ಮೋಡಲ್ಲಿಡಬಹುದು!

ಪಚ್ಚ: ಪಾಕೆಟ್‌ ಮನಿ ಅಂತ ನಿಂಗೆ 2 ಸಾವಿರ ನೋಟು ಕೊಟ್ರೆ ಏನ್ಮಾಡ್ತೀಯಾ?

ಮರಿಪಚ್ಚ: ನಿನ್ನ ನಂಬಕ್ಕಾಗಲ್ಲ. ಮೊದ್ಲು ಅಸಲಿ ನೋಟಾ ಅಂತ ಪರೀಕ್ಷೆ ಮಾಡ್ತೀನಿ!

Back to Top