CONNECT WITH US  

ಟ್ವಿಟಾಪತಿ

ಸಿಸಿಡಿಯಲ್ಲಿ ಕಾಫಿ ಕುಡಿದರೆ 100 ರೂ. ಕಳೆದುಕೊಳ್ಳುತ್ತೀರಿ, ಸ್ಟಾರ್‌ಬಕ್ಸ್‌ನಲ್ಲಿ ಕಾμ ಕುಡಿದ್ರೆ 250 ರೂ. ಕಳೆದುಕೊಳ್ತೀರಿ. ಆದರೆ, ಕರಣ್‌ ಜೊತೆ ಕಾಫಿ ಕುಡಿದರೆ ನಿಮ್ಮ ಭವಿಷ್ಯವನ್ನೇ ಕಳೆದುಕೊಳ್ತೀರಿ. ಇನ್ನಾದರೂ, ಕಾಫಿ ಬಿಟ್ಟು ಚಹಾ ಕುಡಿಯಿರಿ. ನೀವು ಪ್ರಧಾನಿಯೂ ಆಗಬಹುದು.
●ಪಗಲಾ ಪಟೇಲ್‌
2019ರ ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ವಿವಿಧ ರಾಜಕೀಯ ಪಕ್ಷಗಳು ಸುಳ್ಳು ಸುದ್ದಿಗಳ ಮಹಾಪೂರವನ್ನೇ ಹರಿಸಲು ಆರಂಭಿಸಿವೆ.
● ನಿಖೀಲ್‌ ವಾಗ್ಲೆ
ನ್ಯಾ.ಸಿಕ್ರಿ ಅವರು ಅತ್ಯಂತ ಬದ್ಧತೆಯುಳ್ಳ, ಪ್ರಾಮಾಣಿಕ ಹಾಗೂ ಕಠಿಣ ಪರಿಶ್ರಮದ ವ್ಯಕ್ತಿ. ಅವರ ಘನತೆ ಹಾಗೂ ಹೆಸರನ್ನು ಹಾಳುಮಾಡಲು ಹೊರಟಿರುವವರಿಗೆ ನಾಚಿಕೆಯಾಗಬೇಕು.
●ಮಾರ್ಕಂಡೇಯ ಕಾಟುj
ಸ್ವಾಮಿ ವಿವೇಕಾನಂದರ ಸಂದೇಶವನ್ನು ಭಾರತದಲ್ಲಿ ಯಾರು ಸಾರುತ್ತಾರೆ? ನರೇಂದ್ರ ಮೋದಿ, ರಾಹುಲ್‌ ಗಾಂಧಿ ಅಥವಾ ಇತರ ವಿರೋಧ ಪಕ್ಷದ ನಾಯಕರು? ಯಾರು ಯೋಗ, ವೇದಾಂತ ಮತ್ತು ವಿಶ್ವಕ್ಕೆ ಭಾರತದ ಸಂದೇಶವನ್ನು ಉತ್ತಮವಾಗಿ ಸಾರುತ್ತಾರೆ?
●ಡಾ. ಡೇವಿಡ್‌ ಫ್ರಾವ್‌ಲೆ
ಆಧಾರ್‌ ವಿಷಯದಲ್ಲಿ ಸುಪ್ರೀಂಕೋರ್ಟ್‌ ತೀರ್ಪು ನೀಡಿದ ನಂತರ ಯಾವುದೇ ಆಧಾರ್‌ ದತ್ತಾಂಶ ಸೋರಿಕೆ ವರದಿ ಕೇಳಿಬರುತ್ತಿಲ್ಲ. ಇದು ಆಕಸ್ಮಿಕವೇ?
●ಮನು ಜೋಸೆಫ್
2014ರಿಂದೀಚೆಗೆ ದೇಶದಲ್ಲಿ ಉಗ್ರರ ದಾಳಿ ನಡೆದಿಲ್ಲ ಎಂದಿರುವ ರಕ್ಷಣಾ ಸಚಿವರ ಹೇಳಿಕೆ ಅಚ್ಚರಿ ತಂದಿದೆ. ಪಠಾಣ್‌ಕೋಟ್‌, ಅಮರ್‌ನಾಥ್‌ ಯಾತ್ರೆ, ಉರಿ ಮತ್ತು ಇತರೆಡೆ ನಡೆದ ದಾಳಿಗಳಲ್ಲಿ ಒಟ್ಟು 400 ಸೈನಿಕರು ಸಾವನ್ನಪ್ಪಿದ್ದಾರೆ.
●ಅಹ್ಮದ್‌ ಪಟೇಲ್‌ ಗುಜರಾತ್‌ ಸಂಸದ
ತಪ್ಪು ಮಾಡಿದ್ದು ಪಾಂಡ್ಯಾ, ಆದರೆ ರಾಹುಲ್‌ಗ‌ೂ ಶಿಕ್ಷೆಯಾಕೆ? ಬಿಸಿಸಿಐಗೆ ತಪ್ಪು ಮಾಡಿದವರಿಗೆ ಶಿಕ್ಷೆ ಕೊಡುವುದಕ್ಕಿಂತ, ಶಿಕ್ಷೆ ಕೊಟ್ಟೆವೆಂದು ತೋರಿಸಿಕೊಳ್ಳುವುದೇ ಹೆಚ್ಚಾಯಿತೇ?
● ಶ್ರೀನಿಧಿ ತಿಲಕಾಂಬೋರು
ಆಕ್ಸಿಡೆಂಟಲ್‌ ಪ್ರೈಮ್‌ಮಿನಿಸ್ಟರ್‌ನಲ್ಲಿ ಹೊಸದೇನಿದೆ? ಮನಮೋಹನ್‌ ಹೇಗೆ ಆಡಳಿತ ನಡೆಸಿದರೆಂದು ಭಾರತೀಯರಿಗೆ ಗೊತ್ತಿಲ್ಲವೇನು?
●ಮದನ್‌ ಹೀರನ್‌
ಹಾರ್ದಿಕ್‌ ಪಾಂಡ್ಯಾನಂಥ ಮನಸ್ಥಿತಿಯ ಕೋಟ್ಯಂತರ ಜನರು ದೇಶದಲ್ಲಿದ್ದಾರೆ. ಹಳ್ಳಿಗಳಲ್ಲಿ, ನಗರಗಳಲ್ಲಿ ತುಂಬಿತುಳುಕುತ್ತಿದ್ದಾರೆ.
●ತೂಜಾನೇನಾ
ಸೋಲೆಂಬ ಗಾಯಕ್ಕೆ ಆತ್ಮವಿಶ್ವಾಸ ಮತ್ತು ಕಠಿಣ ಪರಿಶ್ರಮವೇ ಒಳ್ಳೆಯ ಮುಲಾಮು.
●ಲೈಫ್ಬ್ಯೂಟಿಫ‌ುಲ್‌
ಬಿಜೆಪಿ ಮತ್ತು ಕಾಂಗ್ರೆಸ್‌ ಪರಮಪವಿತ್ರರ ಪಾತ್ರ ನಿರ್ವಹಿಸುವುದನ್ನು ನಿಲ್ಲಿಸಬೇಕು. ಎರಡೂ ಪಕ್ಷಗಳೂ ಜನರನ್ನು ಯಾಮಾರಿಸುತ್ತಿವೆ ಎನ್ನುವುದು ಮತದಾರರಿಗೆ ತಿಳಿದಿದೆ.
●ಪ್ರಸೂನ್‌ ದಿಲ್ಹಾನ್‌
ಹಾರ್ದಿಕ್‌ ಪಾಂಡ್ಯಾ ಕ್ಷಮೆ ಕೇಳಬೇಕು ಎನ್ನುವುದೇನೋ ಸರಿ. ಆದರೆ ಕರಣ್‌ ಜೋಹರ್‌ ಕಥೆಯೇನು? ಆ ವ್ಯಕ್ತಿಯನ್ನು ಕ್ಷಮಿಸಿಬಿಡಬೇಕೇ?
●ಕರಣ್‌ ಜೋಷಿ
ಸಮಯವೆನ್ನುವುದು ಹಣವಿದ್ದಂತೆ, ಅದನ್ನು ಹೇಗೆ ಬಳಸಿಕೊಳ್ಳುತ್ತೀರಿ ಎನ್ನುವುದು ಮುಖ್ಯ.
●ಟ್ರೂಕೋಟ್ಸ್‌
ಸಾಲಮನ್ನಾ ಎನ್ನುವುದು ರೈತರ ಸಮಸ್ಯೆಗೆ ದೀರ್ಘಾವಧಿ ಪರಿಹಾರವೇನು? ಕಾಂಗ್ರೆಸ್‌ ಯಾರ ದಿಕ್ಕುತಪ್ಪಿಸಲು ಪ್ರಯತ್ನಿಸುತ್ತಿದೆ?
●ಪ್ರತ್ಯಾಶಾ ಮುಖರ್ಜಿ
ಕೇಂದ್ರ ಸರ್ಕಾರದ ಮೀಸಲಾತಿ ನಿರ್ಣಯವನ್ನು ಸಮಯಸಾಧಕತನ ಎಂದು ಹಂಗಿಸುತ್ತಿರುವವರು, ಈ ನಿರ್ಣಯದಿಂದ ಭಾರತದ ಬಹುದೊಡ್ಡ ವರ್ಗವೊಂದಕ್ಕೆ ಅನುಕೂಲವಾಗಲಿದೆ ಎನ್ನುವುದನ್ನು ಕಡೆಗಣಿಸುತ್ತಿರುವುದೇಕೆ?
●ಸುಜಿತ್‌ ವ್ಯಾಸ್‌

Pages

Back to Top