CONNECT WITH US  

ಕಿರುತೆರೆ ನಟ ಕಿರಣ್‌ ರಾಜ್‌ ವಿರುದ್ದ ಮತ್ತೊಂದು ದೂರು

ಬೆಂಗಳೂರು: ಕಿರುತೆರೆ ನಟ ಕಿರಣ್‌ ರಾಜ್‌ ವಿರುದ್ಧ ಕಿರುಕುಳ ಮತ್ತು ಹಲ್ಲೆ ಪ್ರಕರಣ ದಾಖಲಿಸಿದ್ದ ಮುಂಬೈ ಮೂಲದ ಮಾಡೆಲ್‌ ಯಾಸ್ಮಿನ್‌ ಇದೀಗ ಆತನ ವಿರುದ್ಧ ಪಾಸ್‌ಪೋರ್ಟ್‌ ವಿಚಾರಕ್ಕೆ ಮತ್ತೊಂದು ದೂರು ನೀಡಿದ್ದಾರೆ.

ಯಾಸ್ಮಿನ್‌ ರಾಜರಾಜೇಶ್ವರಿನಗರ ಪೊಲೀಸ್‌ ಠಾಣೆಯಲ್ಲಿ ಕಿರಣ್‌ ರಾಜ್‌ ವಿರುದ್ಧ ಪ್ರಕರಣ ದಾಖಲಿಸಿದ್ದು, ಸಿನಿಮಾ ಕ್ಷೇತ್ರದಲ್ಲಿ ಒಳ್ಳೆಯ ಅವಕಾಶ ಕೊಡಿಸುತ್ತೇನೆ ಎಂದು ಪಾಸ್‌ಪೋರ್ಟ್‌ ಪಡೆದು ಈಗ ಕೊಡದೆ ಸತಾಯಿಸುತ್ತಿದ್ದಾನೆ ಎಂದು ಆರೋಪಿಸಿದ್ದಾರೆ.

ತನ್ನಿಂದ ಪಾಸ್‌ಪೋರ್ಟ್‌ ಪಡೆದಿದ್ದ ಕಿರಣ್‌ ರಾಜ್‌ ಈಗ ಅದನ್ನು ವಾಪಸ್‌ ಮಾಡುತ್ತಿಲ್ಲ. ಅಲ್ಲದೆ, ಆತ ಮತ್ತು ಅತನ ಕುಟುಂಬ ಸದಸ್ಯರು ಕಿರುಕುಳ ನೀಡುತ್ತಿದ್ದಾರೆ. ವಿದೇಶಕ್ಕೆ ಚಿತ್ರೀಕರಣಕ್ಕೆಂದು ಹೋಗಬೇಕಾದ ಕಾರಣ ಪಾಸ್‌ಪೋರ್ಟ್‌ ನೀಡುವಂತೆ ಕೇಳಿದಾಗ ಕಿರಣ್‌ರಾಜ್‌ ಹಣದ ಬೇಡಿಕೆ ಇಟ್ಟು ಜೀವ ಬೆದರಿಕೆ ಹಾಕಿದ್ದಾನೆ. ಇದರಿಂದಾಗಿ ನನಗೆ ಕೆಲಸ ಕೈ ತಪ್ಪಿದೆ ಎಂದು ಯಾಸ್ಮಿನ್‌ ಆರೋಪಿದ್ದಾರೆ.

ದ್ವೇಷದ ಕಾರಣದಿಂದ ಸರಿಯಾದ ಸಮಯಕ್ಕೆ ಪಾಸ್‌ಪೋರ್ಟ್‌ ಕೊಡದೆ ಕೆಲಸಕ್ಕೆ ತೊಂದರೆ ಕೊಟ್ಟಿದ್ದಾನೆ ಎಂದು ಕಿರಣ್‌ರಾಜ್‌ ವಿರುದ್ಧ ಯಾಸ್ಮಿನ್‌ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ಆತನ ವಿರುದ್ಧ ಐಪಿಸಿ 420, 506 ಹಾಗೂ 384 ಅಡಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಇಂದು ಹೆಚ್ಚು ಓದಿದ್ದು

Trending videos

Back to Top