CONNECT WITH US  

ಎಂಎಂಸಿಎಚ್‌ನಿಂದ ಮತದಾನ ಜಾಗೃತಿ

ಈಗಾಗಲೇ ಚುನಾವಣೆಗೆ ಸಂಬಂಧಿಸಿದಂತೆ, ಚುನಾವಣಾ ಸುತ್ತಮುತ್ತಲ ಅಂಶಗಳನ್ನಿಟ್ಟುಕೊಂಡು ಸಿನಿಮಾಗಳು ಬಂದಿವೆ. ಈಗ "ಎಂಎಂಸಿಎಚ್‌' ಚಿತ್ರ ಕೂಡಾ ಚುನಾವಣೆ ಮೇಲೆ ಕಣ್ಣಿಟ್ಟಿದೆ. ಹಾಗಂತ ಚಿತ್ರದ ಕಥೆಗೂ ಚುನಾವಣೆಗೂ ಯಾವುದೇ ಸಂಬಂಧವಿಲ್ಲ. ಬದಲಾಗಿ ಮತದಾನದ ಕುರಿತಾದ ಜಾಗೃತಿ ಮೂಡಿಸಲು ಚಿತ್ರತಂಡ ಮುಂದಾಗಿದೆ.

ಹೌದು, ನಾಯಕಿಯರೇ ಪ್ರಧಾನವಾಗಿರುವ "ಎಂಎಂಸಿಎಚ್‌' ಎಂಬ ಚಿತ್ರವೊಂದು ಬರುತ್ತಿರುವ ವಿಚಾರ ನಿಮಗೆ ಗೊತ್ತಿರಬಹುದು. ಈ ಚಿತ್ರವನ್ನು "ಮುಸ್ಸಂಜೆ' ಮಹೇಶ್‌ ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ಮೇಘನಾ ರಾಜ್‌, ಸಂಯುಕ್ತಾ ಹೊರನಾಡು, ಪ್ರಥಮಾ, ನಕ್ಷತ್ರ ಹಾಗೂ ರಾಗಿಣಿ ನಟಿಸುತ್ತಿದ್ದಾರೆ.

ಈಗ ಚಿತ್ರತಂಡ ಎಲ್ಲರೂ ಮತದಾನ ಮಾಡಿ ಎನ್ನುತ್ತಾ ಮತದಾನದ ಕುರಿತು ಜಾಗೃತಿ ಮೂಡಿಸಲು ಮುಂದಾಗಿದೆ. ಚಿತ್ರದಲ್ಲಿ ನಟಿಸಿದವರಿಂದ ಮತದಾನದ ಜಾಗೃತಿ ಮೂಡಿಸುವುದರಿಂದ ಯುವ ಜನಾಂಗದ ಮೇಲೆ ಪರಿಣಾಮ ಬೀರಬಹುದು ಎಂಬ ಕಾರಣಕ್ಕೆ ಈ ಕಾನ್ಸೆಪ್ಟ್ ಮಾಡಿದೆ ಚಿತ್ರತಂಡ. ಕೇವಲ ಕಲಾವಿದರಷ್ಟೇ ಅಲ್ಲದೇ, ಚಿತ್ರಕ್ಕೆ ದುಡಿದ ತಾಂತ್ರಿಕ ವರ್ಗದವರನ್ನು ಕೂಡಾ ಈ ಮತದಾನ ಜಾಗೃತಿಯಲ್ಲಿ ಬಳಸಿಕೊಳ್ಳಲಾಗಿದೆಯಂತೆ.

ಚುನಾವಣೆಗೆ ಒಂದೆರಡು ದಿನ ಇರುವಾಗ ಜಾಗೃತಿಗೆ ಸಂಬಂಧಪಟ್ಟ ಟೀಸರ್‌ ಹಾಗೂ ಪೋಸ್ಟರ್‌ ಅನ್ನು ಬಿಡುಗಡೆ ಮಾಡುವ ಆಲೋಚನೆ ಚಿತ್ರತಂಡಕ್ಕಿದೆ. ಈ ಚಿತ್ರವನ್ನು ಎಸ್‌. ಪುರುಷೋತ್ತಮ್, ಜಾನಕಿರಾಮ್ ಹಾಗೂ ಅರವಿಂದ್‌ ಜೊತೆಗೂಡಿ ನಿರ್ಮಾಣ ಮಾಡಿದ್ದಾರೆ. 


ಇಂದು ಹೆಚ್ಚು ಓದಿದ್ದು

Trending videos

Back to Top