CONNECT WITH US  

ಆದಿತ್ಯ ಹೊಸ ಅಧ್ಯಾಯ

"ಚಕ್ರವರ್ತಿ' ಸಿನಿಮಾದಲ್ಲಿ ಆದಿತ್ಯ ಪೊಲೀಸ್‌ ಆಫೀಸರ್‌ ಪಾತ್ರ ಮಾಡಿದ್ದರು. ಆ ಚಿತ್ರದ ನಂತರ ಆದಿತ್ಯ ಕಡೆಯಿಂದ ಯಾವುದೇ ಸಿನಿಮಾದ ಸುದ್ದಿ ಇರಲಿಲ್ಲ. ಈಗ ಆದಿತ್ಯ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ. ಅಂಡರ್‌ವರ್ಲ್ಡ್ ಹಿನ್ನೆಲೆಯ ಕಥೆಗಳೇ ಆದಿತ್ಯ ಅವರನ್ನು ಹುಡುಕಿ ಬಂದಿದ್ದರಿಂದ ಸಾಕಷ್ಟು ಕಥೆಗಳನ್ನು ಆದಿತ್ಯ ನಿರಾಕರಿಸಿದ್ದರು. ಬೇರೆ ತರಹದ ಕಥೆಗಳಿಗಾಗಿ ಎದುರು ನೋಡುತ್ತಿದ್ದ ಆದಿತ್ಯ ಅವರಿಗೆ ಈಗ ಅವರ ಬಯಸಿದಂತಹ ಕಥೆ ಸಿಕ್ಕಿದೆ. ಅದು "ಮುಂದುವರೆದ ಅಧ್ಯಾಯ'.

ಹೌದು, ಇದು ಆದಿತ್ಯ ಅಭಿನಯದ ಹೊಸ ಚಿತ್ರ. ಅವರ ಹುಟ್ಟುಹಬ್ಬದ ಅಂಗವಾಗಿ ಚಿತ್ರದ ಪೋಸ್ಟರ್‌ ಬಿಡುಗಡೆಯಾಗಿದೆ. ಚಿತ್ರವನ್ನು ಬಾಲು ಚಂದ್ರಶೇಖರ್‌ ನಿರ್ದೇಶಿಸುತ್ತಿದ್ದಾರೆ. ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ದುಡಿದ ಅನುಭವ ಇವರಿಗಿದೆ. ಈಗ ಆ ಅನುಭವದೊಂದಿಗೆ "ಮುಂದುವರೆದ ಅಧ್ಯಾಯ' ಮಾಡುತ್ತಿದ್ದಾರೆ. 

ಇದೊಂದು ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾವಾಗಿದ್ದು, ಹೊಸ ಕಥೆಯನ್ನು ಇಲ್ಲಿ ಹೇಳಲು ಹೊರಟಿದ್ದಾರಂತೆ. ಚಿತ್ರದಲ್ಲಿ ಆದಿತ್ಯ ಅವರ ಪಾತ್ರ ಹಾಗೂ ಗೆಟಪ್‌ ಎರಡೂ ವಿಭಿನ್ನವಾಗಿರಲಿದೆಯಂತೆ. ಜೂನ್‌ನಿಂದ ಚಿತ್ರೀಕರಣ ಆರಂಭವಾಗಲಿದೆ. ಈ ಚಿತ್ರವನ್ನು ಕಣಜ ಎಂಟರ್‌ಪ್ರೈಸಸ್‌ ನಿರ್ಮಿಸುತ್ತಿದೆ. ಚಿತ್ರಕ್ಕೆ ದಿಲೀಪ್‌ ಚಕ್ರವರ್ತಿ ಛಾಯಾಗ್ರಹಣ, ಜಾನಿ ಮತ್ತು ನಿತಿನ್‌ ಸಂಗೀತ, ಶ್ರೀಕಾಂತ್‌ ಸಂಕಲನವಿದೆ. ಚಿತ್ರಕ್ಕೆ ನಾಯಕಿ ಸೇರಿದಂತೆ ಇತರ ಅಂಶಗಳು ಇನ್ನಷ್ಟೇ ಅಂತಿಮವಾಗಬೇಕಿದೆ. 


ಇಂದು ಹೆಚ್ಚು ಓದಿದ್ದು

Trending videos

Back to Top