CONNECT WITH US  

ಅಪ್ಪ ಬೈದರು ಎಂದು ಕಿಟಕಿ ಸಜ್ಜ  ಮೇಲೆ ಮಲಗಿದ

ಈಗಿನ ಕಾಲದ ಯಾವ ಪೋಷಕರಿಗಾದರೂ ಕೇಳಿ, ಮಕ್ಕಳನ್ನು ಬೆಳೆಸುವುದು ಎಷ್ಟು ಕಷ್ಟ ಎಂದು ವಿವರಿಸುತ್ತಾರೆ. ಚೀನದಲ್ಲಿ ಅಪ್ಪ ಬೈದರು ಎಂದು 12 ವರ್ಷ ವಯಸ್ಸಿನ ಮಗ ಅಪಾರ್ಟ್‌ಮೆಂಟ್‌ನ 5ನೇ ಹಂತದ ಮಹಡಿಯ ಕಿಟಕಿ ಸಜ್ಜ ಮೇಲೆ ಮಲಗಿ ಪೋಷಕರನ್ನು ಹೆದರಿಸಿದ್ದಾನೆ.

ಎಷ್ಟು ಹೊತ್ತಾದರೂ ಮಗ ಹಾಸಿಗೆ ಬಿಟ್ಟು ಏಳದೇ ಇದ್ದುದರಿಂದ ಕೋಪಗೊಂಡ ಅಪ್ಪ, ನೀನು ಇಷ್ಟು ಸೋಮಾರಿಯಾದರೆ ಹೇಗೆ ಎಂದು ಗದರಿದ್ದರಂತೆ. ಬೈದ ಅಪ್ಪನಿಗೆ ಬುದ್ಧಿ ಕಲಿಸುವ ಸಲುವಾಗಿ ಮಗ ಚಿಕ್ಕ ಸಜ್ಜಾದ ಮೇಲೆ ಹೋಗಿ ಕೈಕಟ್ಟಿ, ಮುಖ ತಿರುಗಿಸಿಕೊಂಡು ಮಲಗಿದ್ದ. ಕೊನೆಗೆ ರಕ್ಷಣಾ ಕಾರ್ಯಕರ್ತರನ್ನು ಕರೆಸಿ ಆತನನ್ನು ಇಳಿಸಲಾಯಿತು ಎಂದು ಚೀನದ ಮಾಧ್ಯಮ ವರದಿ ಮಾಡಿದೆ.


ಇಂದು ಹೆಚ್ಚು ಓದಿದ್ದು

Trending videos

Back to Top