CONNECT WITH US  

ಕಾರು ತಲೆಕೆಳಗಾಗಿ ಬಿಟ್ಟು ಹೋದೋರ್ಯಾರು!

ಕೆಲವು ದಿನಗಳ ಹಿಂದೆ ಅಮೆರಿಕದ ಟೊರಾಂಟೋದಲ್ಲಿ ಡಾನ್‌ ವ್ಯಾಲಿ ಪಾರ್ಕ್‌ವೇ ಸೇತುವೆಯಿಂದ ಕಾರೊಂದು ನೇತಾಡುತ್ತಿತ್ತು. ಕಾರು ಭೀಕರ ಅಪಘಾತಕ್ಕೀಡಾಗಿದೆ ಎಂದು ಯಾರೋ ನೋಡಿದವರು ಸುದ್ದಿ ತಿಳಿಸುತ್ತಿದ್ದಂತೆ, ಪೊಲೀಸರು ತಕ್ಷಣ ಹಾಜರಾದರು. ಹೇಗೋ ಹರಸಾಹಸ ಮಾಡಿ ಕಾರು ಕೆಳಗಿಳಿಸಿದರು. ಆದರೆ ಕಾರಲ್ಲಿ ಯಾರೂ ಇರಲಿಲ್ಲ. ಯಾರೂ ಕೆಳಗೆ ಬಿದ್ದೂ ಇರಲಿಲ್ಲ. ಆಗ ಪೊಲೀಸರಿಗೆ ಅನುಮಾನ ಶುರುವಾಯಿತು.

ಕಾರು ನಿಜವಾಗಿಯೂ ಅಪಘಾತವಾಗಿದ್ದೇ ಅಥವಾ ಯಾರೋ ತಮಾಷೆಗೆ ಹೀಗೆ ಮಾಡಿದ್ದೇ ಅಂತ. ಮೊದಲು ಇದು ಯಾವುದೋ ಸಿನಿಮಾ ಶೂಟಿಂಗ್‌ ತಂಡದ ಕೃತ್ಯ ಎಂದು ಹೇಳಲಾಗಿತ್ತು. ಆದರೆ ಹೌದೋ ಅಲ್ಲವೋ ಅಂತ ಇನ್ನೂ ತಿಳಿಯಲಿಲ್ಲ. ಹೀಗಾಗಿ ಈ ಕಾರನ್ನು ಹೀಗೆ ತಲೆಕೆಳಗಾಗಿ ನೇತು ಬಿಟ್ಟವರು ಯಾರು ಎಂಬ ಪ್ರಶ್ನೆ ಇನ್ನೂ ನಿಗೂಢವಾಗಿಯೇ ಇದೆ.


ಇಂದು ಹೆಚ್ಚು ಓದಿದ್ದು

Trending videos

Back to Top