CONNECT WITH US  

ಕುಡಿದು ಹಸೆಮಣೆ ಏರಿದ ವರ; ಮುಂದೇನಾಯ್ತು?

ಮದುವೆ ಮೂಹೂರ್ತದ ವೇಳೆ ವರ ಕಂಠ ಪೂರ್ತಿ ಕುಡಿದು ಬಂದರೆ ವಧು ಮತ್ತು ಆಕೆಯ ಸಂಬಂಧಿಗಳಿಗೆ ಹೇಗಾಗಬೇಡ? ಬಿಹಾರದ ದುಮ್ರಿ ಚಾಪಿಯ ಗ್ರಾಮದಲ್ಲಿ ವರ ಕುಡಿತು ತೂರಾಡುತ್ತಾ ಹಸೆಮಣೆ ಏರಿದ್ದ.

ಆತನಿಗೆ ತನ್ನ ಸುತ್ತಮುತ್ತ ಏನು ನಡೆಯುತ್ತಿದೆ ಎಂಬ ಅರಿವೂ ಇರಲಿಲ್ಲ. ಕುಡಿದ ಅಮಲಲ್ಲಿ ಮದುವೆ ವಿಚಾರವನ್ನೂ ಮರೆತಿದ್ದ. ಯಾವ ಶಾಸ್ತ್ರವನ್ನೂ ಆತನಿಂದ ಮಾಡಲು ಆಗುತ್ತಿರಲಿಲ್ಲ. ಇದನ್ನು ನೋಡಿ ಬೇಸರಗೊಂಡ ವಧು ದಿಟ್ಟ ನಿರ್ಧಾರ ತೆಗೆದುಕೊಂಡು ಮದುವೆಯನ್ನೇ ರದ್ದುಪಡಿಸಿದ್ದಾಳೆ. ಆಕೆಯ ಸಂಬಂಧಿಗಳು ಮತ್ತು ವರನ ಕುಟುಂಬದವರು ಆಕೆಯ ಮನಸ್ಸನ್ನು ಬದಲಿಸಲು ಎಷ್ಟು ಯತ್ನಿಸಿದರೂ ಆಕೆ ಮನಸ್ಸು ಬದಲಿಸಿಕೊಂಡಿಲ್ಲ.

"ವರ ಕಂಠ ಪೂರ್ತಿ ಕುಡಿದು ಬಂದಿದ್ದ. ಆತನಿಗೆ ಸರಿಯಾಗಿ ನಿಲ್ಲಲೂ ಆಗುತ್ತಿರಲಿಲ್ಲ. ನಮ್ಮ ಮಗಳು ಆತನನ್ನು
ಮದುವೆಯಾಗುವುದಿಲ್ಲ ಎಂದು ಹೇಳಿ ಹಸೆಮಣೆಯಿಂದ ಎದ್ದು ನಡೆದಳು' ಎಂದು ವಧುವಿನ ತಂದೆ ಹೇಳಿದ್ದಾರೆ. ಮದುವೆ ರದ್ದಾಗುತ್ತಲೇ ಗ್ರಾಮಸ್ಥರೆಲ್ಲರೂ ವರನನ್ನು ವಶದಲ್ಲಿರಿಸಿಕೊಂಡು ಆತ ಪಡೆದಿದ್ದ ವರದಕ್ಷಿಣೆಯನ್ನು ವಾಪಸ್ಸು ಪಡೆದು ಅವನನ್ನು ಬಿಟ್ಟು ಕಳುಹಿಸಿದ್ದಾರೆ.


ಇಂದು ಹೆಚ್ಚು ಓದಿದ್ದು

Trending videos

Back to Top