CONNECT WITH US  

ಮಗುವನ್ನು ನಿಲ್ದಾಣದಲ್ಲಿ ಬಿಟ್ಟು ವಿಮಾನವೇರಿದ ತಾಯಿ!

ವಿಮಾನ ಟೇಕ್‌ ಆಫ್ ಆದ ಬಳಿಕ ಅವರಿಗೆ ಮಗುವನ್ನು ಬಿಟ್ಟುಬಂದಿದ್ದು ನೆನಪಾಗಿದೆ.

ಸೌದಿಯ ವಿಮಾನವೊಂದು ಟೇಕ್‌ ಆಫ್ ಆದ ಕೆಲವೇ ಕ್ಷಣಗಳಲ್ಲಿ ಕಿಂಗ್‌ ಅಬ್ದುಲ್‌ ಅಜೀಜ್‌ ಇಂಟರ್‌ನ್ಯಾಷನಲ್‌ ವಿಮಾನ ನಿಲ್ದಾಣಕ್ಕೆ ಮರಳಿದೆ. ಮಹಿಳಾ ಪ್ರಯಾಣಿಕರೊಬ್ಬರು ತಮ್ಮ ಮಗುವನ್ನು ವಿಮಾನ ನಿಲ್ದಾಣದ ಟರ್ಮಿನಲ್‌ ನಲ್ಲಿಯೇ ಬಿಟ್ಟು ಬಂದಿದ್ದು ಇದಕ್ಕೆ ಕಾರಣ. ವಿಮಾನ ಟೇಕ್‌ ಆಫ್ ಆದ ಬಳಿಕ ಅವರಿಗೆ ಮಗುವನ್ನು ಬಿಟ್ಟುಬಂದಿದ್ದು ನೆನಪಾಗಿದೆ. ಇದನ್ನು ಕೇಳಿದರೆ ಮಕ್ಕಳನ್ನು ಇಷ್ಟರ ಮಟ್ಟಿಗೆ ಮರೆಯುವ ತಾಯಂದಿರೂ ಇದ್ದಾರೆಯೇ ಎಂದು ಆಶ್ಚರ್ಯವಾಗುತ್ತದೆ. ಟರ್ಮಿನಲ್‌ನಲ್ಲಿ ಅವರು ತಮ್ಮ ಮಗುವಿನ ಜೊತೆ ಕಾಯುವಿಕೆ ಜಾಗದಲ್ಲಿ ಇದ್ದರು. ವಿಮಾನ
ಬರುತ್ತಲೇ ತಮ್ಮ ಜೊತೆ ತಮ್ಮ ಮಗು ಇರುವುದನ್ನು ಮರೆತು ವಿಮಾನವೇರಿದರು. ಬಳಿಕ ವಿಮಾನ ಸಿಬ್ಬಂದಿಗೆ, ತಾವು ಮಗುವನ್ನು ಮರೆತುಬಂದಿದ್ದು, ವಾಪಸ್ಸು ವಿಮಾನ ನಿಲ್ದಾಣಕ್ಕೆ ಹೋಗಲೇಬೇಕು ಎಂದು ವಿನಂತಿಸಿಕೊಂಡರು. ಪೈಲಟ್‌ ವಿಮಾನ ನಿಲ್ದಾಣ ಸಿಬ್ಬಂದಿಯನ್ನು ಸಂಪರ್ಕಿಸಿ ವಿಮಾನ ಮರಳಿ ನಿಲುಗಡೆ ಮಾಡಲು ಅನುಮತಿ ಪಡೆದು, ವಿಮಾನ ನಿಲುಗಡೆ ಮಾಡಿದರು. ಬಳಿಕ ತಾಯಿ ಮತ್ತು ಮಗು ಒಂದಾದರು. ಮಗುವನ್ನೇ ಮರೆತ ತಾಯಿ ಕುರಿತು ಜಾಲತಾಣಿಗರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.


ಇಂದು ಹೆಚ್ಚು ಓದಿದ್ದು

Trending videos

Back to Top