CONNECT WITH US  

ಆನ್‌ಲೈನ್‌ ಆಹಾರಕ್ಕೆ 40 ಜಿರಳೆ ಹಾವಳಿ

ರೆಸ್ಟೋರೆಂಟ್‌ಗಳಲ್ಲಿ ತಿನ್ನುವ, ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಿ ತರಿಸುವ ಆಹಾರದಲ್ಲಿ ಮಣ್ಣು, ಕಲ್ಲು, ಜಿರಳೆ ಸಿಕ್ಕ ಸುದ್ದಿಯನ್ನು ನೀವುಓದುತ್ತಲೇ ಇರುತ್ತೀರಿ ಆ ಸಾಲಿಗೆ ಈ ಸುದ್ದಿ ಹೊಸ ಸೇರ್ಪಡೆ.

ಆದರೂ ಇದು ಬೆಚ್ಚಿಬೀಳಿಸುತ್ತದೆ. ಚೀನಾದಲ್ಲಿ ಮಹಿಳೆ ಆನ್‌ಲೈನ್‌ ಮೂಲಕ ತರಿಸಿದ್ದ ಆಹಾರದಲ್ಲಿ 40ಕ್ಕೂ ಹೆಚ್ಚು ಜಿರಳೆಗಳು ಪತ್ತೆಯಾಗಿವೆ. ಬಾತುಕೋಳಿ ಮಾಂಸದ ಖಾದ್ಯವನ್ನು ಅವರು ತರಿಸಿಕೊಂಡಿದ್ದರು. ಅದನ್ನು ಅವರು ಮತ್ತು ಅವರ ಸ್ನೇಹಿತೆ ತಟ್ಟೆಗೆ ಬಡಿಸಿಕೊಂಡರು.

ಅವರ ಸ್ನೇಹಿತೆಗೆ ಒಂದು ಸತ್ತ ಜಿರಳೆ ಕೈಗೆ ಸಿಕ್ಕಿತು. ಅನುಮಾನ ಬಂದು ಸಂಪೂರ್ಣ ಪೊಟ್ಟಣವನ್ನು ಶೋಧಿಸಿದಾಗ 40ಕ್ಕೂ ಹೆಚ್ಚು ಜಿರಳೆಗಳು ಪತ್ತೆಯಾಗಿವೆ. ಪೊಲೀಸರಿಗೆ ಈ ಕುರಿತು ಅವರು ದೂರು ನೀಡಿದ್ದಾರೆ.


ಇಂದು ಹೆಚ್ಚು ಓದಿದ್ದು

Trending videos

Back to Top