CONNECT WITH US  

ಚಿಕ್ಕಪೇಟೆಯಲ್ಲಿ ಯುವರಾಜ ಪಾದಯಾತ್ರೆ

ಬೆಂಗಳೂರು: ಚಿಕ್ಕಪೇಟೆ ಕಾಂಗ್ರೆಸ್‌ ಅಭ್ಯರ್ಥಿ ಆರ್‌.ವಿ.ದೇವರಾಜ್‌ ಪರ ಅವರ ಪುತ್ರ, ಪಾಲಿಕೆ ಸದಸ್ಯ ಯುವರಾಜ್‌ ಭಾನುವಾರ ಕ್ಷೇತ್ರದೆಲ್ಲೆಡೆ ಪಾದಯಾತ್ರೆ ನಡೆಸಿ ಮತಯಾಚನೆ ಮಾಡಿದರು. ಐದು ವರ್ಷಗಳಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಕೈಗೊಂಡಿದ್ದು, ರಸ್ತೆ, ಕುಡಿಯುವ ನೀರು, ಪಾದಚಾರಿ ಮಾರ್ಗ ಅಭಿವೃದ್ಧಿ, ಉದ್ಯಾನ ಅಭಿವೃದ್ಧಿ ಹೀಗೆ ಎಲ್ಲ ರೀತಿಯ ಕೆಲಸ ಮಾಡಲಾಗಿದೆ ಎಂದು ಹೇಳಿ ಮತದಾರರಿಗೆ ಮನವರಿಕೆ ಮಾಡಿಕೊಟ್ಟರು.

ಸಂಜೆ ಕ್ಷೇತ್ರದಲ್ಲಿ ಆರ್‌.ವಿ.ದೇವರಾಜ್‌ ಪರ ಖ್ಯಾತ ಕ್ರಿಕೆಟಿಗ ಅಜರುದ್ದೀನ್‌ ಸಹ ಪ್ರಚಾರ ಮಾಡಿದರು. ರೋಡ್‌ ಶೋ ನಡೆಸಿದ ಅವರು, ದೇವರಾಜ್‌ ಜನಪ್ರಿಯ ವ್ಯಕ್ತಿಯಾಗಿದ್ದು ಜನಪರ ಕಾಳಜಿಯುಳ್ಳವರಾಗಿದ್ದಾರೆ. ಅವರನ್ನು ಮತ್ತೂಮ್ಮೆ ಆಯ್ಕೆ ಮಾಡಿ ಎಂದು ಮನವಿ ಮಾಡಿದರು.
 


ಇಂದು ಹೆಚ್ಚು ಓದಿದ್ದು

Trending videos

Back to Top