CONNECT WITH US  

ಮತ್ತೂಮ್ಮೆ ಆಶೀರ್ವದಿಸಲು ಕಟ್ಟಾ ಮನವಿ

ಬೆಂಗಳೂರು: ಶಿವಾಜಿನಗರದ ಬಿಜೆಪಿ ಅಭ್ಯರ್ಥಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಭಾನುವಾರ ನೆಹರು ಪುರ, ಸೆಪಿಂಗ್ಸ್‌ ರಸ್ತೆ, ಆರ್ಮ್ಸ್ಟ್ರಾಂಗ್‌ ರಸ್ತೆ, ಶಿವನಚೆಟ್ಟಿ ಗಾರ್ಡನ್‌ನಲ್ಲಿ ಪಾದಯಾತ್ರೆ ನಡೆಸಿ ಮತಯಾಚನೆ ನಡೆಸಿದರು.

ಕೊಯಮತ್ತೂರು ಮಾಜಿ ಸಂಸದ ಸಿ.ಪಿ.ರಾಧಾಕೃಷ್ಣನ್‌, ಕ್ಯಾಪ್ಟನ್‌ ತೆಮಿಳ್‌ ಸೆಲ್ವನ್‌, ತಮಿಳು ಹಾಸ್ಯ ನಟರಾದ ಮನೋಹರ್‌, ಚಾಪ್ಲಿನ್‌ವಾಲಾ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಪರ ಪ್ರಚಾರ ನಡೆಸಿ ಮತಯಾಚನೆ ಮಾಡಿದರು. ಕ್ಷೇತ್ರದಲ್ಲಿ ಶಾಸಕನಾಗಿ ಆರೋಗ್ಯ ತಪಾಸಣೆ ಶಿಬಿರ, ಹಿರಿಯ ನಾಗರಿಕರಿಗೆ ಉಚಿತ ಕನ್ನಡಕ ವಿತರಣೆ ಸೇರಿದಂತೆ ಹಲವಾರು ಶಿಬಿರಗಳನ್ನು ಮಾಡಿದ್ದು,

ಕ್ಷೇತ್ರದಲ್ಲಿದ್ದ ಸಮಸ್ಯೆಗಳ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇನೆ. ಮತ್ತೂಮ್ಮೆ ನನಗೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು. ಶಿವಾಜಿನಗರ ನನ್ನ ಮನೆ ಇದ್ದಂತೆ. ಈ ಕ್ಷೇತ್ರದ ಶಾಸಕನಾಗಿ ಜನತೆಯ ಜತೆ ಉತ್ತಮ ಸಂಬಂಧ ಹೊಂದಿದ್ದು ನನಗೆ  ಈ ಬಾರಿ ಆಶೀರ್ವಾದ ಮಾಡುವ ನಂಬಿಕೆಯಿಂದೆ ಎಂದು ಹೇಳಿದರು. 


ಇಂದು ಹೆಚ್ಚು ಓದಿದ್ದು

Trending videos

Back to Top