CONNECT WITH US  

ಸಮಸ್ಯೆ ಪರಿಹಾರಕ್ಕಾಗಿ ಬೆಂಬಲಿಸಿ

ಮಹದೇವಪುರ: ಗ್ರಾಮೀಣ ಮತ್ತು ನಗರ ಜೀವನದ ಸಮ್ಮಿಲನವಾದ ಮಹದೇವಪುರವನ್ನು ಮಾದರಿ ಕ್ಷೇತ್ರವನ್ನಾಗಿಸಲು ಸಹಕರಿಸುವಂತೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ನಲ್ಲೂರಹಳ್ಳಿ ಟಿ. ನಾಗೇಶ್‌ ಮತದಾರರಲ್ಲಿ ಮನವಿ ಮಾಡಿದರು.

ಕ್ಷೇತ್ರದ ಹಳ್ಳಿಗಳಲ್ಲಿ ಶನಿವಾರ ಚುನಾವಣಾ ಪ್ರಚಾರ ಕೈಗೊಂಡ ಸಂದರ್ಭದಲ್ಲಿ ಮಾತನಾಡಿದ ಅವರು, ಮಹದೇವಪುರ ಕ್ಷೇತ್ರದಲ್ಲಿ ದೇಶದ ಬಹುತೇಕ ಎಲ್ಲ ರಾಜ್ಯಗಳ ಜನ ವಾಸವಿದ್ದಾರೆ. ಮೂಲ ಬೆಂಗಳೂರು ನಿವಾಸಿಗಳ ಜತೆಗೆ, ಗ್ರಾಮೀಣ ಭಾಗದ ಜನ ಕೂಡ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತಾರೆ. ಹೀಗಾಗಿ ಮಹದೇವಪುರ ಕ್ಷೇತ್ರ "ಮಿನಿ ಇಂಡಿಯಾ' ಎಂಬ ಖ್ಯಾತಿಗೆ ಪಾತ್ರವಾಗಿದೆ.

ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯ ಐಟಿ, ಬಿಟಿ ಸಂಸ್ಥೆಗಳು, ಕೈಗಾರಿಕೆಗಳು ನೆಲೆಯೂರಿರುವ ಜತೆಗೆ, ಕೃಷಿಕರೂ ಇದ್ದು, ಎಲ್ಲರೂ ಪ್ರತ್ಯೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮೂಲ ಸೌಕರ್ಯ, ಟ್ರಾಫಿಕ್‌ ಸಮಸ್ಯೆ, ಪರಿಸರ ಮಾಲಿನ್ಯ, ಜಲಮೂಲಗಳ ಮಾಲಿನ್ಯದಂತಹ ಹಲವು ತೊಡರುಗಳು ನಾಗರಿಕರನ್ನು ಕಾಡುತ್ತಿವೆ. ಈ ಸಮಸ್ಯೆಗಳನ್ನು ಬಗೆಹರಿಸಲು ತಮ್ಮನ್ನು ಬೆಂಬಲಿಸುವಂತೆ ಕೋರಿದರು.

ಕ್ಷೇತ್ರದಲ್ಲಿ ಅಭ್ಯರ್ಥಿಗಳ ಗೆಲುವಿಗೆ ದಲಿತ ಮತಗಳೇ ನಿರ್ಣಾಯಕ ಪಾತ್ರ ವಹಿಸುತ್ತವೆ. ಆದರೆ ಈ ಬಾರಿ ರಾಷ್ಟ್ರೀಯ ಪಕ್ಷಗಳು ದಲಿತ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡದೆ ಕಡೆಗಣಿಸಿವೆ. ಹೀಗಾಗಿ ಕ್ಷೇತ್ರದ ಜನತೆ ಈ ಬಾರಿ ನನ್ನ ಕೈ ಹಿಡಿಯಲಿದ್ದಾರೆ ಎಂಬ ವಿರ್ಶವಾಸವಿದೆ ಎಂದರು.

ಇದೆ ವೇಳೆ ಕ್ಷೇತ್ರದ ಗ್ರಾಮಾಂತರ ಭಾಗದ ಶಿಗೇಹಳ್ಳಿ, ಚಿಕ್ಕಬನಹಳ್ಳಿ, ದೊಡ್ಡಬನಹಳ್ಳಿ, ಬೈರತಿ, ಕನ್ನಮಂಗಲ, ಖಾಜಿ ಸೊನ್ನೇನಹಳ್ಳಿ, ಗೊರವಿಗೆರೆ, ಕೋನದಾಸಪುರ, ಹುಸ್ಕೂರು, ಹಳೇಹಳ್ಳಿ ಸೇರಿ ಇತರ ಗ್ರಾಮಗಳಲ್ಲಿ ನಲ್ಲೂರಹಳ್ಳಿ ಟಿ. ನಾಗೇಶ್‌ ಪ್ರಚಾರ ನಡೆಸಿದರು. ದಲಿತ ಮುಖಂಡರಾದ ಸೊರಹುಣಸೆ ವೆಂಕಟೇಶ್‌, ಗೋವರ್ಧನ್‌, ಬಿ.ಕೃಷ್ಣಪ್ಪ, ಮಹೇಂದ್ರ ಹಾಗೂ ಇತರರಿದ್ದರು.


ಇಂದು ಹೆಚ್ಚು ಓದಿದ್ದು

Trending videos

Back to Top