CONNECT WITH US  

ಹಿಂದೂಗಳ ಹತ್ಯೆ ದ್ವೇಷಕ್ಕೆ ನಡೆದಿಲ್ಲ

ಬೆಂಗಳೂರು: ರಾಜ್ಯದಲ್ಲಿ ನಡೆದ 24 ಹಿಂದೂಪರ ಕಾರ್ಯಕರ್ತರ ಹತ್ಯೆಗಳೆಲ್ಲವೂ ದ್ವೇಷದ ಕಾರಣಕ್ಕೆ ನಡೆದಿಲ್ಲ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಪ್ರಸ್‌ ಕ್ಲಬ್‌ನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ನಗ್ನ ಸತ್ಯ ಎಂಬ ಕಿರುಹೊತ್ತಿಗೆ ಬಿಡುಗಡೆ ಮಾಡಿದರು.

24ಹಿಂದೂ ಕಾರ್ಯಕರ್ತರ ಹತ್ಯೆ ನಡೆದಿದೆ ಎಂದು ಆರೋಪಿಸುವ ಸಂಘಪರಿವಾರ  ಮತ್ತು ಬಿಜೆಪಿ ನಾಯಕರಿಗೆ ಸಂಘಪರಿವಾರದಿಂದ ನಡೆದ ಹತ್ಯೆಗಳು ಕಾಣುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. 24 ಜನರಲ್ಲಿ 12 ಜನರನ್ನು ಪಿಎಫ್ಐ ಮತ್ತು ಎಸ್‌ಡಿಪಿಐ ದ್ವೇಷದ ಕಾರಣಕ್ಕೆ ಕೊಲೆ ಮಾಡಿವೆ.

ಉಳಿದವರು ವೈಯಕ್ತಿಕ ದ್ವೇಷ, ಆತ್ಮಹತ್ಯೆ, ಜಮೀನು ವ್ಯಾಜ್ಯದಂತ ಕಾರಣದಿಂದ ಕೊಲೆಯಾಗಿದ್ದಾರೆ ಎಂದು ಹೇಳಿದರು. ಇದೇ ವೇಳೆ, 21 ಕೊಲೆ ಸಂಘ ಪರಿವಾರದಿಂದ ನಡೆದಿದೆ. 11 ಜನ ಮುಸ್ಲಿಂ ಹಾಗೂ 10 ಜನ ಹಿಂದೂಗಳನ್ನು ಕೊಲೆ ಮಾಡಲಾಗಿದೆ. ಡಿವೈಎಸ್‌ಪಿ ಕಲ್ಲಪ್ಪ ಹಂಡಿಬಾಗ್‌ ಸಾವಿಗೂ ಸಂಘ ಪರಿವಾರವೇ ಕಾರಣ ಎಂದು ಆರೋಪಿಸಿದರು.


ಇಂದು ಹೆಚ್ಚು ಓದಿದ್ದು

Trending videos

Back to Top