CONNECT WITH US  

ಶೋಭಾ ಆಸ್ತಿ 5 ವರ್ಷಗಳಲ್ಲಿ ದುಪ್ಪಟ್ಟು, ಸಾಲವೂ ಸ್ವಲ್ಪ ಹೆಚ್ಚು

ಉಡುಪಿ: ಶೋಭಾ ಕರಂದ್ಲಾಜೆಯವರು ನಾಮಪತ್ರ ಸಲ್ಲಿಸುವಾಗ ನೀಡಿರುವ ಅಫಿದವಿತ್‌ ಪ್ರಕಾರ ಆದಾಯ, ಆಸ್ತಿ ವಿವರ ಇಂತಿದೆ: 

ಚರಾಸ್ತಿ ಮೌಲ್ಯ 7.38 ಕೋ.ರೂ., ಖರೀದಿಸಿದ ಚರಾಸ್ತಿ ಮೌಲ್ಯ 2.13 ಕೋ.ರೂ. (ಈಗಿನ ಮಾರುಕಟ್ಟೆ ಬೆಲೆ 3.1 ಕೋ.ರೂ.), ವಿವಿಧ ಹಣಕಾಸು ಸಂಸ್ಥೆಗಳಲ್ಲಿರುವ ಸಾಲ 4.99 ಕೋ.ರೂ. 2014ರಲ್ಲಿ ಶೋಭಾ ಅವರು 5.1 ಕೋ.ರೂ. ಮೌಲ್ಯದ ಆಸ್ತಿ, 3.81 ಕೋ.ರೂ. ಸಾಲ ಹೊಂದಿದ್ದರು. 

ಪ್ರತಿವರ್ಷದ ಆದಾಯ
 2013-14: 15.65 ಲ.ರೂ., 2014-15: 20.53 ಲ.ರೂ., 2015-16: 88.9 ಲ.ರೂ., 2016-17: 23.11 ಲ.ರೂ., 2017-18: 24.16 ಲ.ರೂ.

ಆಸ್ತಿ ವಿವರ: ಕೈಯಲ್ಲಿರುವ ನಗದು: 1.29 ಲ.ರೂ., ಗಂಗಾನಗರದಲ್ಲಿರುವ ಫೆಡರಲ್‌ ಬ್ಯಾಂಕ್‌ನಲ್ಲಿ 29.5 ಲ.ರೂ., ಬೆಂಗಳೂರು ಸದಾಶಿವನಗರ ಕೋಟಕ್‌ ಮಹೀಂದ್ರ ಬ್ಯಾಂಕ್‌ನಲ್ಲಿ 1.56 ಲ.ರೂ., ದಿಲ್ಲಿಯ ಸಂಸದ್‌ ಭವನದ ಎಸ್‌ಬಿಐನಲ್ಲಿ 40.24 ಲ.ರೂ., ಫೆಡರಲ್‌ ಬ್ಯಾಂಕ್‌ ಟ್ಯಾಕ್ಸ್‌ ಸರ್ವರ್‌ ನಿರಖು ಠೇವಣಿ 3 ಲ.ರೂ., ಎಸ್‌ಬಿಐ ಆರ್‌ಡಿ 1.65 ಲ.ರೂ., ಎಲ್‌ಐಸಿ 11 ಲ.ರೂ., ಕಪಿಲಾ ಮಂಜುಶ್ರೀ ಅಪರೆಲ್ಸ್‌ ಪ್ರೈ.ಲಿ.ನಿಂದ 4.01 ಕೋ.ರೂ. ಮುಂಗಡ, ಸಂಬಂಧಿಕರಿಂದ 83.17 ಲ.ರೂ. ಮುಂಗಡ, ಇತರರಿಂದ 4 ಲ.ರೂ. ಮುಂಗಡ, ಟೊಯೊಟಾ ಇನ್ನೋವಾ ಕಾರು 16.31 ಲ.ರೂ., ಹೊಂಡಾ ಆ್ಯಕ್ಟಿವಾ 73,000 ರೂ., 1,000 ಗ್ರಾಂ ಚಿನ್ನದ ಬಿಸ್ಕಿಟ್‌ 33 ಲ.ರೂ., ಚಿನ್ನ- ಬೆಳ್ಳಿ ಆಭರಣ 22 ಲ.ರೂ., ನಗದು ಕಳವಾದ ಪ್ರಕರಣ 15.71 ಲ.ರೂ., ಜೆಡಿಇನಲ್ಲಿ ಠೇವಣಿ 71.48 ಲ.ರೂ. ಒಟ್ಟು ಆಸ್ತಿ ಮೌಲ್ಯ 7.38 ಕೋ.ರೂ.ಕೃಷಿಯೇತರ ಭೂ ಮೌಲ್ಯ 10 ಲ.ರೂ., 2015ರಲ್ಲಿ ಖರೀದಿಸಿದ ಬೆಂಗಳೂರಿನಲ್ಲಿರುವ ಮನೆ ಮೌಲ್ಯ 2.07 ಕೋ.ರೂ. ಈಗಿನ ಮಾರುಕಟ್ಟೆ ಮೌಲ್ಯ 3 ಕೋ.ರೂ.ಸಾಲ, ಮುಂಗಡ ಆದರ್ಶ ಡೆವಲಪರ್ 4.99 ಕೋ.ರೂ.

ಪ್ರಕರಣಗಳು
ಹೊನ್ನಾವರದಲ್ಲಿ ಬಾಲಕಿಯೊಬ್ಬಳ ಮೇಲೆ ಜಿಹಾದಿಗಳು ಅತ್ಯಾಚಾರ ನಡೆಸಿ ಕೊಲೆ ಮಾಡಲು ಯತ್ನಿಸಿದ್ದಾರೆ. ಸಿದ್ದರಾಮಯ್ಯನವರ ಸರಕಾರ ಏಕೆ ಆರೋಪಿಗಳನ್ನು ಬಂಧಿಸಿಲ್ಲ ಎಂಬ ಹೇಳಿಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ರೋಶನ್‌ ಬೇಗ್‌ ಅವರು ಖಾಸಗಿ ದೂರು ದಾಖಲಿಸಿದ್ದರು.


ಇಂದು ಹೆಚ್ಚು ಓದಿದ್ದು

Trending videos

Back to Top