CONNECT WITH US  

"ಪಿಎಂ ನರೇಂದ್ರ ಮೋದಿ' ಸಿನೆಮಾ ಬಿಡುಗಡೆ ವಿರುದ್ಧ ಆಯೋಗಕ್ಕೆ ದೂರು

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಜೀವನಾಧರಿತ "ಪಿಎಂ ನರೇಂದ್ರ ಮೋದಿ' ಚಿತ್ರ ಬಿಡುಗಡೆ ಮಾಡದಂತೆ ಚಿತ್ರ ನಿರ್ಮಾಪಕರಿಗೆ ನಿರ್ದೇಶ  ನೀಡುವಂತೆ ಕೋರಿ ವಕೀಲ ಎಲ. ರಮೇಶ್‌ ನಾಯಕ್‌ ಚುನಾವಣ ಆಯೋಗಕ್ಕೆ ಪತ್ರ ಬರೆದಿದ್ದಾರೆ..

ತುಮಕೂರು ಮೂಲದ ವಕೀಲ ರಮೇಶ್‌ ನಾಯಕ್‌ ಕೇಂದ್ರ ಚುನಾವಣ ಆಯೋಗ ಮತ್ತು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳಿಗೆ ಇ-ಮೇಲ್‌ ಮೂಲಕ ಶನಿವಾರ ಪತ್ರ ಬರೆದಿದ್ದಾರೆ. ದೇಶದಲ್ಲಿ 17ನೇ  ಲೋಕಸಭೆಗೆ ಚುನಾವಣೆ ನಡೆಯುತ್ತಿದೆ. ದೇಶಾದ್ಯಂತ ಈಗಾಗಲೇ ಚುನಾವಣ ನೀತಿ ಸಂಹಿತೆ ಜಾರಿಯಲ್ಲಿದೆ. ಇಂಥ ಸಂದರ್ಭದಲ್ಲಿ ಪ್ರಧಾನಿ ಜೀವನ ಆಧಾರಿತ ಚಿತ್ರ ಬಿಡುಗಡೆಯಾದರೆ ಅದು ದೇಶದ ಮತದಾರರ ಮೇಲೆ ವ್ಯಾಪಕವಾಗಿ ಸಕಾರಾತ್ಮಕ ಅಥವಾ ನಕಾರಾತ್ಮಕ ಪ್ರಭಾವ ಬೀರುತ್ತದೆ ಮತ್ತು ಇದು ಚುನಾವಣ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಲಿದೆ. ಆದ್ದರಿಂದ ಎ.12ರಂದು ಬಿಡುಗಡೆಗೊಳ್ಳಲಿರುವ ಪಿಎಂ ನರೇಂದ್ರ ಮೋದಿ ಚಿತ್ರ ಬಿಡುಗಡೆ ಮಾಡದಂತೆ ಚಿತ್ರ ನಿರ್ಮಾಪಕರು ಮತ್ತು ಸಂಬಂಧಪಟ್ಟ ಇತರರಿಗೆ ನಿರ್ದೇಶ ನೀಡಬೇಕು ಎಂದು ವಕೀಲ ರಮೇಶ್‌ ನಾಯಕ್‌ ಚುನಾವಣ ಆಯೋಗವನ್ನು ಮನವಿ ಮಾಡಿ¨ªಾರೆ.


ಇಂದು ಹೆಚ್ಚು ಓದಿದ್ದು

Trending videos

Back to Top