CONNECT WITH US  

ಬಿಜೆಪಿ ವಿರುದ್ಧ ಆಕ್ಷೇಪಾರ್ಹ ಫೇಸ್‌ ಬುಕ್‌ ಪೋಸ್ಟ್‌: ಆರೋಪಿ arrest

ಬಲ್ಲಿಯಾ, ಉತ್ತರ ಪ್ರದೇಶ : ಬಿಜೆಪಿ ವಿರುದ್ಧ ಸಾಮಾಜಿಕ ಜಾಲ ಮಾಧ್ಯಮದಲ್ಲಿ ಆಕ್ಷೇಪಾರ್ಹ ಟೀಕೆಗಳನ್ನು ಪೋಸ್ಟ್‌ ಮಾಡಿದ ಆರೋಪ ಮೇಲೆ ಪೊಲೀಸರು ಇಲ್ಲಿನ ರಸದಾ ಪ್ರದೇಶದ ಅರ್ಮಾನ್‌ ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ.

ಬಿಜೆಪಿ ನಾಯಕ ಗೋಪಾಲ್‌ಜೀ ಸೋನಿ ಅವರು ಅರ್ಮಾನ್‌ ವಿರುದ್ಧ ದೂರು ನೀಡಿದ್ದರು. ಫೇಸ್‌ ಬುಕ್‌ ನಲ್ಲಿ ಅರ್ಮಾನ್‌ ಬಿಜೆಪಿ ವಿರುದ್ದ ಅವಮಾನಕಾರಿ ಪೋಸ್ಟ್‌ಗಳನ್ನು ಹಾಕಿರುವುದಾಗಿ ದೂರಿನಲ್ಲಿ ಹೇಳಿದ್ದರು. 

ಆರೋಪಿ ಅರ್ಮಾನನ್ನು ಬಂಧಿಸಲಾಗಿದ್ದು ತನಿಖೆ ನಡೆಯುತ್ತಿದೆ ಎಂದು ಸಹಾಯಕ ಪೊಲೀಸ್‌ ಸುಪರಿಂಟೆಂಡೆಂಟ್‌ ವಿಕ್ರಾಂತ್‌ ವೀರ್‌ ತಿಳಿಸಿದ್ದಾರೆ. 


ಇಂದು ಹೆಚ್ಚು ಓದಿದ್ದು

Trending videos

Back to Top