CONNECT WITH US  

ನಕ್ಸಲ್‌ ಸಂಬಂಧಿ ವಿದ್ಯಾಭ್ಯಾಸಕ್ಕೆ ಲಕ್ಷಾಂತರ ವೆಚ್ಚ

22 ಲಕ್ಷ ಕೊಟ್ಟು ಸಂಬಂಧಿಯನ್ನು ಕಾಲೇಜಿಗೆ ಸೇರಿಸಿದ ನಕ್ಸಲ್‌ ಪ್ರದ್ಯುಮ್ನ

ನವದೆಹಲಿ: ಬಿಹಾರ ಮತ್ತು ಜಾರ್ಖಂಡ್‌ನ‌ ಪ್ರಮುಖ ನಕ್ಸಲ್‌ ನಾಯಕರು ತಮ್ಮ ಹಾಗೂ ಸಂಬಂಧಿಕರ ಮಕ್ಕಳನ್ನು ಖಾಸಗಿ ವೈದ್ಯಕೀಯ ಮತ್ತು ಇಂಜಿನಿಯರಿಂಗ್‌ ಕಾಲೇಜುಗಳಿಗೆ ಭಾರಿ ಹಣ ಕೊಟ್ಟು ಅಧ್ಯಯನಕ್ಕೆಂದು ಸೇರಿಸುತ್ತಿದ್ದಾರೆ ಎಂಬುದು ತಿಳಿದುಬಂದಿದೆ. ಕಳೆದ 4 ವರ್ಷಗಳಲ್ಲಿ ಪ್ರಮುಖ ನಕ್ಸಲ್‌ ನಾಯಕರಿಗೆ ಭಾರಿ ಪ್ರಮಾಣದ ಹಣ ಲಭ್ಯವಾಗಿದೆ ಎಂಬುದು ಕೇಂದ್ರ ಗೃಹ ಸಚಿವಾಲಯಕ್ಕೆ ತಿಳಿದುಬಂದಿದೆ. ಈ ಹಣಕ್ಕೆ ಪ್ರಮುಖ ಮೂಲವೇ ಅಪಹರಣ ಎಂದು ಹೇಳಲಾಗಿದೆ.

ಜಾರ್ಖಂಡ್‌ ಸ್ಪೆಷಲ್‌ ಏರಿಯಾ ಕಮಿಟಿ ಸದಸ್ಯ ಪ್ರದ್ಯುಮ್ನ ಶರ್ಮಾ ತನ್ನ ಸಂಬಂಧಿಯನ್ನು ವೈದ್ಯಕೀಯ ಕಾಲೇಜಿಗೆ ಸೇರಿಸಲು 22 ಲಕ್ಷ ರೂ. ನೀಡಿದ್ದಾನೆ. ಇನ್ನೊಬ್ಬ ಬಿಜೆಎಸ್‌ ಸದಸ್ಯ ಸಂದೀಪ್‌ ಯಾದವ್‌ ಕೂಡ ತನ್ನ ಪುತ್ರ ಹಾಗೂ ಪುತ್ರಿಯನ್ನು ಖಾಸಗಿ ಇಂಜಿನಿಯರಿಂಗ್‌ ಕಾಲೇ ಜಿಗೆ ಸೇರಿಸಿದ್ದು, ಭಾರಿ ಶುಲ್ಕ ತೆತ್ತಿದ್ದಾನೆ. ಇದೇ ಸಂದೀಪ್‌, ನೋಟು ಅಮಾನ್ಯದ ಸಂದರ್ಭದಲ್ಲಿ 15 ಲಕ್ಷ ರೂ. ವಿನಿಮಯ ಮಾಡಿದ್ದಾನೆ. ವ್ಯಾಪಾ ರಿಗಳನ್ನು ಬಳಸಿಕೊಂಡು ಹಣ ವಿನಿಮಯ ಮಾಡಿಕೊಂಡಿರುವುದು ತಿಳಿದುಬಂದಿದೆ.

ಈತನ ಬಳಿ 30 ಲಕ್ಷ ರೂ. ಮೌಲ್ಯದ ಫ್ಲಾಟ್‌ ಇದ್ದು, ರಿಯಲ್‌ ಎಸ್ಟೇಟ್‌ನಲ್ಲಿ 50 ಲಕ್ಷ ಹೂಡಿಕೆ ಮಾಡಲಾಗಿದೆ. ಈತನ ಹೆಸರಿನಲ್ಲಿ ಇರುವ 1.45 ಕೋಟಿ ರೂ. ನಗದು ಮತ್ತು ಸ್ವತ್ತು, 32 ಎಕರೆ ಭೂಮಿ ಹಾಗೂ ಹಲವು ಕಟ್ಟಡಗಳನ್ನೂ ಜಾರಿ ನಿರ್ದೇಶನಾಲಯ ವಶಪಡಿಸಿಕೊಂಡಿದೆ. 11 ಕಾರುಗಳು ಮತ್ತು 2 ಟ್ರ್ಯಾಕ್ಟರುಗಳನ್ನೂ ಜಪ್ತಿ ಮಾಡಲಾಗಿದೆ. ಕಾಂಟ್ರಾಕ್ಟರುಗಳು, ಸಾರಿಗೆ ಸಂಸ್ಥೆ ಮಾಲೀಕರು ಹಾಗೂ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಿಗಳಿಂದ ವಸೂಲಿ ಮಾಡಲಾಗುತ್ತಿದೆ.


ಇಂದು ಹೆಚ್ಚು ಓದಿದ್ದು

Trending videos

Back to Top