CONNECT WITH US  

ಮಾಜಿ ಸಿಎಂಗಳಿಗೆ ಗೇಟ್‌ಪಾಸ್‌

ನವದೆಹಲಿ: ಉತ್ತರ ಪ್ರದೇಶದಲ್ಲಿ ಅಧಿಕಾರಾವಧಿಯ ಬಳಿಕವೂ ಮುಖ್ಯಮಂತ್ರಿಗಳಾಗಿದ್ದವರು ಸರ್ಕಾರಿ ನಿವಾಸದಲ್ಲಿ ವಾಸಮಾಡುವುದನ್ನು ಮುಂದುವರಿಸಬಹುದು ಎಂಬ ತಿದ್ದುಪಡಿ ಕಾಯ್ದೆಯನ್ನು ಸುಪ್ರೀಂ ಕೋರ್ಟ್‌ ಸೋಮವಾರ ರದ್ದು ಮಾಡಿದೆ. ನ್ಯಾ.ರಂಜನ್‌ ಗೊಗೋಯ್‌ ನೇತೃತ್ವದ ನ್ಯಾಯಪೀಠ ಈ ಆದೇಶ ನೀಡಿದ್ದು, ಇದು ಸಮಾನತೆಯ ನಿಯಮದ ಉಲ್ಲಂಘನೆ ಮತ್ತು ಸಂವಿಧಾನ ವಿರೋಧಿಯಾಗಿದೆ. ಜತೆಗೆ ಸರ್ಕಾರಿ ಬಂಗಲೆಗಳು ಸಾರ್ವಜನಿಕರ ಸೊತ್ತು ಆಗಿದ್ದು, ದೇಶದ ಜನರ ಆಸ್ತಿಯಾಗಿದೆ ಎಂದು ಸುಪ್ರೀಂಕೋರ್ಟ್‌ ಹೇಳಿದೆ. 

ಲೋಕ್‌ ಪ್ರಹರಿ ಎಂಬ ಎನ್‌ಜಿಒ ಉತ್ತರ ಪ್ರದೇಶ ಸಚಿವರ ವೇತನ ಕಾಯ್ದೆ 1981ಕ್ಕೆ ಹಿಂದಿನ ಅಖೀಲೇಶ್‌ ಯಾದವ್‌ ನೇತೃತ್ವದ ಸರ್ಕಾರ ತಿದ್ದುಪಡಿ  ತಂದಿದ್ದನ್ನು ಸುಪ್ರೀಂಕೋರ್ಟಲ್ಲಿ ಪ್ರಶ್ನಿಸಿತ್ತು. ಏ.19ರಂದು ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್‌ ತೀರ್ಪನ್ನು ಕಾಯ್ದಿ ರಿಸಿತ್ತು. ಮಾಜಿ ಮುಖ್ಯಮಂತ್ರಿಗಳು ಎಂಬ ಕಾರಣಕ್ಕೆ ಹಲವರು ಸರ್ಕಾರಿ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ. ತೀರ್ಪಿನ ಹಿನ್ನೆಲೆಯಲ್ಲಿ ಅವರೆಲ್ಲರೂ ಬಂಗಲೆ ತೆರವುಗೊಳಿಸುವ ಅನಿವಾರ್ಯ ಎದುರಾಗಿದೆ.


ಇಂದು ಹೆಚ್ಚು ಓದಿದ್ದು

Trending videos

Back to Top