CONNECT WITH US  

ಭೋಪಾಲ್‌ : ಬಿಜೆಪಿ ಭದ್ರಕೋಟೆಯಲ್ಲಿ ದಿಗ್ವಿಜಯ್‌ ಸಿಂಗ್‌ ಸ್ಪರ್ಧೆ

ಲಕ್ನೋ : ಹಿರಿಯ ಕಾಂಗ್ರೆಸ್‌ ನಾಯಕ ಮತ್ತು ರಾಜ್ಯ ಸಭಾ ಸದಸ್ಯರಾಗಿರುವ ದಿಗ್ವಿಜಯ್‌ ಸಿಂಗ್‌ ಅವರು ಅತ್ಯಂತ ಕಠಿನ ಕ್ಷೇತ್ರವೆಂದು ಪರಿಗಣಿಸಲ್ಪಟ್ಟಿರುವ ಮಧ್ಯ ಪ್ರದೇಶದ ಭೋಪಾಲ್‌ ನಿಂದ 2019ರ ಲೋಕಸಭಾ ಚುನಾವಣೆಯನ್ನು  ಸ್ಪರ್ಧಿಸಲಿದ್ದಾರೆ. 

ಭೋಪಾಲ್‌ ಕ್ಷೇತ್ರ ಬಿಜೆಪಿಯ ಭದ್ರ ಕೋಟೆಯಾಗಿದ್ದು ಇದನ್ನು ಅದು 1989ರಿಂದಲೂ ತನ್ನ ವಶದಲ್ಲಿ ಇರಿಸಿಕೊಂಡಿದೆ.

ದಿಗ್ವಿಜಯ್‌ ಸಿಂಗ್‌ ಅವರನ್ನು ಭೋಪಾಲ್‌ ಕ್ಷೇತ್ರದಿಂದ ಕಣಕ್ಕೆ ಇಳಿಸುವ ನಿರ್ಧಾರವನ್ನು ಕಾಂಗ್ರೆಸ್‌ ಕೇಂದ್ರ ಚುನಾವಣಾ ಸಮಿತಿ ತೆಗೆದುಕೊಂಡಿರುವುದಾಗಿ ರಾಜ್ಯ ಮುಖ್ಯಮಂತ್ರಿ ಕಮಲ್‌ ನಾಥ್‌ ಸುದ್ದಿಗಾರರಿಗೆ ತಿಳಿಸಿದರು. 

''ರಾಜಗಢಕ್ಕೆ ಬದಲಾಗಿ ನೀವು ಭೋಪಾಲ್‌, ಇಂದೋರ್‌ ಅಥವಾ ಜಬಲ್ಪುರದಿಂದ ಸ್ಪರ್ಧಿಸಿ ಎಂದು ದಿಗ್ವಿಜಯ್‌ ಅವರನ್ನು ಕೇಳಿಕೊಂಡೆ. ಅದಕ್ಕವರು ಕಾಂಗ್ರೆಸ್‌ ಕೇಂದ್ರೀಯ ಚುನಾವಣಾ ಸಮಿತಿ ನಿರ್ಧರಿಸುವ ಪ್ರಕಾರ ನಾನು ಎಲ್ಲಿಂದ ಬೇಕಾದರೂ ಸ್ಪರ್ಧಿಸುವೆ ಎಂದು ಹೇಳಿದರು'' ಎಂಬುದಾಗಿ ಕಮಲ್‌ ನಾಥ್‌ ಸುದ್ದಿಗಾರರಿಗೆ ತಿಳಿಸಿದರು. 

ದಿಗ್ವಿಜಯ್‌ ಸಿಂಗ್‌ ಅವರು ಎರಡು ಬಾರಿಯ ರಾಜ್ಯ ಮುಖ್ಯಮಂತ್ರಿ ಮತ್ತು ಹಲವು ಬಾರಿಯ ಲೋಕಸಭಾ ಸದಸ್ಯರು.

ಈ ಬಾರಿಯ ಲೋಕಸಭಾ ಚುನಾವಣೆಯನ್ನು ತಾನು ಅತ್ಯಂತ ಕಠಿನ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಅವರೇ ಈ ಹಿಂದೆ ಹೇಳಿಕೊಂಡಿದ್ದರು. ರಾಜ್ಯದಲ್ಲಿ ಕಠಿನ ಸೀಟು ಯಾವುದೆಂಬುದನ್ನು ದಿಗ್ವಿಜಯ್‌ ಅವರೇ ಆಯ್ಕೆ ಮಾಡಲಿ ಎಂದು ಕಮಲ್‌ ನಾಥ್‌ ಹೇಳಿದ್ದರು. 


ಇಂದು ಹೆಚ್ಚು ಓದಿದ್ದು

Trending videos

Back to Top