CONNECT WITH US  

ವಿ.ಪಿ.ಎಂ.ಅಧ್ಯಯನ ಕೇಂದ್ರದಲ್ಲಿ  ವಿಚಾರ ಸಂಕಿರಣ

ಮುಂಬಯಿ: ವಿ.ಪಿ.ಎಂ ಅಂತಾ ರಾಷ್ಟ್ರೀಯ ಅಧ್ಯಯನ ಕೇಂದ್ರವು ಡಾ| ಪಿ. ಎಂ. ಕಾಮತ್‌ ನಿರ್ದೇಶನದಲ್ಲಿ ಪ್ರತಿ ವರ್ಷವೂ ರಾಷ್ಟ್ರೀಯ-ಅಂತಾರಾಷ್ಟ್ರೀಯ ವಿಷಯಗಳಿಗೆ ಸಂಬಂಧಿಸಿದ ಹತ್ತು-ಹಲವಾರು ವಿಚಾರಗೋಷ್ಠಿ ಹಮ್ಮಿಕೊಂಡು ವಿಶ್ವದಲ್ಲಿನ ರಾಷ್ಟ್ರ-ರಾಷ್ಟ್ರಗಳ ನಡುವಿನ ಸ್ನೇಹ ಸಂಬಂಧ, ಜಟಿಲ ಸಮಸ್ಯೆಗಳು, ವಿದೇಶಾಂಗ ನೀತಿ, ರಾಜಕೀಯ, ಆರ್ಥಿಕ, ರಕ್ಷಣಾ, ಭಯೋತ್ಪಾದನೆಯ, ವ್ಯಾವಹಾರಿಕ ಇತ್ಯಾದಿ ವಿಷಯಗಳನ್ನು ಚರ್ಚೆ ಮಾಡುವ ವಿಶ್ವದ ಮುಕ್ತ ಮಹಾ ವೇದಿಕೆಯಾಗಿಸಿದ್ದು, ಈ ಬಾರಿ ಅಮೇರಿಕದ ಅಧ್ಯಕ್ಷ ಡೋನಾಲ್ಡ್‌ ಟ್ರಂಪ್‌ ಅಧ್ಯಕ್ಷತೆಯಲ್ಲಿ ಭಾರತ, ಚೀನ, ಇರಾನ್‌ ಜೊತೆ ಯು.ಎಸ್‌ ಸಂಬಂಧ ಈ ವಿಷಯದ ಕುರಿತು ಎರಡು ದಿನಗಳ ಚರ್ಚಾಕೂಟ ಸಮಾರಂಭವನ್ನು ಆಯೋಜಿಸಿತ್ತು.

ಎ. 28 ಮತ್ತು ಎ. 29ರಂದು ನಡೆದ ಎರಡು ದಿನಗಳ ವಿಚಾರಗೋಷ್ಠಿಯಲ್ಲಿ ಟ್ರಂಪ್‌ ಅಧ್ಯಕ್ಷತೆಯಲ್ಲಿ ಭಾರತ, ಚೀನ, ಇರಾನ್‌ ನಡುವಿನ ಸಂಬಂಧವು ರಾಜಕೀಯವಾಗಿ, ವ್ಯವಹಾರಿಕವಾಗಿ, ಆರ್ಥಿಕವಾಗಿ, ತಾಂತ್ರಿಕವಾಗಿ ಇತರ ವಿಷಯಗಳ ಕುರಿತು ವಿವಿಧ ವಿಶ್ವವಿದ್ಯಾಲಯಗಳ ಶ್ರೇಷ್ಠ ವಿದ್ವಾಂಸರ ಚಿಕ್ಕ ಬರವಣಿಗೆ ಸಾರಾಂಶದ ಮೇಲೆ ಚರ್ಚಾಗೋಷ್ಠಿ ನಡೆಸಲಾಯಿತು.

ಎ.ಆರ್‌ ಘನಾಶ್ಯಾಮ  ಅಧ್ಯಕ್ಷತೆಯಲ್ಲಿ ಚರ್ಚಾಕೂಟದ ಸಮಾಗಮ ನಡೆಸಲ್ಪಟ್ಟಿತು. ಪ್ರೊ| ಚಿಂತಾಮಣೀ ಮಹಾಪಾತ್ರ ಚರ್ಚಾ ಗೋಷ್ಠಿ ಉದ್ಘಾಟಿಸಿದರು. ಮುಂಬಯಿ ವಿಶ್ವವಿದ್ಯಾಲಯದ ಅಂಗ ಸಂಸ್ಥೆಯಾದ ವಿ.ಪಿ.ಎಂ. ಅಂತಾರಾಷ್ಟ್ರೀಯ ಅಧ್ಯಯನ ಕೇಂದ್ರದ  ಅಧ್ಯಕ್ಷ, ಪ್ರಧಾನ ನಿರ್ದೇಶಕ‌ ಡಾ| ಪಿ.ಎಂ. ಕಾಮತ್‌ ಚರ್ಚಾಗೋಷ್ಠಿ ನಡೆಸಿದರು. ಭಾರತ ಅಮೇರಿಕದ ಮಾಜಿ ಅಧ್ಯಕ್ಷ ಬುಷ್‌ರ ಅಧ್ಯಕ್ಷತೆಯ ಅವಧಿಯಲ್ಲಿ ಅಂತಾರಾಷ್ಟ್ರೀಯ ಸಂಬಂಧ ಬೆಳೆಸಿತು. ಟ್ರಂಪ್‌ ಮಗಳಾದ ಇವಾಂಕಾ ಅಂತಾರಾಷ್ಟ್ರೀಯ ರಾಜಕೀಯ ಮತ್ತು ಆರ್ಥಿಕ ಕಾರ್ಯತಂತ್ರದ ನೀತಿಯನ್ನು ತಿಳಿಸಿಕೊಟ್ಟಳು. ಅಮೇರಿಕದಲ್ಲಿ ವಂಶಾಧಾರದ ಮೇಲೆ ಉದ್ಯೋಗ ಪ್ರಾಪ್ತವಾಗಬೇಕೆನ್ನುವ ಗೊಂದಲ ಸೃಷ್ಟಿಯಾದಾಗ 2017ರ‌ಲ್ಲಿ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಲ್ಲಿಗೆ ಭೆೇಟಿಕೊಟ್ಟರು. ಭಯೋತ್ಪಾದನೆಯ ನಿರ್ಮೂಲನೆಯಲ್ಲಿ ಎರಡೂ ದೇಶಗಳು ಒಂದಾದವು. ಉದಯೋನ್ಮುಖ ಪ್ರವೃತ್ತಿಯ ನೀತಿ ದಕ್ಷಿಣ ಏಷ್ಯಾದಲ್ಲಿ ಮೂಡಿ ಬಂದಿದೆ. ಚೀನ-ಉತ್ತರ ಕೊರಿಯಾ ಮತ್ತು ಹತ್ತಿರದ ಪೂರ್ವ ಏಷ್ಯಾದ ವಿಷಯ ಬಂದಾಗ ಚೀನ ಜೊತೆಗಿನ ಸಂಬಂಧದಲ್ಲಿ ಟ್ರಂಪ್‌ನ ನೀತಿ-ತತ್ವಗಳು ಅನುಮಾನಾಸ್ಪದವಾಗಿವೆ. ಆàನದ ನೀತಿಯಲ್ಲಿ ಆರ್ಥಿಕ ದೈತ್ಯತೆ ಒಂದು ಕಡೆಯಾದರೆ, ಮತ್ತೂಂದೆಡೆ ದಕ್ಷಿಣ ಕೊರಿಯಾದ ಪರಮಾಣು ತುದಿಯ ಆಸೆಯ ಸಮಾರಂಭದ ಪ್ರಬಲತೆಯಿಂದಲೋ ಬದಲಾವಣೆಯಾಗಿದೆ. ಜಪಾನ್‌ ಪ್ರಬಲವಾದರೆ ದಕ್ಷಿಣ ಕೊರಿಯಾ ಮುಂಚೂಣಿಯಲ್ಲಿದೆ ಎಂದು ಡಾ| ಕಾಮತ್‌ ಪ್ರಸ್ತಾವನೆಯಲ್ಲಿ ತಿಳಿಸಿದರು.

ವಾಸ್ತವಿಕವಾಗಿ ಟ್ರಂಪ್‌ ಏಷ್ಯಾದ ರಾಷ್ಟ್ರಗಳಾದ ಜಪಾನ್‌, ದಕ್ಷಣ ಕೊರಿಯಾ, ಚೀನ ದೇಶಗಳಿಗೆ ಪ್ರವಾಸ ಮಾಡಿ ಇಸ್ಲಾಮಿಕ್‌ ಭಯೋತ್ಪಾದನೆಯ ಹತ್ತಿಕ್ಕುವಿಕೆಯಲ್ಲಿ ಪಾಕಿಸ್ತಾನಿಗಳಾದ ಹಫೀಜ್‌ ಸಯೀದ್‌, ಮಸೂದ್‌ ಹಜಾರ್‌ ಹೆಸರನ್ನು ತೆಗೆದುಕೊಂಡರೆ ದಾವೂದ್‌ ಇಬ್ರಾಹಿಂನ ಹೆಸರನ್ನು ಬಿಟ್ಟಿದ್ದಾರೆ. ಅಮೇರಿಕದ ಅಧ್ಯಕ್ಷ ಟ್ರಂಪ್‌ನ ಆಡಳಿತವನ್ನು ವಿಮರ್ಶೆ ಮಾಡಿದಾಗ ಹಲವಾರು ಪ್ರಶ್ನೆಗಳು ಉದ್ಭವಿಸುತ್ತವೆ. ಅವರಿಂದ ಭಾರತ ಮತ್ತು ಭಾರತೀಯರಿಗೆ ಪ್ರತಿಫಲದ ಅನಿರೀಕ್ಷಿತತೆಯು ಕಾಡುತ್ತಿದೆ. ಟ್ರಂಪ್‌ನ ಗ್ರಹಿಕೆಗಳು, ಪ್ರತಿಕಾರಗಳು, ಅಪೇಕ್ಷೆಗಳು, ರಾಜತಾಂತ್ರಿಕತೆಯಿಂದ ಕೂಡಿವೆ ಎಂದು ಕಾಮತ್‌ ತಿಳಿಸಿದರು.

ಪ್ರೊ| ಕೆ.ಪಿ ವಿಜಯಲಕ್ಷ್ಮೀ ಪ್ರಧಾನ ವಿಷಯ ಮಂಡಿಸಿದರು. ಡಾ| ಆರ್‌.ಈ. ಗಿಡದುಬ್ಲಿ ಧನ್ಯವಾದಗೈದರು.

ಟ್ರಂಪ್‌ ಆಡಳಿತದಲ್ಲಿ ಭಾರತ-ಅಮೇರಿಕ ಕಾರ್ಯತಂತ್ರ ನೀತಿಯ ನಿಶ್ಚಿತತೆ  ವಿಷಯದ ಕುರಿತು ಡಾ| ಅರವಿಂದ ಕುಮಾರ್‌ ಹಾಗೂ ಟ್ರಂಪ್‌ನ ಅಧ್ಯಕ್ಷತೆಯಲ್ಲಿ  ಭಾರತ-ಅಮೇರಿಕ ಸಂಬಂಧದ ಏರಿಳಿತಗಳು ವಿಷಯದಲ್ಲಿ ಡಾ| ಎಂ.ಜೆ. ವಿನೋದ್‌ ಚರ್ಚಿಸಿದರು.  ಚತುಭುìಜ ಅರ್ಥವಂತಿಕೆಯಲ್ಲಿ ಭಾರತ ಮತ್ತು ಇಂಡೋ ಪೆಸಿಫಿಕ್‌ ಸಂಬಂಧ ಕುರಿತು ಡಾ| ಮೊನಿಶ್‌ ತೊರಂಗ್‌ಬಾಮ್‌ ವಿವರಿಸಿದರು.

ಪ್ರೊ| ಶ್ರೀರೂಪಾ ಶಹಾ ಅವರು ಟ್ರಂಪ್‌ ಅಧ್ಯಕ್ಷತೆಯಲ್ಲಿ ಭಾರತ-ಅಮೇರಿಕ ನಾಗರಿಕ ಪರಮಾಣು ಶಕ್ತಿಯ ಸಹಕಾರ ಎಂಬ ವಿಷಯವಾಗಿ ಮಾತನಾಡಿದರು. ಡಾ| ಆರ್‌.ಈ ಗಿಡದುಬ್ಲಿ ಅವರು ಮುಂದುವರಿದುಕೊಂಡು ಬಂದಿರುವ ಮತ್ತು ಬದಲಾಗುತ್ತಿರುವ ರಷ್ಯಾ ಅಮೇರಿಕದ ಸಂಬಂಧಗಳು ವಿಷಯದ ಕುರಿತು ವಿವರಣೆ ಮಾಡಿದರು. ಯುರೋಪಿಯನ್‌ ಸಂಘಟನೆಗೆ ಟ್ರಂಪ್‌ ಮತ್ತು ನ್ಯಾಟೋ ವರಮಾನ ಮತ್ತು ಅಳಿವು ಈ ವಿಷಯದ ಕುರಿತು ಡಾ| ಬಿ. ಕೃಷ್ಣಮೂರ್ತಿ ವಿವರಿಸಿದರು. ಇತರ ವಿಷಯಗಳ ಕುರಿತು ವಿವಿಧ ವಿಶ್ವವಿದ್ಯಾಲಯಗಳ ಶ್ರೇಷ್ಠ ವಿದ್ವಾಂಸರು ವಿವರಿಸಿದರು.  ಟ್ರಂಪ್‌ ಅಧ್ಯಕ್ಷತೆಯಲ್ಲಿ ಭಾರತ, ಚೀನ ಮತ್ತು ಪೂವ‌ì ಹತ್ತಿರದ ಇರಾನ್‌ ಜತೆಗಿನ ಅಮೇರಿಕದ ಸಂಬಂ ಧ
ಗಳು ವಿಷಯದ ಮೇಲೆ ನಿರ್ದೇಶಕ ಪಿ. ಎಸ್‌. ಗಂಗಾಧರ್‌ ಸುದೀರ್ಘ‌ವಾದ ವಿಶೇಷ ಭಾಷಣಗೈದರು. 

ವರದಿ: ರೊನಿಡಾ ಮುಂಬಯಿ


ಇಂದು ಹೆಚ್ಚು ಓದಿದ್ದು

Trending videos

Back to Top