CONNECT WITH US  

ಪಂಜಾಬಿಯ ಜನಪ್ರಿಯ ಖ್ಯಾತ ಸಂಗೀತ ದೇವತೆ “ಸುನಂದಾ ಶರ್ಮಾ!

ಸಂಗೀತ ಕ್ಷೇತ್ರದಲ್ಲಿ ಆಕೆಯ ಕೈಹಿಡಿದದ್ದು ಅದೃಷ್ಟ ಎಂಬುದನ್ನು ಅಲ್ಲಗಳೆಯುವಂತಿಲ್ಲ...

ನವದೆಹಲಿ: ಪಂಜಾಬಿಯ ಖ್ಯಾತ ಗಾಯಕಿ ಸುನಂದಾ ಶರ್ಮಾ ಎಂಬ ಗಾಯಕಿಯ ಈಗಾಗಲೇ ಖ್ಯಾತಿಯ ಉತ್ತುಂಗಕ್ಕೇರಿದ್ದಾರೆ. ಅವರ ಕಂಠಸಿರಿಯ ಪಯಣ ಜನಪ್ರಿಯವಾಗಿದ್ದು, ಶರ್ಮಾ ಅವರ ಯಶಸ್ಸಿನ ಓಟ ಮುಂದುವರಿದಿದೆ. ತಾನು ಹುಟ್ಟು ಕಲಾವಿದೆ ಎಂಬುದು ಸುನಂದಾ ಶರ್ಮಾ ಅವರ ಮನದಾಳದ ಮಾತು.

ಸಂಗೀತ ಕ್ಷೇತ್ರದಲ್ಲಿ ಆಕೆಯ ಕೈಹಿಡಿದದ್ದು ಅದೃಷ್ಟ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಸುನಂದಾ ಅವರ ವ್ಯಕ್ತಿತ್ವದಿಂದಾಗಿ ಸಂಗೀತ ಕ್ಷೇತ್ರದಲ್ಲಿ ಸ್ಟಾರ್ ಆಗಿ ಮಿಂಚುತ್ತಿರುವುದು ಸುಳ್ಳಲ್ಲ. ಯಾವುದೇ ಸಂಗೀತ ಕಾರ್ಯಕ್ರಮವಿರಲಿ ಆಕೆ ಇದ್ದರೆ ಅದೊಂದು ಧನಾತ್ಮಕ ವಾತಾವರಣವನ್ನು ಸೃಷ್ಟಿಸುತ್ತದೆ ಎಂಬುದು ಆಕೆಯ ನುಡಿಯಾಗಿದೆ.

ಪಂಜಾಬಿ ಸಂಗೀತ ಕ್ಷೇತ್ರದ ದೇವತೆಯಾಗಿ ಸುನಂದಾ ಕಂಗೊಳಿಸುತ್ತಿದ್ದಾರೆ. ಆದರೆ ಕೆಲವೊಂದು ಸಂದರ್ಭದಲ್ಲಿ ಆಕೆಯೂ ಕೆಲವು ಜಟಿಲ ಹಾಗೂ ಸಮಸ್ಯೆಗಳನ್ನು ಜೀವನದಲ್ಲಿ ಅನುಭವಿಸಿದ್ದಾರೆ. ಕೌಟುಂಬಿಕವಾಗಿಯೂ ತೊಂದರೆ ಅನುಭವಿಸಿದರೂ ಕೂಡಾ ಆಕೆಯ ಸಂಗೀತದ ಮಾಂತ್ರಿಕ ಶಕ್ತಿ ಪ್ರತಿಯೊಂದು ಸಮಸ್ಯೆಯನ್ನು ಸರಿದೂಗಿಸಿಕೊಂಡು ಹೋಗುವ ಮೂಲಕ ಲೇಡಿ ಬಾಸ್ ಆಗಿ ಮಿಂಚುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಸುನಂದಾ ಇಂದು ಸಾರ್ವಕಾಲಿಕ ಖ್ಯಾತ ಗಾಯಕಿಯಾಗಿ ಹೊರಹೊಮ್ಮಿದ್ದಾರೆ. ಆದರೂ ಆಕೆಯ ನಿಷ್ಠೆ ಮತ್ತು ಅಭಿಮಾನ ಪಂಜಾಬಿ ಸಂಸ್ಕೃತಿ ಹಾಗೂ ಜನರಿಗೆ ಮೀಸಲಾಗಿಟ್ಟಿದ್ದಾರೆ.

ಬಿಲ್ಲಿ ಅಖಾ ಎಂಬ ಹಾಡಿನ ಬಿಡುಗಡೆಗೂ ಮುನ್ನ ಹಾಡನ್ನು ದಿನವಿಡೀ  ಅಭ್ಯಾಸ ಮಾಡುತ್ತಿದ್ದರು. ಶ್ರಮಕ್ಕೆ ಸಿಕ್ಕ ಪ್ರತಿಫಲ ಎಂಬಂತೆ ಸುನಂದಾ ಅವರು ಯಾವಾಗಲೂ ಹಿಂದೆ ಬಿದ್ದಿಲ್ಲ. ಸುನಂದಾ ಅವರ ಕಠಿಣ ಶ್ರಮದಿಂದಾಗಿ ಸಂಗೀತ ಕ್ಷೇತ್ರ ಖುಷಿಯನ್ನು ನೀಡಿದೆಯಂತೆ.

ಆಕೆಯ ಖ್ಯಾತಿ ಕಠಿಣ ಶ್ರಮಕ್ಕೆ ಮತ್ತು ಸಂಗೀತದ ಕೌಶಲ್ಯವನ್ನು ಸುಧಾರಣೆಪಡಿಸಿಕೊಳ್ಳಲು ಯಾವತ್ತೂ ಅಡ್ಡಿಯಾಗಿಲ್ಲವಂತೆ. ಈಗಲೂ ತಾನು ಪ್ರತಿಯೊಂದು ಹಾಡನ್ನು ಹಾಡುವ ಮೊದಲು ತಾನಿನ್ನೂ ಕ್ಷೇತ್ರದಲ್ಲಿ ಎಳಸು ಎಂಬುದಾಗಿಯೇ ಭಾವಿಸುವುದಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತುಂಬಾ ಸೂಕ್ಷ್ಮ ಮನೋಭಾವ ಹೊಂದಿರುವ ಸುನಂದಾ ಅವರು ತಮ್ಮ ದಿನನಿತ್ಯದ ಕಠಿಣ ಪರಿಶ್ರಮದ ನಡುವೆಯೂ ಜನರ ಜೊತೆ ಸಂವಹನ ನಡೆಸುತ್ತಾರೆ. ಕೆಲವೊಮ್ಮೆ ಅನಾಥಾಶ್ರಮದ ಮಕ್ಕಳ ಜೊತೆ ಕಾಲ ಕಳೆಯುತ್ತಾರೆ. ಈ ಕಾರಣದಿಂದಾಗಿಯೇ ಸುನಂದಾ ಅವರ ಕಾರ್ಯಕ್ರಮಕ್ಕೆ ಹೆಚ್ಚು ಜನರು ಆಗಮಿಸಿ ಪ್ರೀತಿ, ಅಭಿಮಾನ ತೋರಿಸುತ್ತಾರೆ.

ಪಂಜಾಬ್ ನ ಅಮೃತಸರದಲ್ಲಿ ಜನಿಸಿದ್ದ ಸುನಂದಾ ಮೊಹಾಲಿಯಲ್ಲಿ ತನ್ನ ವೃತ್ತಿ ಜೀವನ ಆರಂಭಿಸಿದ್ದರು. ತನ್ನ ಅದ್ಭುತ ಕಂಠಸಿರಿಯಿಂದಾಗಿ ಸುನಂದಾ ಬರೇ ಪಂಜಾಬಿ ಅಥವಾ ಭಾರತೀಯಳಾಗಿ ಉಳಿಯಲಿಲ್ಲ. ಇಡೀ ಪ್ರಪಂಚದಲ್ಲಿಯೇ ಇರುವ ಪಂಜಾಬಿಗಳ ಮನ ಗೆದ್ದುಬಿಟ್ಟಿದ್ದರು. ದೆಹಲಿ, ಜಾರ್ಖಂಡ್, ಬಾಂಬೆ , ಅಮೆರಿಕ, ಕೆನಡಾ, ಯುರೋಪ್, ಆಸ್ಟ್ರೇಲಿಯಾ ಸೇರಿದಂತೆ ಜಗತ್ತಿನ ವಿವಿಧೆಡೆ ಸುನಂದಾ ತಮ್ಮ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಸಿಕೊಟ್ಟಿದ್ದರು.


ಇಂದು ಹೆಚ್ಚು ಓದಿದ್ದು

Trending videos

Back to Top