CONNECT WITH US  

ವಿಶ್ವ ಇಲೆವೆನ್‌ ಟಿ20 ತಂಡ ಅಂತಿಮ

ಲಂಡನ್‌: ನ್ಯೂಜಿಲ್ಯಾಂಡಿನ ಲ್ಯೂಕ್‌ ರಾಂಚಿ ಮತ್ತು ಮಿಚೆಲ್‌ ಮೆಕ್ಲೆನಗನ್‌ ಅವರನ್ನು ಸೇರ್ಪಡೆಗೊಳಿಸುವುದರೊಂದಿಗೆ ವಿಶ್ವ ಇಲೆವೆನ್‌ ಟಿ20 ತಂಡವನ್ನು ಅಂತಿಮಗೊಳಿಸಲಾಗಿದೆ. ಚಂಡಮಾರುತದಿಂದ ಹಾನಿಗೊಳ ಗಾದ ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ಸ್ಟೇಡಿಯಂಗಳ ದುರಸ್ತಿಗಾಗಿ ಮೇ 31ರಂದು ಐತಿಹಾಸಿಕ ಲಾರ್ಡ್ಸ್‌ನಲ್ಲಿ ಈ ಸಹಾಯಾರ್ಥ ಪಂದ್ಯ ನಡೆಯಲಿದೆ. ವೆಸ್ಟ್‌ ಇಂಡೀಸ್‌ ಮತ್ತು ವಿಶ್ವ ಇಲೆವೆನ್‌ ತಂಡಗಳು ಮುಖಾಮುಖಿಯಾಗಲಿವೆ. 

ವಿಶ್ವ ಇಲೆವೆನ್‌ ತಂಡವನ್ನು ಇಂಗ್ಲೆಂಡಿನ ಎವೋನ್‌ ಮಾರ್ಗನ್‌ ಮುನ್ನಡೆಸಲಿದ್ದಾರೆ. ಭಾರತದ ಇಬ್ಬರು ಆಟಗಾರರು ಈ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಇವರೆಂದರೆ ವಿಕೆಟ್‌ ಕೀಪರ್‌ ದಿನೇಶ್‌ ಕಾರ್ತಿಕ್‌ ಮತ್ತು ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ.

ಲ್ಯೂಕ್‌ ರಾಂಚಿ ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟಗೆ ವಿದಾಯ ಹೇಳಿದ್ದರು. ಆದರೆ ಪಾಕಿಸ್ಥಾನ್‌ ಸೂಪರ್‌ ಲೀಗ್‌ನಲ್ಲಿ 11 ಇನ್ನಿಂಗ್ಸ್‌ ಗಳಿಂದ 435 ರನ್‌ ಪೇರಿಸಿ ಅಮೋಘ ಫಾರ್ಮ್ ಪ್ರದರ್ಶಿಸಿದ್ದರು. ಕೇವಲ 19 ಎಸೆತಗಳಲ್ಲಿ ಅರ್ಧ ಶತಕ ಬಾರಿಸಿ ಕೂಟದ ದಾಖಲೆಯನ್ನೂ ಸ್ಥಾಪಿಸಿದ್ದರು. ಸದ್ಯ ರಾಂಚಿ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ಪರ ಆಡುತ್ತಿದ್ದಾರೆ.

ವಿಶ್ವ  ಇಲೆವೆನ್‌ ತಂಡ 
ಎವೋನ್‌ ಮಾರ್ಗನ್‌ (ನಾಯಕ), ತಮಿಮ್‌ ಇಕ್ಬಾಲ್‌, ಲ್ಯೂಕ್‌ ರಾಂಚಿ, ಶಕಿಬ್‌ ಅಲ್‌ ಹಸನ್‌, ಶಾಹಿದ್‌ ಅಫ್ರಿದಿ, ಶೋಯಿಬ್‌ ಮಲಿಕ್‌, ದಿನೇಶ್‌ ಕಾರ್ತಿಕ್‌, ಹಾರ್ದಿಕ್‌ ಪಾಂಡ್ಯ, ತಿಸರ ಪೆರೆರ, ರಶೀದ್‌ ಖಾನ್‌, ಮಿಚೆಲ್‌ ಮೆಕ್ಲೆನಗನ್‌.


ಇಂದು ಹೆಚ್ಚು ಓದಿದ್ದು

Trending videos

Back to Top