CONNECT WITH US  

ಪ್ರಥಮ ದರ್ಜೆ ಕ್ರಿಕೆಟಿಗೆ ಅಬ್ದುಲ್‌ ರಜಾಕ್‌!

ಲಾಹೋರ್‌: ಪಾಕಿಸ್ಥಾನದ ಮಾಜಿ ಆಲ್‌ರೌಂಡರ್‌ ಅಬ್ದುಲ್‌ ರಜಾಕ್‌ ಪ್ರಥಮ ದರ್ಜೆ ಕ್ರಿಕೆಟಿಗೆ ಮರಳುವುದಾಗಿ ಘೋಷಿಸಿದ್ದಾರೆ. ಅಬ್ದುಲ್‌ ರಜಾಕ್‌ 2014ರಿಂದ ಯಾವುದೇ ಕ್ರಿಕೆಟ್‌ ಆಡಿಲ್ಲವಾದರೂ ಈ ವರ್ಷ ಪಿಟಿವಿ ತಂಡದ ನೇತೃತ್ವ ವಹಿಸಲು ನಿರ್ಧರಿಸಿದ್ದಾರೆ. ಆದರೆ ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಾಪಸಾಗುವ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ. ಅವರ ಹೇಳಿಕೆ "ಡೈಲಿ ಎಕ್ಸ್‌ಪ್ರೆಸ್‌'ನಲ್ಲಿ ಪ್ರಕಟಗೊಂಡಿದೆ.

"ನಾನೀಗ ಸಂಪೂರ್ಣ ಫಿಟ್‌ನೆಸ್‌ ಹೊಂದಿದ್ದೇನೆ. ಪಾಕಿಸ್ಥಾನ್‌ ಕಪ್‌ ಕ್ರಿಕೆಟ್‌ನಲ್ಲಿ ಪೇಶಾವರ ವಿರುದ್ಧ 94 ರನ್‌ ಮಾಡುವುದರ ಜತೆಗೆ ವಿಕೆಟ್‌ಗಳನ್ನೂ ಉರುಳಿಸಿದ್ದೇನೆ. ಮುಂದಿನ ವರ್ಷ ಪಾಕಿಸ್ಥಾನ್‌ ಪ್ರೀಮಿಯರ್‌ ಲೀಗ್‌ಗೆ ಆಯ್ಕೆಯಾಗುವ ವಿಶ್ವಾಸದಲ್ಲಿದ್ದೇನೆ' ಎಂದು ರಜಾಕ್‌ ಹೇಳಿದ್ದಾರೆ.


ಇಂದು ಹೆಚ್ಚು ಓದಿದ್ದು

Trending videos

Back to Top