CONNECT WITH US  

ಸಮಗ್ರ ಕೃಷಿ ನೀತಿಗೆ ಜೆಡಿಎಸ್‌ ಒತ್ತು

ರೈತರ ಸಲಹಾ ಸಮಿತಿ ರಚನೆ: ಜೆಡಿಎಸ್‌ ಪ್ರಣಾಳಿಕೆಯಲ್ಲಿ ಘೋಷಣೆ

ಬೆಂಗಳೂರು: ಬೆಳೆಸಾಲದ ಜತೆಗೆ ರೈತರು ಕೃಷಿ ಉದ್ದೇಶಕ್ಕಾಗಿ ಮಾಡಿರುವ ಎಲ್ಲಾ ಸಾಲ (ಟ್ರಾಕ್ಟರ್‌ ಖರೀದಿ, ಕೃಷಿ ಸಲಕರಣೆ ಖರೀದಿ ಮತ್ತಿತರೆ) ಸುಮಾರು 53 ಸಾವಿರ ಕೋಟಿ ರೂ. ಇದೆ ಎಂದು ಅಂದಾಜಿಸಲಾಗಿದ್ದು, ಈ ಎಲ್ಲಾ ಸಾಲವನ್ನು ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಮನ್ನಾ ಮಾಡುವುದಾಗಿ ಜೆಡಿಎಸ್‌ ಹೇಳಿದೆ.

ಸೋಮವಾರ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ ಪಕ್ಷದ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಪ್ರಣಾಳಿಕೆ ಕುರಿತು ವಿವರಿಸಿದರು. ರೈತರ ಕೃಷಿ ಸಾಲ ಸಂಪೂರ್ಣ ಮನ್ನಾ ಜತೆಗೆ ಅವರು ಮುಂದೆಂದೂ ಸಾಲ ಮಾಡದೆ ಬೆಳೆಗಳಿಗೆ ಸಮರ್ಪಕ ಬೆಳೆ ಪಡೆದು ಸಮೃದಟಛಿ ಜೀವನ ನಡೆಸಲು ಅನುಕೂಲವಾಗುವಂತೆ ಸಮಗ್ರ ಕೃಷಿ ನೀತಿ ರೂಪಿಸಲಾಗುವುದು. ರೈತರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಪ್ರತಿ ಜಿಲ್ಲೆಯಲ್ಲಿ ಇಬ್ಬರು ಪ್ರಗತಿಪರ ರೈತರನ್ನೊಳಗೊಂಡ ರೈತರ ಸಲಹಾ ಸಮಿತಿ ರಚನೆ, ಕೃಷಿಯಲ್ಲಿ ತಂತ್ರಜ್ಞಾನ. ಪ್ರತಿ ತಾಲೂಕಿನಲ್ಲಿ ಕೃಷಿ ಉತ್ಪಾದನಾ ಯೋಜನಾ ಘಟಕ, ಕೃಷಿ ವಾಣಿಜ್ಯ ಸಂಶೋಧನೆಗೆ ಒತ್ತು, ಸೋಪ್‌ ಮತ್ತು ಡಿಟರ್ಜೆಂಟ್‌ ಸಸಿ ಬೆಳೆಯಲು ಪ್ರೋತ್ಸಾಹ ನೀಡಲಾಗುವುದು ಎಂದರು.

ಪ್ರಣಾಳಿಕೆಯಲ್ಲಿರುವ ಪ್ರಮುಖ ಅಂಶಗಳು:
- ಅಲ್ಪಸಂಖ್ಯಾತರ ಅಭಿವೃದಿಟಛಿಗೆ ಸಾಚಾರ್‌ ಸಮಿತಿ ವರದಿ ಜಾರಿ ಜತೆಗೆ ಅಲೀಘರ್‌ ಮುಸ್ಲಿಂ ವಿಶ್ವವಿದ್ಯಾಲಯದ ಮಾದರಿಯಲ್ಲಿ ಕಲಬುರಗಿಯಲ್ಲಿ ಉರ್ದು ವಿವಿ ಸ್ಥಾಪನೆ, ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ.
- ಎಸಿಬಿ ನಿರ್ಮೂಲನೆ ಮಾಡಿ ಲೋಕಾಯುಕ್ತ ಬಲವರ್ಧನೆ, ಭೂ ಕಬಳಿಕೆದಾರರ ವಿರುದಟಛಿ ಕಠಿಣ ಕ್ರಮ, ಸರ್ಕಾರದ ಎಲ್ಲಾ ಕಾರ್ಯಕ್ರಮಗಳ ಸಮರ್ಪಕ ಜಾರಿಗೆ ಸೇವಾ ಹಕ್ಕು ಕಾಯ್ದೆ ಜಾರಿಗೊಳಿಸುವುದು.
- ವಕೀಲರ ಸಂಘಕ್ಕೆ 100 ಕೋಟಿ ರೂ. ಅನುದಾನ ಒದಗಿಸುವುದರ ಜತೆಗೆ ವಕೀಲರಿಗೆ ನೀಡುವ ಸ್ಟೈಫ‌ಂಡ್‌ ಮೊತ್ತ 5 ಸಾವಿರ  ರೂ.ಗೆ ಏರಿಸಲಾಗುವುದು.
- ಸಣ್ಣ ವ್ಯಾಪಾರಿಗಳ ಅನುಕೂಲಕ್ಕೆ ಮೊಬೈಲ್‌ ಬ್ಯಾಂಕಿಂಗ್‌, ನಗರಾಭಿವೃದ್ಧಿ ಪ್ರಾಧಿಕಾರಿಗಳು ನಿರ್ಮಿಸುವ ಬಡಾವಣೆಗಳಲ್ಲಿ  ನಿವೃತ್ತ ಕಾನ್‌ಸ್ಟೆàಬಲ್‌ಗ‌ಳಿಂದ ಹಿಡಿದು ಸಬ್‌ ಇನ್ಸ್‌ಪೆಕ್ಟರ್‌ವರೆಗೆ ರಿಯಾಯಿತಿ ದರದಲ್ಲಿ ಶೇ.5ರಷ್ಟು ನಿವೇಶನ
- ಹೋಬಳಿಗಳಲ್ಲಿ ಕ್ಲಸ್ಟರ್‌ ವ್ಯವಸ್ಥೆ ಜಾರಿಗೆ ತಂದು ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತಲೂ ಉತ್ತಮ ಶಿಕ್ಷಣ ನೀಡಲು ಕ್ರಮ, ಸರ್ಕಾರಿ ಶಾಲೆಗಳಲ್ಲಿ ಐದನೇ ತರಗತಿಯಿಂದ ಆಂಗ್ಯ ಮಾಧ್ಯಮ ಶಿಕ್ಷಣ ಜಾರಿ.
- ಎಲ್ಲಾ ನಾಗರಿಕರಿಗೂ ಸಮರ್ಪಕ ಆರೋಗ್ಯ ಸೇವೆ ನೀಡಲು ಹೊಸ ಆರೋಗ್ಯ ಸೇವಾ ವ್ಯವಸ್ಥೆ ಜಾರಿಗೆ ತಂದು ಸಾರ್ವಜನಿಕ ಮತ್ತು ಖಾಸಗಿ ವಲಯಗಳ ನೋಂದಾಯಿತ ವೈದ್ಯರ ನೆಟ್‌ವರ್ಕ್‌ ಜಾಲ ರೂಪಿಸಿ ಜನತೆ ತಮಗೆ ಬೇಕಾದ ವೈದ್ಯರಿಂದ ಪ್ಯಾಕೇಜ್‌ ಮೂಲಕ ಸೇವೆ ಪಡೆದುಕೊಳ್ಳಲು ಅವಕಾಶ
- ನೀರಾವರಿ ಕ್ಷೇತ್ರಕ್ಕೆ ಮುಂದಿನ 5 ವರ್ಷದಲ್ಲಿ 1.50 ಲಕ್ಷ ಹೂಡಿಕೆ ಜತೆಗೆ ಕಾವೇರಿ ನದಿಯಿಂದ ಹೆಚ್ಚುವರಿ 15 ಟಿಎಂಸಿ ನೀರು ಬಳಕೆಗೆ ಯೋಜನೆ ಮತ್ತು ಕಾಲುವೆಗಳನ್ನು ಮೇಲ್ದರ್ಜೆಗೇರಿಸುವುದು
- ಎಲ್ಲರಿಗೂ ಸೂರು ಯೋಜನೆಯಡಿ ಗ್ರಾಮೀಣ ಪ್ರದೇಶಗಳಲ್ಲಿ ಬಾಡಿಗೆಯಿಂದ ಸ್ವಂತಕ್ಕೆ ಯೋಜನೆಯಡಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವವರು ಅವುಗಳನ್ನು ಕಂತುಗಳ ಮೂಲಕ ಸ್ವಂತ ಮಾಡಿಕೊಳ್ಳಲು ಅವಕಾಶ.
- ರಾಜ್ಯ ನಗರ ಯೋಜನಾ ಮಂಡಳಿ ಬದಲಾಗಿ ರಾಜ್ಯ ನಗರಾಭಿವೃದಿಟಛಿ ಆಯೋಗ ಸ್ಥಾಪನೆ, ನಗರಾಭಿವೃದ್ಧಿ ಮಂಡಳಿಗಳನ್ನು ರದ್ದುಗೊಳಿಸಿ ಅದರ ಜವಾಬ್ದಾರಿಯನ್ನು ಮಹಾನಗರ ಪಾಲಿಕೆ ಯೋಜನಾ ಮಂಡಳಿ ಮತ್ತು ಜಿಲ್ಲಾ ಯೋಜನಾ ಘಟಕಗಳಿಗೆ ಹಸ್ತಾಂತರಿಸುವುದು,
- 2020ರ ವೇಳೆಗೆ ವಿದ್ಯುತ್‌ ಸ್ವಾವಲಂಬಿ ರಾಜ್ಯವಾಗಿ ಕರ್ನಾಟಕವನ್ನು ರೂಪಿಸುವುದು, ಶಾಖೋತ್ಪನ್ನ ವಿದ್ಯುತ್‌ ಕೇಂದ್ರಗಳ ಬಲವರ್ಧನೆ.
- ಎಲ್ಲಾ ಮುಸ್ಲಿಂ ವಕ್ಫ್ ಸಂಸ್ಥೆಗಳನ್ನು ರಾಜ್ಯ ವಕ್ಫ್ ಮಂಡಳಿಗೆ ವರ್ಗಾಯಿಸುವುದು, ವಕ್ಫ್ ಜಮೀನುಗಳನ್ನು ಇನಾಮ್‌ ರದ್ದತಿ ಮತ್ತು ಭೂಸುಧಾರಣಾ ಕಾಯ್ದೆಯಿಂದ ಹೊರಗಿಡುವುದು, ಜಿಲ್ಲಾ ಕೇಂದ್ರಗಳಲ್ಲಿ ಅಲ್ಪಸಂಖ್ಯಾತರ ಸ್ಮಶಾನಗಳಿಗೆ ಜಮೀನು ಖರೀದಿಸಲು ಆರ್ಥಿಕ ಸಹಾಯ.


ಇಂದು ಹೆಚ್ಚು ಓದಿದ್ದು

Trending videos

Back to Top