CONNECT WITH US  

ಗುರುವಾರ ಸಂಜೆ ರಾಷ್ಟ್ರೀಯ ನಾಯಕರು ರಾಜ್ಯ ಬಿಟ್ಟು ತೆರಳಬೇಕು

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಮೇ 12ರಂದು ಮತದಾನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮೇ 10ರ ಸಂಜೆ 6 ಗಂಟೆ ಯೊಳಗೆ ರಾಜಕೀಯ ಪಕ್ಷಗಳ ರಾಷ್ಟ್ರೀಯ ನಾಯಕರು, ಬೇರೆ ರಾಜ್ಯಗಳಿಂದ ಬಂದ ಮುಖಂಡರು ಕರ್ನಾಟಕ ಬಿಟ್ಟು ತೆರಳಬೇಕು. 

ಆದರೆ, ರಾಜ್ಯದ ಉಸ್ತುವಾರಿ ನೋಡಿಕೊಳ್ಳುವ ಪಕ್ಷದ ಪದಾಧಿಕಾರಿಯೊಬ್ಬರಿಗೆ ಮಾತ್ರ ವಿನಾಯಿತಿ ನೀಡಲಾಗಿದ್ದು, ರಾಜ್ಯದ ಕೇಂದ್ರ ಸ್ಥಳದಲ್ಲಿ ಮಾತ್ರ ಅವರಿಗೆ ಉಳಿದುಕೊಳ್ಳಲು ಅವಕಾಶವಿರುತ್ತದೆ. ಅದರ ಸಂಪೂರ್ಣ ಮಾಹಿತಿಯನ್ನು ಆಯೋಗಕ್ಕೆ ನೀಡಬೇಕು. ಅವರ ಸಂಚಾರ ತಂಗಿರುವ ಜಾಗದಿಂದ ಪಕ್ಷದ ಕಚೇರಿವರೆಗೆ ಮಾತ್ರ ಸೀಮಿತವಾಗಿರುತ್ತದೆ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ತಿಳಿಸಿದ್ದಾರೆ.


ಇಂದು ಹೆಚ್ಚು ಓದಿದ್ದು

Trending videos

Back to Top