CONNECT WITH US  

24 ಗಂಟೆಗಳಲ್ಲಿ ಕೃಷಿ ಸಾಲ ಮನ್ನಾ:ಎಚ್‌ಡಿಕೆ

ಜೆಡಿಎಸ್‌ ಪ್ರಣಾಳಿಕೆ ಬಿಡುಗಡೆ

ಬೆಂಗಳೂರಿನಲ್ಲಿ ಜೆಡಿಎಸ್‌ ಪ್ರಣಾಳಿಕೆ ಬಿಡುಗಡೆ ಮಾಡಿದ ಕುಮಾರಸ್ವಾಮಿ.

ಬೆಂಗಳೂರು: ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ರೈತರ ಬೆಳೆ ಸಾಲ ಸೇರಿದಂತೆ ಕೃಷಿ ಚಟುವಟಿಕೆಗಳಿಗಾಗಿ ಮಾಡಿರುವ ಎಲ್ಲಾ ಸಾಲ ಮನ್ನಾ, ಎಲ್ಲರಿಗೂ ಪ್ರಾಥಮಿಕ ಆರೋಗ್ಯ ಸೇವೆ ಒದಗಿಸಲು ಹೊಸ ಆರೋಗ್ಯ ಸೇವಾ ವ್ಯವಸ್ಥೆ, ನೀರಾವರಿ ಕ್ಷೇತ್ರದಲ್ಲಿ ಐದು ವರ್ಷದಲ್ಲಿ 1.5 ಲಕ್ಷ ಕೋಟಿ ರೂ. ಹೂಡಿಕೆ ಮಾಡುವ ಮೂಲಕ  ಬಯಲು ಸೀಮೆ ಜಿಲ್ಲೆಗಳಿಗೆ 60 ಟಿಎಂಸಿ ನೀರು ಒದಗಿಸುವುದು, ಪ್ರತಿಯೊಬ್ಬರಿಗೂ ಸ್ವಂತದ್ದೊಂದು ಸೂರು ಒದಗಿಸಲು ಗ್ರಾಮೀಣ ಪ್ರದೇಶಗಳಲ್ಲಿ ಬಾಡಿಗೆಯಿಂದ ಸ್ವಂತಕ್ಕೆ ಎಂಬ ಯೋಜನೆ, ಗ್ರಾಮೀಣ ಯುವಕರಿಗೆ ಮಾಸಿಕ 7ರಿಂದ 8 ಸಾವಿರ ರೂ. ವೇತನ ನೀಡಿ ಅರಣ್ಯ ಬೆಳೆಸುವ ಜವಾಬ್ದಾರಿ ವಹಿಸುವ ಮೂಲಕ 70 ಲಕ್ಷ ಉದ್ಯೋಗ ಸೃಜನೆ..

ರಾಜ್ಯ ವಿಧಾನಸಭೆ ಚುನಾವಣೆಗಾಗಿ ಜೆಡಿಎಸ್‌ ಸೋಮವಾರ ಬಿಡುಗಡೆ ಮಾಡಿದ ಜನತಾ ಪ್ರಣಾಳಿಕೆ, ಜನರದ್ದೇ ಆಳ್ವಿಕೆ ಪ್ರಣಾಳಿಕೆಯ ಪ್ರಮುಖಾಂಶಗಳು. ಆದರೆ, ಇದಾವುದನ್ನೂ ಸಾಲ ಮಾಡಿ ಒದಗಿಸುವುದಿಲ್ಲ. ಭ್ರಷ್ಟಾಚಾರಕ್ಕೆ ಸಂಪೂರ್ಣ ಕಡಿವಾಣ ಹಾಕಿ ರಾಜ್ಯದ ಜನರಿಂದ ಸಂಗ್ರವಾಗುವ ತೆರಿಗೆಯಿಂದಲೇ ಹಣ ಭರಿಸಲಾಗುತ್ತದೆ. ಈಗಾಗಲೇ ಇದಕ್ಕಾಗಿ ನೀಲ ನಕ್ಷೆಯೊಂದನ್ನು ಸಿದ್ಧಪಡಿಸಲಾಗಿದೆ ಎಂದು ಪ್ರಣಾಳಿಕೆ ಬಿಡುಗಡೆ ಮಾಡಿದ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಪ್ರಣಾಳಿಕೆಯಲ್ಲಿನ ಪ್ರಮುಖಾಂಶಗಳು
- ವಾಣಿಜ್ಯ ಹಾಗೂ ಸಹಕಾರ ಬ್ಯಾಂಕುಗಳಲ್ಲಿನ ರೈತರ ಸಂಪೂರ್ಣ ಸಾಲ ಮನ್ನಾ
- ಗರ್ಭಿಣಿಯರಿಗೆ ಹೆರಿಗೆ ಪೂರ್ವ ಹಾಗೂ ನಂತರ ಆರು ತಿಂಗಳು ಮಾಸಿಕ 6 ಸಾವಿರ ರೂ.
- ಬಡ ಮಹಿಳೆಯರಿಗೆ ತಿಂಗಳಿಗೆ 2 ಸಾವಿರ ರೂ. ಕುಟುಂಬ ನಿರ್ವಹಣಾ ವೆಚ್ಚ
- ಹಿರಿಯ ನಾಗರಿಕರಿಗೆ 6 ಸಾವಿರ ರೂ., 80 ವರ್ಷ ಮೀರಿದವರಿಗೆ 8 ಸಾವಿರ ರೂ. ಮಾಸಾಶನ
- ಕೃಷಿ ಆಧಾರಿತ ಉದ್ದಿಮೆ ಸ್ಥಾಪಿಸಲು 10 ಲಕ್ಷ ರೂ. ಸೌಲ ಸೌಲಭ್ಯ ಮತ್ತು ಶೇ. 35ರಷ್ಟು ಸಬ್ಸಿಡಿ
- ರೈತರು ಭೂಮಿಯಲ್ಲಿ ಮಳೆನೀರು ಕೊಯ್ಲು ವ್ಯವಸ್ಥೆ ಅಳವಡಿಸಿಕೊಳ್ಳಲು ಶೇ. 100 ಸಬ್ಸಿಡಿ
- ಪ್ರವಾಸೋದ್ಯಮದಲ್ಲಿ 50 ಲಕ್ಷ ಮಂದಿಗೆ ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗಾವಕಾಶಕ್ಕೆ ಕ್ರಮ
- ಅಲೀಘರ್‌ ಮುಸ್ಲಿಂ ವಿಶ್ವವಿದ್ಯಾಲಯದ ಮಾದರಿಯಲ್ಲಿ ಕಲಬುರಗಿಯಲ್ಲಿ ಉರ್ದು ವಿಶ್ವವಿದ್ಯಾಲಯ ಸ್ಥಾಪನೆ


ಇಂದು ಹೆಚ್ಚು ಓದಿದ್ದು

Trending videos

Back to Top