CONNECT WITH US  

ಹ್ಯಾರಿ ಮದುವೆಗೆ ಊಟ ಇಲ್ವಾ?

ಲಂಡನ್‌: ಅಚ್ಚರಿಯ ಬೆಳವಣಿಗೆಯಲ್ಲಿ, ಇದೇ ತಿಂಗಳು ನಡೆಯಲಿರುವ ಬ್ರಿಟನ್‌ ರಾಜಕುಮಾರ ಹ್ಯಾರಿ ಹಾಗೂ ಮೆಘನ್‌ ಮಾರ್ಕೆಲ್‌ ಅವರ ವಿವಾಹಕ್ಕೆ ಸಂಬಂಧಪಟ್ಟಂತೆ ಸಣ್ಣದೊಂದು ಗೊಂದಲ ಹುಟ್ಟಿಕೊಂಡಿದೆ. ಆಯ್ದ 1,200 ವ್ಯಕ್ತಿಗಳಿಗೆ ಆಮಂತ್ರಣ ನೀಡಲಾಗಿದೆ. ಆದರೆ, ಅವರಲ್ಲಿ ಕೆಲವರಿಗೆ ಅನಾಮಧೇಯ ಪತ್ರಗಳು ಬಂದಿದ್ದು, ಅದರಲ್ಲಿ ಮದುವೆಗೆ ಬರುವ ಅತಿಥಿಗಳು, ತಮ್ಮ ಊಟವನ್ನು ತಾವೇ ತರಬೇಕು. ಇಲ್ಲವೇ, ಮದುವೆ ಹಾಲ್‌ನಲ್ಲಿ ಏರ್ಪಡಿಸಲಾಗಿರುವ ಆಹಾರ ಕೌಂಟರ್‌ಗಳಲ್ಲಿ ಹಣ ಕೊಟ್ಟು ಊಟ ಖರೀದಿಸಬೇಕು ಎಂದು ಸೂಚಿಸಲಾ ಗಿದೆಯಂತೆ. 

ಇದನ್ನು ಕೆಲ ಆಮಂತ್ರಿತರೇ ಬಹಿರಂಗವಾಗಿ ಹೇಳಿಕೊಂಡು ಅಸಮಾಧಾನ ವ್ಯಕ್ತಪಡಿಸಿದ್ದು, ಕುತೂಹಲಕ್ಕೆಡೆ ಮಾಡಿಕೊಟ್ಟಿದೆ. ಇದಕ್ಕೆ ಬ್ರಿಟನ್‌ ಅರಮನೆಯಿಂದ ಯಾವುದೇ ಸ್ಪಷ್ಟನೆ ಬಂದಿಲ್ಲ.


ಇಂದು ಹೆಚ್ಚು ಓದಿದ್ದು

Trending videos

Back to Top