CONNECT WITH US  

ಈ ವರ್ಷ ಸಾಹಿತ್ಯ ನೊಬೆಲ್‌ ಪ್ರಶಸ್ತಿ ಇಲ್ಲ

ಸ್ಟಾಕ್‌ಹೋಂ: ಈ ವರ್ಷದ ನೊಬೆಲ್‌ ಸಾಹಿತ್ಯ ಪ್ರಶಸ್ತಿಯನ್ನು ತಡೆ ಹಿಡಿದಿರುವುದಾಗಿ ಸ್ವೀಡನ್‌ ಮೂಲದ ನೊಬೆಲ್‌ ಸಂಸ್ಥೆ ಪ್ರಕಟಿಸಿದೆ. ಪ್ರಸಕ್ತ ವರ್ಷದ ಪ್ರಶಸ್ತಿಯನ್ನು 2019ರಲ್ಲಿ ನೀಡಲಾಗುವ ಪ್ರಶಸ್ತಿಯೊಂದಿಗೆ ಜಂಟಿಯಾಗಿ ನೀಡಲಾಗುವುದು ಎಂದು ಸಂಸ್ಥೆ ಹೇಳಿದೆ. 70 ವರ್ಷಗಳ ಇತಿಹಾಸದಲ್ಲಿ ನೊಬೆಲ್‌ ಸಂಸ್ಥೆ ತನ್ನ ಪ್ರತಿಷ್ಠಿತ ಪ್ರಶಸ್ತಿಯನ್ನು ತಡೆ ಹಿಡಿಯುತ್ತಿರುವುದು ಇದೇ ಮೊದಲು. ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯೆ ಕಟಾರಿನಾ ಫೊಸ್ಟೆನ್‌ ಅವರ ಪತಿ ಜೀನ್‌ ಕ್ಲಾಡ್‌ ವಿರುದ್ಧ ಕಳೆದ ವರ್ಷ ಅತ್ಯಾಚಾರ ಆರೋಪಗಳು ಕೇಳಿಬಂದು ಅದು ವಿವಾದದ ಸ್ವರೂಪ ಪಡೆದ ಹಿನ್ನೆಲೆಯಲ್ಲಿ, ಕಟಾರಿನಾ ಹಾಗೂ ಸಮಿತಿ ಇತರ ಸದಸ್ಯರು ರಾಜಿನಾಮೆ ನೀಡಿದ್ದಾರೆ.


ಇಂದು ಹೆಚ್ಚು ಓದಿದ್ದು

Trending videos

Back to Top