CONNECT WITH US  

ಕಂದಹಾರ್‌ನಲ್ಲಿ ತಾಲಿಬಾನ್‌ ಉಗ್ರರ ದಾಳಿ: 5 ಅಫ್ಘಾನ್‌ ಪೊಲೀಸರ ಹತ್ಯೆ

ಕಾಬೂಲ್‌ : ದಕ್ಷಿಣ ಕಂದಹಾರ್‌ ಪ್ರಾಂತ್ಯದಲ್ಲಿ ಕಾವಲು ಗಸ್ತು ನಿರತವಾಗಿದ್ದ  ಪೊಲೀಸ್‌ ತಂಡದ ಮೇಲೆ ತಾಲಿಬಾನ್‌ ಉಗ್ರರು ದಾಳಿ ನಡೆಸಿ ಐವರು ಪೊಲೀಸರನ್ನು ಕೊಂದಿರುವುದಾಗಿ ಅಫ್ಘಾನ್‌ ಅಧಿಕಾರಿಯೋರ್ವರು ತಿಳಿಸಿದ್ದಾರೆ. 

ಪಾಕ್‌ ಗಡಿಗೆ ಸಮೀಪದ ಮರೂಫ್ ಜಿಲ್ಲೆಯಲ್ಲಿ ನಿನ್ನೆ ಭಾನುವಾರ ನಡೆದಿದ್ದ ತಾಲಿಬಾನ್‌ ಉಗ್ರರ ಈ ದಾಳಿಯಲ್ಲಿ ಒಂಬತ್ತು ಪೊಲೀಸರು ಗಾಯಗೊಂಡರೆಂದು ಕಂದಹಾರ ಪ್ರಾಂತೀಯ ಪೊಲೀಸ್‌ ಪಡೆ ಮುಖ್ಯಸ್ಥರ ವಕ್ತಾರ ತಿಳಿಸಿದ್ದಾರೆ. 

ಈ ಘಟನೆಯನ್ನು ಅನುಸರಿಸಿ ದೊಡ್ಡ ಸಂಖ್ಯೆಯಲ್ಲಿ ಧಾವಿಸಿ ಬಂದ ಪೊಲೀಸ್‌ ಪಡೆಯೊಂದಿಗಿನ ಭೀಕರ ಗುಂಡಿನ ಕಾಳಗದಲ್ಲಿ 15 ತಾಲಿಬಾನ್‌ ಉಗ್ರರು ಹತರಾಗಿ ಇತರ 11 ಮಂದಿ ಉಗ್ರರು ಗಾಯಗೊಂಡರೆಂದು ವಕ್ತಾರ ಝಿಯಾ ದುರಾನಿ ತಿಳಿಸಿದ್ದಾರೆ. 


ಇಂದು ಹೆಚ್ಚು ಓದಿದ್ದು

Trending videos

Back to Top