CONNECT WITH US  

"ಮಿಸ್ಸಿಂಗ್‌ ಬಾಯ್‌'ನ ಹುಡುಕಾಟ: ಭಾವುಕ ಟ್ರೈಲರ್ ವೀಕ್ಷಿಸಿ

"ಕೊಲ್ಲ ಎಂಟರ್‌ಟೈನ್‌ಮೆಂಟ್‌' ಲಾಂಛನದಲ್ಲಿ ಕೊಲ್ಲ ಪ್ರವೀಣ್‌, ಕೊಲ್ಲ ಮಹೇಶ್‌ ಹಾಗೂ ಹೇಮಂತಕುಮಾರ್‌ ರಾಚೇನಹಳ್ಳಿ ನಿರ್ಮಿಸಿರುವ "ಮಿಸ್ಸಿಂಗ್‌ ಬಾಯ್‌' ಚಿತ್ರ ಈ ವಾರ ತೆರೆಗೆ ಬರುತ್ತಿದೆ. ರಘುರಾಮ್‌ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ವಿ. ಹರಿಕೃಷ್ಣ ಸಂಗೀತ, ಜೆ.ಎಸ್‌.ವಾಲಿ ಛಾಯಾಗ್ರಹಣವಿದೆ. ನೈಜ ಘಟನೆ ಆಧಾರಿತ ಎಂದು ಹೇಳಲಾಗುತ್ತಿರುವ ಈ ಚಿತ್ರದಲ್ಲಿ ಗುರುನಂದನ್‌, ಅರ್ಚನಾ ಜಯಕೃಷ್ಣ, ರಂಗಾಯಣ ರಘು, ರವಿಶಂಕರ್‌ ಗೌಡ, ಜೈ ಜಗದೀಶ್‌, ವಿಜಯಲಕ್ಷ್ಮೀ ಸಿಂಗ್‌, ಶೋಭರಾಜ್‌, ಭಾಗೀರಥಿ ಮುಂತಾದ ಕಲಾವಿದರ ತಾರಾಗಣವಿದೆ. ಚಿತ್ರದ ಭಾವುಕ ಟ್ರೈಲರ್ ವೀಕ್ಷಿಸಿ.

Back to Top