CONNECT WITH US  

ಬಿಟೌನ್ ನಲ್ಲಿ “ಸಂಜು” ಟೀಸರ್ ಅಬ್ಬರ…ರಣಬೀರ್ ಕಪೂರ್ ಕಮಾಲ್!

ರಾಜ್ ಕುಮಾರ್ ಹಿರಾನಿ ನಿರ್ದೇಶನದ “ಸಂಜು” ಬಾಲಿವುಡ್ ನ ಬಹುನಿರೀಕ್ಷಿತ ಸಿನಿಮಾವಾಗಿದ್ದು, ನಟ ಸಂಜಯ್ ದತ್ ಲೈಫ್ ಸ್ಟೋರಿ ಬೆಳ್ಳಿತೆರೆಯ ಮೇಲೆ ಬರಲು ಸಿದ್ಧವಾಗಿದೆ. ಮತ್ತೊಂದೆಡೆ ಸಂಜು ಆಗಿ ರಣಬೀರ್ ಕಪೂರ್ ಕಮಾಲ್ ಸೃಷ್ಟಿಸಿದ್ದಾರೆ. ಸಂಜು ಟೀಸರ್ ಬಿಡುಗಡೆಯಾಗಿ 24ಗಂಟೆಯೊಳಗೆ ಒಂದು ಕೋಟಿಗೂ (1,72,45,243) ಜನ ವೀಕ್ಷಿಸಿದ್ದಾರೆ. ಸಿನಿಮಾದಲ್ಲಿ ಸಂಜು ಆಗಿ ರಣಬೀರ್ ಕಪೂರ್, ಪರೇಶ್ ರಾವಲ್, ಮನೀಶಾ ಕೊಯಿರಾಲಾ, ಅನುಷ್ಕಾ ಶರ್ಮಾ, ಸೋನಂ ಕಪೂರ್, ದಿಯಾ ಮಿರ್ಜಾ, ವಿಕಿ ಕೌಶಲ್, ಬೋಮನ್ ಇರಾನಿ ಮುಖ್ಯಭೂಮಿಕೆಯಲ್ಲಿದ್ದಾರೆ.

Back to Top