CONNECT WITH US  

"ಪಕ್ಕಾ ಕಮರ್ಷಿಯಲ್ ಅಂತೆ ವಾಸು': ಬೊಂಬಾಟ್ ಟ್ರೈಲರ್ ವೀಕ್ಷಿಸಿ

ಅನೀಶ್‌ ತೇಜೇಶ್ವರ್‌ ನಿರ್ಮಿಸಿ, ನಾಯಕರಾಗಿ ನಟಿಸುತ್ತಿರುವ "ವಾಸು ನಾನ್‌ ಪಕ್ಕಾ ಕಮರ್ಷಿಯಲ್' ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ನಟ ರಕ್ಷಿತ್‌ ಶೆಟ್ಟಿ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದರು. ಅಲ್ಲದೇ "ಟ್ರೈಲರ್ ತುಂಬಾ ಚೆನ್ನಾಗಿದ್ದು, ಸಿನಿಮಾದ ಬಗೆಗಿನ ನಿರೀಕ್ಷೆ ಹೆಚ್ಚಿಸಿದೆ. ಅನೀಶ್‌ಗೆ ಸ್ಟಾರ್‌ ನಟ ಆಗುವ ಎಲ್ಲಾ ಲಕ್ಷಣಗಳಿವೆ' ಎಂದು ಚಿತ್ರತಂಡಕ್ಕೆ ಶುಭಕೋರಿದರು. "ವಾಸು ನಾನ್‌ ಪಕ್ಕಾ ಕಮರ್ಷಿಯಲ್' ಚಿತ್ರವನ್ನು ಅಜಿತ್‌ ವಾಸನ್‌ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ನಿಶ್ವಿ‌ಕಾ ನಾಯ್ಡು ನಾಯಕಿ. ಚಿತ್ರಕ್ಕೆ ಅಜನೀಶ್‌ ಲೋಕನಾಥ್‌ ಅವರ ಸಂಗೀತವಿದೆ. ಚಿತ್ರದ ಬೊಂಬಾಟ್ ಟ್ರೈಲರ್ ವೀಕ್ಷಿಸಿ.

Back to Top